ಕಲಬುರಗಿ: ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

By Girish Goudar  |  First Published Mar 1, 2024, 7:26 AM IST

ಕೊಲೆಗೂ‌ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಕೊಲೆ ಮಾಡಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 


ಕಲಬುರಗಿ(ಮಾ.01): ಸಂಸದ ಡಾ.ಉಮೇಶ್ ಜಾಧವ್ ಬೆಂಬಲಿಗನನ್ನ ದುಷ್ಕರ್ಮಿಗಳು ಬರ್ಬರ ಹತ್ಯೆಗೈದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ನಡೆದಿದೆ. ಗಿರೀಶ್ ಚಕ್ರ ಎಂಬುವರೇ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡರಾಗಿದ್ದಾರೆ. 

ಹತ್ಯಗೀಡಾದ ಗಿರೀಶ್ ಚಕ್ರ ಅವರನ್ನ ಕಳೆದ ನಾಲ್ಕು ದಿನಗಳ ಹಿಂದೆ ಕಲಬುರಗಿ ಬಿಎಸ್‌ಎನ್‌ಎಲ್‌ ಸಲಹಾ ಸಮಿತಿಗೆ ನಿರ್ದೇಶಕರನ್ನಾಗಿ ಸಂಸದ ಡಾ.ಉಮೇಶ್ ಜಾಧವ್ ಆಯ್ಕೆ ಮಾಡಿದ್ದರು.  ಸಲಹಾ ಸಮಿತಿ‌ ನಿರ್ದೇಶಕ ನೇಮಕವಾದ ಹಿನ್ನಲೆಯಲ್ಲಿ ಪಾರ್ಟಿ ಕೊಡುವುದ್ದಾಗಿ ಜಮೀನಿಗೆ ಕರಿಸಿ ಸ್ನೇಹಿತರೇ ಗಿರೀಶ್ ಚಕ್ರರನ್ನ ಬರ್ಬರ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

Tap to resize

Latest Videos

undefined

ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ

ಕೊಲೆಗೂ‌ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಕೊಲೆ ಮಾಡಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!