ಹಂತಕನ ಕುಟುಂಬದಲ್ಲಿ ಮೇಲಿಂದ ಮೇಲೆ ಸಾವುಗಳ ಸಂಭವಿಸಿದ್ವು. ಆ ಸಾವುಗಳಿಗೆ ಇದೇ ಅರ್ಚಕ ದೇವೇಂದ್ರಪ್ಪ ಹೊನ್ನಳ್ಳಿ ಕಾರಣ ಎಂದು ನಂಬಿದ್ದನಂತೆ. ದೇವೇಂದ್ರಪ್ಪ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ದ, ಅದೇ ಕಾರಣಕ್ಕೆ ತನ್ನ ಕುಟುಂಬದಲ್ಲಿ ತೊಂದರೆ ಆಗುತ್ತಿದೆ ಎಂದು ಹಂತಕ ನಂಬಿ ಅರ್ಚಕನನ್ನ ಕೊಲೆ ಮಾಡಿದ ಆರೋಪಿ.
ಹುಬ್ಬಳ್ಳಿ(ಜು.23): ದೇವಸ್ಥಾನ ಅರ್ಚಕ ದೇವೇಂದ್ರಪ್ಪ ಹೊನ್ನಳ್ಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ವೈಷ್ಣವದೇವಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪನನ್ನ ಭಾನುವಾರ ಕೊಲೆ ಮಾಡಲಾಗಿತ್ತು.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು, ಹಂತಕ ಸಂತೋಷನನ್ನು ನವನಗರ ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನ ಹಿಂಭಾಗದಲ್ಲಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪನನ್ನ ಚಾಕುವಿನಿಂದ ಇರಿದು ಆರೋಪಿ ಹತ್ಯೆ ಮಾಡಿದ್ದನು.
ಹುಬ್ಬಳ್ಳಿ: ದೇವಸ್ಥಾನದ ಪೂಜಾರಿ ಕೊಲೆಗೈದು ದುಷ್ಕರ್ಮಿಗಳು ಪರಾರಿ
ಆರೋಪಿ ಸಂತೋಷ ಈ ಹಿಂದೆಯೂ ಎರಡು ವರ್ಷಗಳ ಹತ್ಯೆಗೆ ಯತ್ನಿಸಿದ್ದನಂತೆ. ಬಳಿಕ ಎರಡು ವರ್ಷ ಸುಮ್ಮನಾಗಿದ್ದ. ಭಾನುವಾರ ಸಂಜೆ ದೇವೇಂದ್ರಪ್ಪ ಹೊನ್ನಳ್ಳಿಯನ್ನ ಸಂತೋಷ ಹತ್ಯೆಗೈದು ಪರಾರಿಯಾಗಿದ್ದ. ಪೊಲೀಸರ ಮುಂದೆ ಅರ್ಚಕ ದೇವೇಂದ್ರಪ್ಪ ಕೊಲೆಯ ಕಾರಣವನ್ನ ಹಂತಕ ಸಂತೋಷ ಬಿಚ್ಚಿಟ್ಟಿದ್ದಾನೆ. ಹಂತಕನ ಕುಟುಂಬದಲ್ಲಿ ಮೇಲಿಂದ ಮೇಲೆ ಸಾವುಗಳ ಸಂಭವಿಸಿದ್ವು. ಆ ಸಾವುಗಳಿಗೆ ಇದೇ ಅರ್ಚಕ ದೇವೇಂದ್ರಪ್ಪ ಹೊನ್ನಳ್ಳಿ ಕಾರಣ ಎಂದು ನಂಬಿದ್ದನಂತೆ. ದೇವೇಂದ್ರಪ್ಪ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ದ, ಅದೇ ಕಾರಣಕ್ಕೆ ತನ್ನ ಕುಟುಂಬದಲ್ಲಿ ತೊಂದರೆ ಆಗುತ್ತಿದೆ ಎಂದು ಹಂತಕ ನಂಬಿದ್ದನಂತೆ. ಕೊಲೆಗೆ ಎರಡು ಮೂರು ವರ್ಷಗಳಿಂದ ಪ್ಲಾನ್ ಮಾಡಿಕೊಂಡಿದ್ದನು ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.