ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ರೈತ ಮುಖಂಡೆ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ಥೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ, ಕಿರುಕುಳ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈ ಆರೋಪವನ್ನು ವಿನಯ್ ಕುಲಕರ್ಣಿ ಅಲ್ಲಗಳೆದಿದ್ದು, ಇದನ್ನು ತಮ್ಮ ವಿರುದ್ಧದ ಷಡ್ಯಂತ್ರ ಎಂದಿದ್ದಾರೆ.
ಬೆಂಗಳೂರು (ಅ.8): ಕೊನೆಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೈತ ಮುಖಂಡ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗದ್ದು, ಕೊನೆಗೂ ಕೊರಗಜ್ಜನ ಮಾತು ನಿಜವಾಗಿದೆ. ರೈತ ಮುಖಂಡ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮೇಲೆ FIR ದಾಖಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಜಯನಗರ ಪೊಲೀಸ್ ಠಾಣೆಯಯೇ ಸಂತ್ರಸ್ಥೆ ದೂರು ನೀಡಿದ್ದರು. ಅತ್ಯಾಚಾರ, ಕಿರುಕಿಳ, ಜೀವ ಬೆದರಿಕೆ, , ವಂಚನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಐಪಸಿ ಸೆಕ್ಷನ್ 506 , 504, ,201, 366, 376, 323, 354 354, , ಹಾಗೂ IT ಆಕ್ಟ್ ನಡಿ ಪ್ರಕರಣ ದಾಖಲಾಗಿದೆ. 34 ವರ್ಷದ ಸಂತ್ರಸ್ಥೆಯನ್ನ ಮೆಡಿಕಲ್ ಚೆಕಪ್ ಗೆ ಪೊಲೀಸರು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
'ಸಮಾಜ ಸೇವಕರಿಯಾಗಿರುವ ನಾನು ಹಲವಾರು ರೈತ ಹೋರಾಟ ಹಾಗೂ ಸಾಮಾಜಿಕ ಹೋರಾಟ ನಡೆಸಿದ್ದೇನೆ. 2022ರಲ್ಲಿ ನನಗೆ ವಿನಯ್ ಕುಲಕರ್ಣಿ ಅವರ ಪರಿಚಯವಾಗಿತ್ತು. ನಮ್ಮ ರೈತರ ಮೂಲಕ ಅವರು ನನ್ನ ನಂಬರ್ ಪಡೆದುಕೊಂಡಿದ್ದರು. ಬೆಂಗಳೂರಿನ ಹೆಬ್ಬಾಳದಲ್ಲಿರುವ ಅವರ ನಿವಾಸದಲ್ಲಿಯೇ ಮೊದಲ ಭೇಟಿಯಾಗಿತ್ತು. ಆ ಬಳಿಕ ಕಾಲ್, ಮೆಸೇಜ್, ವಿಡಿಯೋ ಕಾಲ್ ಮಾಡುತ್ತಿದ್ದರು. ರಾತ್ರಿ 11, 12ರ ನಂತರವೇ ಕಾಲ್ ಮಾಡಿ ಮೊದಲು ಉಭಯಕುಶಲೋಪರಿ ವಿಚಾರಿಸುತ್ತಿದ್ದರು. ಆ ಬಳಿಕ ಇದು ಸರಸ ಸಂಭಾಷಣೆಯಾಗುತ್ತಿತ್ತು. ವಿಡಿಯೋ ಕಾಲ್‌ನಲ್ಲಿ ಸಂಪೂರ್ಣ ಬೆತ್ತಲೆಯಾಗಿ ನನ್ನನ್ನು ನೋಡು ಎನ್ನುತ್ತಿದ್ದರು. ಮಧ್ಯರಾತ್ರಿಯಲ್ಲಿ ಇಬ್ಬರೂ ಒಟ್ಟುಗೆ ಸಿಗೋಣ ಎನ್ನುತ್ತಿದ್ದ. ನಾನು ಬೇಡ ಎಂದರೆ, ರೌಡಿ ಪಡೆಯ ಮೂಲಕ ಕರೆ ಮಾಡಿಸುತ್ತಿದ್ದ. ನಾನು ಇದ್ದಲ್ಲಿಗೆ ರೌಡಿಗಳು ಬರುತ್ತಿದ್ದರು. ಇದೇ ಕಾರಣಕ್ಕೆ ವಿಧಿಯಿಲ್ಲದೆ ಅವರ ಜೊತೆ ಸರಸ ಸಂಭಾಷಣೆಗೆ ಒಪ್ಪಿದ್ದೆ. 2022ರ ಮಾರ್ಚ್-ಏಪ್ರಿಲ್‌ನಲ್ಲಿ ವಿನಯ್ ಕುಲಕರ್ಣಿ ಬೆಳಗಾವಿಗೆ ಹೋಗಿದ್ದಾಗ ನನ್ನನ್ನು ಅಲ್ಲಿನ ಸರ್ಕ್ಯೂಟ್ ಹೌಸ್‌ಗೆ ಬರಲು ಹೇಳಿದ್ದರು. ತುರ್ತು ಕೆಲಸ ಇರಬಹುದು ಎಂದು ನಾನು ಹಾವೇರಿಯಿಂದ ಬೆಳಗಾವಿಗೆ ಕಾರ್‌ನಲ್ಲಿ ಪ್ರಯಾಣ ಮಾಡಿದ್ದೆ. ಬೆಳಗಾವಿ ತಲುಪಿದ ಬಳಿಕ ರಾತ್ರಿ 7.30-8ರ ಸುಮಾರಿಗೆ ರೂಮ್‌ನ ಒಳಗಡೆ ಕರೆಸಿಕೊಂಡು ನನ್ನನ್ನು ತಬ್ಬಿದ್ದರು. 'ನಿನ್ನ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ..' ಎಂದಿದ್ದ. ಈ ವೇಳೆ ಯಾರೋ ಒಬ್ಬರು ಬಂದಿದ್ದರಿಂದ ನನ್ನನ್ನು ಬಿಟ್ಟಿದ್ದ..' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ಬಳಿಕವೂ ಕಾಲ್, ಮೆಸೇಜ್ ಮೂಲಕ ಹಾವಳಿ ನೀಡುತ್ತಿದ್ದ. ವಿಡಿಯೋ ಕಾಲ್ ಮಾಡಿ ಬೆತ್ತಲೆಯಾಗಿ ನಿಲ್ಲುವಂತೆ ಹೇಳುತ್ತಿದ್ದ. ಅಶ್ಲೀಲ ಪದ ಬಳಸುತ್ತಿದ್ದ. ಎದುರು ಹಾಕಿಕೊಂಡರೆ ಸರಿಯಲ್ಲ ಎಂದು ನಾನು ಸುಮ್ಮನಾಗುತ್ತಿದ್ದೆ. ಕೆಲಸದ ವಿಚಾರವಾಗಿ ಅಂದಿನ ಸಿಎಂ ಬೊಮ್ಮಾಯಿ ಅವರ ಭೇಟಿಗಾಗಿ ಬೆಂಗಳೂರಿಗೆ ಬಂದಿದ್ದಾಗ ಈ ವಿಚಾರ ಗೊತ್ತಾಗಿ ಮನೆಯ ಬಳಿ ಬರುವಂತೆ ವಿನಯ್ ಕುಲಕರ್ಣಿ ಹೇಳಿದ್ದ. 2022ರ ಆಗಸ್ಟ್ 24 ರಂದು ಸಂಜೆ 4 ಗಂಟೆಗೆ ಆಟೋದಲ್ಲಿ ಅವರ ಮನೆಗೆ ಹೋಗಿದ್ದೆ. ಬಳಿಕ ಮನೆಯಿಂದ ಕಾರ್‌ನಲ್ಲಿ ಬಂದ ವಿನಯ್ ಕುಲಕರ್ಣಿ ನನಗೆ ಕುಳಿತುಕೊಳ್ಳುವಂತೆ ಹೇಳಿ, ದೇವನಹಳ್ಳಿ ಸಮೀಪದ ಐವಿಸಿ ರೋಡ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಕತ್ತಲೆ ಆದ ನಂತರ ಹಿಂದಿನ ಸೀಟ್‌ನಲ್ಲಿ ನನ್ನ ಹತ್ತಿರ ಕುಳಿತು ಅಸಭ್ಯ ವರ್ತನೆ ತೋರಿದ್ದಲ್ಲದೆ, ನನ್ನ ಮೇಲೆ ಅತ್ಯಾಚಾರ, ದಬ್ಬಾಳಿಕೆ ಮಾಡಿದ್ದರು. ಈ ವಿಚಾರ ನಿನ್ನಲ್ಲೇ ಇರಲಿ, ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಹೇಳಿದ್ದರು. ಆ ಬಳಿಕ ಅದೇ ವರ್ಷದ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದೂ ತಮ್ಮ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
undefined
ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ
ನಿಜವಾಯ್ತು ಕೊರಗಜ್ಜನ ಭವಿಷ್ಯ: ಕಳೆದ ಜುಲೈನಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ವಿನಯ್ ಕುಲಕರ್ಣಿ ತುಳುನಾಡಿನ ಆರಾಧ್ಯದೈವ ಕೊರಗಜ್ಜನಿಗೆ ಹರಕೆಯ ಕೋಲ ಸಲ್ಲಿಸಲು ಮಂಗಳೂರಿಗೆ ಹೋಗಿದ್ದರು. ಈ ವೇಳೆ ಕೊರಗಜ್ಜ ಮೂರು ವರ್ಷಗಳ ಕಾಲ ತುಂಬಾ ಸೂಕ್ಷ್ಮವಾಗಿ ಇರಬೇಕು. ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಿಸಿ ಒಳ್ಳೆಯದು ಮಾಡುತ್ತೇನೆ ಎಂದು ದೈವ ಸೂಚನೆ ನೀಡಿತ್ತು. ಆದರೆ, ಮೂರು ವರ್ಷದ ಒಳಗಾಗಿ ಹೆಣ್ಣಿನ ಕಾರಣದಿಂದ ವಿನಯ್ ಕುಲಕರ್ಣಿ ಮೇಲೆ ಈಗ ಎಫ್‌ಐಆರ್ ದಾಖಲಾಗಿದೆ.
ರಾಜ್ಯ ವನ್ಯಜೀವಿ ಮಂಡಳಿಗೆ ಎಂಬಿಪಾ ಪುತ್ರ, ವಿನಯ್ ಪುತ್ರಿ ಸದಸ್ಯರಾಗಿ ನೇಮಕ, ಅದಕ್ಕೆ ಕಾರಣ ಇಲ್ಲಿದೆ!
ತನ್ನ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿನಯ್ ಕುಲಕರ್ಣಿ, ನಾನು ಆಕೆಯನ್ನು ಟಚ್ ಕೂಡ ಮಾಡಿಲ್ಲ. ಮಹಿಳೆಯನ್ನ ಟಚ್ ಮಾಡಿದ್ರೆ ನನ್ನ ತಾಯಿಯನ್ನು ಟಚ್ ಮಾಡಿದಂತೆ. ಇದೆಲ್ಲಾ ನನ್ನ ವಿರುದ್ಧದ ಷಡ್ಯಂತ್ರ ಎಂದು ಹೇಳಿದ್ದಾರೆ.