ಆಕೆ ಬಾಣಂತನಕ್ಕೆ ತವರಿಗೆ ಬಂದಿದ್ದಳು. ತವರು ಮನೆಯ ಆರೈಕೆಯಿಂದ ಖುಷಿ ಖುಷಿಯಾಗಿದ್ದಳು. ಹೀಗೆ ಖುಷಿಯಾಗಿದ್ದವಳ ಬಾಳಲ್ಲಿ ಬರಸಿಡಿಲು ಬಡಿದಿದೆ. ಸ್ವಂತ ಅಣ್ಣನೇ ಆಕೆಯ ಮಗುವನ್ನು ಅಮಾನವೀಯವಾಗಿ ಕೊಲೆ ಮಾಡಿಬಿಟ್ಟಿದ್ದಾನೆ.
ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ, ಮೈಸೂರು.
ಮೈಸೂರು (ಏ.30): ಆಕೆ ಬಾಣಂತನಕ್ಕೆ ತವರಿಗೆ ಬಂದಿದ್ದಳು. ತವರು ಮನೆಯ ಆರೈಕೆಯಿಂದ ಖುಷಿ ಖುಷಿಯಾಗಿದ್ದಳು. ಹೀಗೆ ಖುಷಿಯಾಗಿದ್ದವಳ ಬಾಳಲ್ಲಿ ಬರಸಿಡಿಲು ಬಡಿದಿದೆ. ಸ್ವಂತ ಅಣ್ಣನೇ ಆಕೆಯ ಮಗುವನ್ನು ಅಮಾನವೀಯವಾಗಿ ಕೊಲೆ ಮಾಡಿಬಿಟ್ಟಿದ್ದಾನೆ. ನೆಲದ ಮೇಲೆ ಕುಳಿತು ಆಟ ಆಡ್ತಾ ಇರೋ ಈ ಮುದ್ದು ಕಂದಮ್ಮ ಇನ್ನು ನೆನಪು ಮಾತ್ರ. 8 ತಿಂಗಳ ಈ ಹೆಣ್ಣು ಮಗವನ್ನು ಸ್ವಂತ ಸೋದರ ಮಾವ ಕೊಲೆ ಮಾಡಿದ್ದಾನೆ. ಆಶ್ಚರ್ಯ ಆದ್ರೂ ಸತ್ಯ. ಅಂದಹಾಗೆ ಈ ಮಗು ಮೈಸೂರಿನ ಕನಕಗಿರಿ ಬಡಾವಣೆಯ ನಿವಾಸಿ ಗಂಗಮ್ಮ ಅವರ ಮಗಳು ರಮ್ಯಳದ್ದು.
undefined
ರಮ್ಯಾಳಿಗೆ ಎರಡು ವರ್ಷದ ಹಿಂದೆ ಮಂಡ್ಯಗೆ ಮದುವೆ ಮಾಡಿಕೊಡಲಾಗಿತ್ತು. 8 ತಿಂಗಳ ಹಿಂದೆ ರಮ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನಂತರ ಬಾಣಂತನಕ್ಕಾಗಿ ತಾಯಿ ಮನೆಗೆ ಬಂದಿದ್ದಳು. ಇದೀಗ ತಾಯಿ ಮನೆಯಲ್ಲಿದ್ದ ಮಗುವನ್ನು ರಮ್ಯ ಸಹೋದರ ರಾಜು ಕೊಲೆ ಮಾಡಿದ್ದಾನೆ. ರಾಜು ಕುಡಿತದ ದಾಸನಾಗಿದ್ದ. ಬೆಳಗ್ಗೆಯಿಂದ ರಾತ್ರಿಯವರೆಗೂ ಕುಡಿದಿರುತ್ತಿದ್ದ. ಆಗಾಗ ತರಕಾರಿ ವ್ಯಾಪಾರ ಮಾಡುತ್ತಿದ್ದ. ಬಹುತೇಕ ಸಮಯ ತನ್ನ ತಾಯಿ ಗಂಗಮ್ಮ ಬಳಿ ಹಣ ಕಿತ್ತುಕೊಂಡು ಕುಡಿಯುತ್ತಿದ್ದ. ಹಣ ಕೊಡದಿದ್ದಾಗ ಗಲಾಟೆ ಮಾಡುತ್ತಿದ್ದ.
Mysuru: ಕಣ್ಣಾ ಮುಚ್ಚಾಲೆ ಆಟವಾಡುವಾಗ ಇಬ್ಬರು ಬಾಲಕಿಯರ ಸಾವು
ಶುಕ್ರವಾರ ಮಧ್ಯಾಹ್ನ ಸಹ ರಾಜು ಪಾನಮತ್ತನಾಗಿ ಮನೆಗೆ ಬಂದಿದ್ದಾನೆ. ತನ್ನ ತಾಯಿ ಬಳಿ ಹಣ ಕೀಳಲು ಬಂದಿದ್ದಾನೆ. ಆದರೆ ಆತ ಬಂದಾಗ ಗಂಗಮ್ಮ ಮನೆಯಲ್ಲಿ ಇರಲಿಲ್ಲ. ಇದ್ದಿದ್ದು ತಂಗಿ ರಮ್ಯ ಹಾಗೂ ಮಗು. ರಾಜು ತಂಗಿಯ ಜೊತೆಯೇ ಜಗಳ ಶುರು ಮಾಡಿದ್ದಾನೆ. ಇದರಿಂದ ಹೆದರಿದ ರಮ್ಯ ಯಾರನ್ನಾದರೂ ಸಹಾಯಕ್ಕೆ ಕರೆಯಲು ಹೊರಗೆ ಬಂದಿದ್ದಾಳೆ ಅಷ್ಟೇ ಪಾಪಿ ರಾಜು ಮನೆಯ ಬಾಗಿಲು ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲ ಮಗುವನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾನೆ.
ಬೊಲೆರೋ ವಾಹನ ಮರಕ್ಕೆ ಡಿಕ್ಕಿ, 6 ಮಂದಿ ಸಾವು, ಮದ್ವೆ ಮುಗಿಸಿ ಮನೆಗೆ ಹೋಗುತ್ತಿದ್ದವರು ಮಸಣಕ್ಕೆ
ಮೊದಲು ಮನೆಯಲ್ಲಿದ್ದ ವಸ್ತುಗಳನ್ನು ಎಸೆದಾಡಿದ್ದಾನೆ. ನಂತರ ಮಗುವನ್ನು ಗೋಡೆಗೆ ಎಸೆದಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ ತೂಕದ ಬಟ್ಟಿನಲ್ಲಿ ಮಗುವಿನ ತಲೆಗೆ ಹೊಡೆದಿದ್ದಾನೆ. ಮಗು ಸ್ಥಳದಲ್ಲಿ ಸಾವನ್ನಪ್ಪಿದೆ. ನಂತರ ರಾಜು ಅಲ್ಲಿಂದ ಓಡಿ ಹೋಗಿದ್ದಾನೆ. ತಲೆ ಮರೆಸಿಕೊಂಡಿದ್ದ ರಾಜುವನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆ ತಾಯಿ ಮನೆಗೆ ಸಂಭ್ರಮದಿಂದ ಬಾಣಂತನಕ್ಕೆ ಬಂದಕೆಗೆ ಅದೇ ತನ್ನ ಮಗುವಿನ ಸಾವಿನ ಮನೆಯಾಗಿದ್ದು ಮಾತ್ರ ದುರಂತವೇ ಸರಿ.