ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೂರ್ಲಬಿಯಲ್ಲಿ ನಡೆದಿದೆ. ಬೆಳಗ್ಗೆಯಷ್ಟೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಖುಷಿಯಲ್ಲಿದ್ದ ಬಾಲಕಿ. ಪಾಸಾದ ಖುಷಿ ಮಾಸುವ ಮುನ್ನವೇ ಹತ್ಯೆ ಮಾಡಿದ ಪಾಪಿ.
ಕೊಡಗು (ಮೇ.10): ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಸೂರ್ಲಬಿಯಲ್ಲಿ ನಡೆದಿದೆ.
ಬೆಳಗ್ಗೆಯಷ್ಟೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಖುಷಿಯಲ್ಲಿದ್ದ ಬಾಲಕಿ. ಪಾಸಾದ ಖುಷಿ ಮಾಸುವ ಮುನ್ನವೇ ಹತ್ಯೆ ಮಾಡಿದ ಪಾಪಿ. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವದಕ್ಕೆ ಮುಂದಾಗಿದ್ದ ಪೋಷಕರು. ಅಪ್ರಾಪ್ತ ಬಾಲಕಿಯನ್ನ ವಿವಾಹ ಮಾಡುವ ಬಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆ ಯುವಕನೊಂದಿಗೆ ಎಂಗೇಜ್ಮೆಂಟ್ ಮಾಡುವ ವೇಳೆ ಸೋಮವಾರಪೇಟೆ ಪೊಲೀಸರು ತಡೆಯೊಡ್ಡಿದ್ದರು. ಬಾಲ್ಯವಿವಾಹ ಅಪರಾಧ ಈ ಹಿನ್ನೆಲೆ ಬಾಲಕಿ ವಯಸ್ಕಳಾಗುವವರೆಗೆ ಮದುವೆ ಮಾಡುವಂತಿಲ್ಲ ಎಂದು ನಿಶ್ಚಿತಾರ್ಥ ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಿ ಬಂದು ಅಪ್ರಾಪ್ತ ಬಾಲಕಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಮದುವೆಯಾಗಬೇಕಿದ್ದ ಯುವಕ!
ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SSLC ಫೇಲ್ ಆಗಿದ್ದಕ್ಕೇ ಮತ್ತಿಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ!