ಮೊಬೈಲ್ ಕೊಟ್ಟ ಸಿಗ್ನಲ್: ನಾಪತ್ತೆಯಾಗಿದ್ದ ಹೆಲ್ತ್‌ ಇನ್ಸ್‌ಪೆಕ್ಟರ್‌ ಮೃತದೇಹ ಪತ್ತೆ

By Suvarna NewsFirst Published Feb 17, 2020, 5:21 PM IST
Highlights

ಮೊಬೈಲ್ ಕೊಟ್ಟ ಸಿಗ್ನಲ್‌ನಿಂದ ಕಳೆದ ಮೂರು ದಿನಗಳಿಂದ ನಾಪತ್ತೆಯಾಗದ್ದ ಹೆಲ್ತ್ ಇನ್ಸ್‌ಪೆಕ್ಟರ್ ಮೃತದೇಹ ಬೆಟ್ಟದಲ್ಲಿ ಪತ್ತೆಯಾಗಿದೆ. ಘಟನೆ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಫೆ.17): ಆರೋಗ್ಯ ನಿರೀಕ್ಷಕರೊಬ್ಬರು (ಹೆಲ್ತ್ ಇನ್ಸ್‌ಪೆಕ್ಟರ್) ಗುಡ್ಡದ ಮೇಲಿಂದ ಜಿಗಿದು  ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ತಾಲೂಕಿನ ಎಸ್ ಆರ್ ಎಸ್ ಬೆಟ್ಟದಲ್ಲಿ ನಡೆದಿದೆ.

ಬೆಂಗಳೂರಿನ ರುಕ್ಮಿಣಿ ನಗರದ ಪ್ರಶಾಂತ್(38)ಆತ್ಮಹತ್ಯೆ ಶರಣಾದ ಆರೋಗ್ಯ ನಿರೀಕ್ಷಕರು. ಮೃತರು ಬೆಂಗಳೂರಿನ ಯಲಹಂಕದಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಅಮ್ಮ ಮಿಸ್ ಯು, ಬದುಕೋಕೆ ಆಗ್ತಿಲ್ಲ' ಎಂದು ನೇಣಿಗೆ ಶರಣಾದ ಗಾಯಕಿ

ಕಳೆದ  3 ದಿನಗಳಿಂದ ಮನೆಯಿಂದ ತೆರಳಿದ್ದ ಪ್ರಶಾಂತ್ ಅವರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 

ಮೊಬೈಲ್ ಸಿಗ್ನಲ್‌ನಿಂದ ಪತ್ತೆ
ಪ್ರಕರಣದ  ಜಾಡು ಹಿಡಿದ ಪೊಲೀಸರು, ಮೃತ ಪ್ರಶಾಂತ್ ಅವರ ಮೊಬೈಲ್ ಟ್ರ್ಯಾಕ್ ಮಾಡಿದ್ದರು. ನಂತರ  ರಾಮನಗರದ ಎಸ್ ಆರ್ ಎಸ್ ಬೆಟ್ಟದಲ್ಲಿ ಮೊಬೈಲ್ ಸಿಗ್ನಲ್ ಪತ್ತೆಯಾದ್ದು, ತಕ್ಷಣವೇ  ಪೊಲೀಸರು ಸ್ಥಳ ಪರಿಶೀಲಿಸಿದಾಗ ಪ್ರಶಾಂತ್ ಬೈಕ್ ಪತ್ತೆಯಾಗಿದೆ.

ನಂತರ ಪೊಲೀಸರು ಬೆಟ್ಟದ ಸುತ್ತ ಮುತ್ತಲೂ ಪರಿಶೀಲಿಸಿದಾಗ, ಪ್ರಶಾಂತ್ ಅವರ ಶವ  ಪತ್ತೆಯಾಗಿದೆ. ಆದ್ರೆ, ಪ್ರಶಾಂತ್ ಅವರ ಆತ್ಮಹತ್ಯೆ ಗೆ ನಿಖರ ಕಾರಣ  ತಿಳಿದು ಬಂದಿಲ್ಲ.

ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

click me!