ಹಾಸನ; ಕಾರಿನಲ್ಲಿ ಬಂದ ಹಂತಕರು ಒಂಟಿ ಮಹಿಳೆಯ ಕೊಚ್ಚಿ ಹೋದರು!

By Suvarna News  |  First Published Sep 2, 2021, 9:51 PM IST

* ಹಾಸನದಲ್ಲಿ ಮಹಿಳೆಯ ಬರ್ಬರ ಹತ್ಯೆ

* ಕಾರಿನಲ್ಲಿ‌ ಬಂದ ಹಂತಕರಿಂದ ಮಹಿಳೆಯ ಕೊಚ್ಚಿ ಕೊಲೆ

* ಹಾಸನ ತಾಲ್ಲೂಕಿನ ಹನುಮಂತಪುರ ದಲ್ಲಿ ಘಟನೆ

* ಗೌರಮ್ಮ(55)ಕೊಲೆಯಾದ ಮಹಿಳೆ


ಹಾಸನ(ಸೆ. 02) ಕಾರಿನಲ್ಲಿ ಬಂದ ಹಂತಕರು ಹಾಸನದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಿದ್ದಾರೆ. ಮಹಿಳೆಯನ್ನು ಕೊಚ್ಚಿ ಹತ್ಯೆ ಮಾಡಿದ್ದಾರೆ. ಹಾಸನ ತಾಲ್ಲೂಕಿನ ಹನುಮಂತಪುರ ದಲ್ಲಿ ಘಟನೆ ನಡೆದಿದೆ.

ಗೌರಮ್ಮ(55)ಕೊಲೆಯಾದ್ದಾಳೆ. ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆ ಮೇಲೆ ದಾಳಿಯಾಗಿದೆ.  ಗುರುವಾರ ಸಂಜೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕೃತ್ಯ ಎಸಗಿದೆ. 

ಉಡುಪಿ; ಒಳ್ಳೆ ಹುಡುಗ ರಕ್ಕಸನಾಗಿದ್ದ...  8 ವರ್ಷದ ಲವ್.. ಚಾಕು ಮತ್ತು ಜಾತಿ!

Tap to resize

Latest Videos

ಕೆಲ ವರ್ಷಗಳ ಹಿಂದೆ ಕೊಲೆಗೆ ಸುಫಾರಿ ಕೇಸ್ ಒಂದರಲಲ್ಲಿ ಮಹಿಳೆ ಜೈಲು ಸೇರಿದ್ದಳು ಜೈಲು ವಾಸದ ಬಳಿಕ ಬಿಡುಗಡೆ ಆಗಿದ್ದ ಮಹಿಳೆ ಒಂಟಿಯಾಗಿ ವಾಸಮಾಡುತ್ತಿದ್ದರು. 

ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸಗೌಡ , ಎಎಸ್ಪಿ ನಂದಿನಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. 

click me!