ಹುಬ್ಬಳ್ಳಿಯಲ್ಲಿ 5 ರೂ. ಕೇಳಿದ ಬಾಲಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಿಬ್ಬಳ್ಳಿ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿ (ಏ.02): ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆಯುತ್ತವೆ ಎಂಬುದನ್ನು ಕೇಳಿದ್ದೇವೆ. ಅದರಲ್ಲೂ ಕೆಲವು ಕ್ಷುಲ್ಲಕ ಕಾರಣದ ಬಗ್ಗೆ ಕೊಲೆ ಆಗಿರುವುದನ್ನು ತಿಳಿದುಕೊಂಡಿರುತ್ತೇವೆ. ಆದರೆ, ಹುಬ್ಬಳ್ಳಿಯಲ್ಲಿ ನಡೆದಿರುವ ಕೊಲೆಗೆ ಕೇವಲ 5 ರೂ. ಕಾರಣ ಎಂದರೆ ನಂಬುತ್ತೀರಾ.? ಹೌದು ನಂಬಲೇಬೇಕು. ಕೇವಲ 5 ರೂ. ಕೊಡು ಎಂದು ಕೇಳಿದ್ದ ಬಾಲಕನನ್ನು ಇಲ್ಲೊಬ್ಬ ಅಸಾಮಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಹುಬ್ಬಳ್ಳಿಯಲ್ಲಿ ನಡೆದ ಬಾಲಕನ ಬೀಕರ ಕೊಲೆ ಪ್ರಕರಣವನ್ನು ಬೇಧಿಸಿದ ಬೆಂಡಿಗೇರಿ ಠಾಣೆಯ ಪೊಲೀಸರೇ ಕೆಲ ಕ್ಷಣ ದಂಗಾಗಿದ್ದಾರೆ. ಮಾ.30ರಂದು ಹುಬ್ಬಳ್ಳಿ ನಗರದಲ್ಲಿ ನಡೆದ ಬಾಲಕನ ಭೀಕರೆ ಕೊಲೆಯ ಘಟನೆಗೆ ಕೇವಲ 5 ರೂ. ಕಾರಣವಾಯಿತಾ ಎಂದು ಹತಾಶೆಯನ್ನೂ ವ್ಯಕ್ತಪಡಿಸಿದ್ದಾರೆ. ಕೊಲೆ ಆರೋಪಿಯ ಬಳಿ ಹಣ ಬಾಲಕ ಹಣ ಕೇಳುವ ಬದಲು ಬೇರೆ ಯಾರನ್ನಾದರೂ ಕೇಳಿದ್ದರೂ ಕೊಟ್ಟು ಕಳುಹಿಸುತ್ತಿದ್ದರು. ಆದರೆ, ಐದು ರೂಪಾಯಿಗಾಗಿ ಕೊಲೆಯೇ ನಡೆದುಹೋಗಿದೆ. ಇನ್ನು ಬಾಲಕನ ತಂದೆ ತಾಯಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ನಿನ್ನ ತೂಕದಷ್ಟೇ 5 ರೂ. ನಾಣ್ಯವನ್ನು ಕೊಡ್ತೇವೆ ನನ್ನ ಮಗನನ್ನು ಬದುಕಿಸಿಕೊಡು ಎಂದು ಆರೋಪಿಯ ಮುಂದೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
10 ದಿನದ ಹಿಂದೆ ಮದುವೆಯಾಗಿದ್ದ ನವಜೋಡಿ ಸಾವು: ಮನೆ ದೇವರಿಗೆ ಹೋದವರು ಮರಳಿ ಬರಲೇ ಇಲ್ಲ
ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ಆರೋಪಿ: ಕಳೆದ ಮಾ.30 ರಂದು ನಡೆದ ನದೀಂನ (8) ಕೊಲೆ ನಡೆದಿತ್ತು. ಬಾಲಕ ಕೊಲೆ ಆಗುವುದಕ್ಕೂ ಮುನ್ನ ಯಾರೊಂದಿಗೆ ಆಟವಾಡಲು ಹೋಗಿದ್ದ, ಯಾರ ಬಳಿಯಿದ್ದನು ಎಂಬುದನ್ನು ಪೊಲೀಸರು ತನಿಖೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರ ಮಾಹಿತಿ ಹಾಗೂ ಸಿಸಿಟಿವಿ ಫೂಟೇಜ್‌ನಲ್ಲಿ ಪರಿಶೀಲನೆ ಮಾಡಿದಾಗ ಬಾಲಕ ಕೊನೆಯದಾಗಿ ಬಳ್ಳಾರಿ ರವಿಯೊಂದಿಗೆ ಇರುವುದು ತಿಳಿದಿದೆ. ಕೂಡಲೇ ರವಿ ಬಳ್ಳಾರಿಯನ್ನು ಪೊಲೀಸರು 48 ಗಂಟೆಗಳಲ್ಲಿ ಬಂಧಿಸಿ ಹುಬ್ಬಳ್ಳಿ ಠಾಣೆಗೆ ಕರೆದೊಯ್ದಿದ್ದಾರೆ. ಮೊದಲು ತಾನಗೂ ಕೊಲೆಗೂ ಸಂಬಂಧವಿಲ್ಲ ಎಂದಿದ್ದ ಆರೋಪಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದ್ದಾಗ 5 ರೂ. ಕೇಳಿದ್ದಕ್ಕಾಗಿ ಕೋಪಗೊಂಡು ಕೊಲೆ ಮಾಡಿದ್ದಾಗಿ ಸ್ವತಃ ರವಿ ಒಪ್ಪಿಕೊಂಡಿದ್ದಾನೆ.
ಕೊಲೆ ಘಟನೆಯ ವಿವರ ಹೀಗಿದೆ: ಬಾಲಕನ ಕೊಲೆ ಆರೋಪಿ ರವಿಗೆ ಬಾಲಕ ನದೀಂ ಪರಿಚಯಸ್ಥನಾಗಿರತ್ತಾನೆ. ಅದೇ ಕಾರಣಕ್ಕೆ ಬಾಲಕ ರವಿ ಬಳಿ 5 ರೂಪಾಯಿ ಹಣ ಕೇಳಿರುತ್ತಾನೆ. ಐದು ರೂಪಾಯಿ ಕೊಟ್ಟ ಬಳಿಕ ಮತ್ತೆ ಐದು ರೂಪಾಯಿ ಕೇಳಿದ್ದಕ್ಕೆ ರವಿ ಕೋಪಗೊಂಡಿದ್ದಾನೆ. ಮತ್ತೆ, ಮತ್ತೆ 5 ರೂ. ಕೊಡುವಂತೆ ಪೀಡಿಸಿದಾಗ ಉದ್ರಿಕ್ತಗೊಂಡ ರವಿ ಬಾಲಕ ನದೀಂ ಕೆನ್ನೆಗೆ ಹೊಡೆದಿದ್ದಾನೆ. ಇದರಿಂದ ಬಾಲಕ ಮೂರ್ಚೆ ಹೋಗಿದ್ದನು. ಇನ್ನು ಮೂರ್ಚೆ ಹೋದಾಗ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೀವ ಉಳಿಸಲು ಪ್ರಯತ್ನ ಮಾಡದೇ, ಬಾಲಕನನ್ನು ಎತ್ತಿಕೊಂಡು ಹೋಗಿ ಪಾಳು ಬಿದ್ದ ಜಾಗದಲ್ಲಿ ಮಲಗಿಸಿದ್ದಾನೆ. ನಂತರ ಬಾಲಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಯನ್ನು ಮಾಡಿದ್ದಾನೆ. ನಂತರ ಅನುಮಾನ ಬರಬಾರದು ಎಂದು ಬಾಲಕನ ಬಟ್ಟೆ ಬಿಚ್ಚಿ ಅಲ್ಲಿಂದ ಕಿಲ್ಲರ್ ರವಿ ಪರಾರಿ ಆಗಿದ್ದಾನೆ.
Hubballi Crime News: ಆಟವಾಡಲು ಹೋಗಿದ್ದ ಬಾಲಕನ ಭೀಕರ ಹತ್ಯೆ!
ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಕುಟುಂಬಸ್ಥರ ಆಗ್ರಹ: ಇನ್ನು ಶಾಲೆಯಲ್ಲಿ ಬೇಸಿಗೆಯ ರಜೆ ಇರೋ ಕಾರಣ ಆರೋಪಿ ರವಿ ಬಳ್ಳಾರಿಯಿಂದ ಹುಬ್ಬಳ್ಳಿಗೆ ಅಜ್ಜಿ ಮನೆಗೆ ಬಂದಿದ್ದನು. ಹುಬ್ಬಳ್ಳಿಯ ಶ್ರೀನಗರದಲ್ಲಿರೋ ಅಜ್ಜಿ ಮನೆಯಲ್ಲಿ ವಾಸವಿದ್ದು, ಅಲ್ಲಿನ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದನು. ಆದರೆ, ಈಗ ಬಾಲಕನನ್ನು ಕೊಲೆ ಮಾಡಿ ಪರಾರಿ ಆಗಿದ್ದನು. ಇನ್ನು ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ. ಆರೋಪಿಯ ಬಂಧನ ವಿಷಯ ತಿಳಿಯುತ್ತಲೇ ಮೃತ ಬಾಲಕ ನದೀಂ ಕುಟುಂಬಸ್ಥರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.