ಹಿಂದೂ ಯುವತಿಯರನ್ನ ಸಿಕ್ಕಲ್ಲಿ ಅತ್ಯಾಚಾರಗೈದು ಸುಟ್ಟಾಕಿ ಎಂದಿದ್ದ ಆರೋಪಿ ಅರೆಸ್ಟ್

By Web Desk  |  First Published Dec 1, 2019, 6:57 PM IST

ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕಾರೆಡ್ಡಿ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿದೆ. ಈ ಪ್ರಕರಣದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಕಿಡಿಗೇಡಿಯೊಬ್ಬ, ಹಿಂದೂ ಯುವತಿಯರನ್ನ ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟಾಕಿ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.


ಹಾವೇರಿ, [ಡಿ.01]: ಹಿಂದೂ ಯುವತಿಯರನ್ನ ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟಾಕಿ ಅಂತ ಫೇಸ್ಬುಕ್ ಪೋಸ್ಟ್ ಮಾಡಿದ್ದವನನ್ನು ಬಂಧಿಸುವಲ್ಲಿ ಹಾವೇರಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೊಣತಿ ಸಲೀಂ ಅಹಮ್ಮದ್ ಬಂಧಿತ ಆರೋಪಿ. ತೆಲಂಗಾಣದಲ್ಲಿ ಮೊನ್ನೇ ಅಷ್ಟೇ ಪಶುವೈದ್ಯೆ ಪ್ರಿಯಾಂಕಾರೆಡ್ಡಿ ಅವರನ್ನು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬಳಿಕ ಸುಟ್ಟುಹಾಕಿದ್ದರು. ಈ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಿ ಇಲ್ಲ ಜೀವಂತವಾಗಿ ಸುಡಬೇಕೆಂಬ ಆಕ್ರೋಶಗಳು ಸಾಮಾಜಿಕ ಜಾಲತಣಗಳಲ್ಲಿ ವ್ಯಕ್ತವಾಗುತ್ತಿವೆ.

Tap to resize

Latest Videos

ರೇಪ್ ಪ್ರಕರಣಕ್ಕೆ ಧರ್ಮದ ಬಣ್ಣ ಬಳಿದವರಿಗೆ ಕಠಿಣ ಶಿಕ್ಷೆ: ಹೈದರಾಬಾದ್ ಡಿಸಿಪಿ

ಇದರ ಮಧ್ಯೆ ಸಲೀಂ, ಹಿಂದೂ ಯುವತಿಯರನ್ನ ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟಾಕಿ ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದನು. ಇದರಿಂದ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.ಅಷ್ಟೇ ಅಲ್ಲದೇ ಸಲೀಂ ಫೇಸ್ಬುಕ್  ಪೋಸ್ಟ್ ಅನ್ನು ಶೇರ್ ಮಾಡಿ ಆರೋಪಿ ಪತ್ತೆಗೆ ಮನವಿ ಮಾಡಿದ್ದವು.

ಕೊನೆಗೆ ಸಲೀಂ ಅಹಮ್ಮದ್ ಎನ್ನುವ ಫೇಸ್ಬುಕ್ ಖಾತೆಯನ್ನು ಹಾವೇರಿ ಪೊಲೀಸರು ಜಾಲಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪೋಸ್ಟ್ ಹರಿಬಿಟ್ಟ ಕೆಲವೇ ಗಂಟೆಗಳಲ್ಲಿ ಆರೋಪಿ ಸಲೀಂ ಅಹಮದ್ ನನ್ನು ಹಂಸಭಾವಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ತೆಲಂಗಾಣದ ಮಹಿಳಾ ಪಶುವೈದ್ಯಾಧಿಕಾರಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಒಂದು ಸಮುದಾಯಕ್ಕೆ ತಳುಕು ಹಾಕುವ ಮೂಲಕ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆ ಕದಡುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಈತ ರೀತಿಯಾಗಿ ಪೋಸ್ಟ್ ಮಾಡಿರುವ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

click me!