Latest Videos

Big breaking: ಹಾಸನದಲ್ಲಿ ಹಾಡಹಗಲೇ ಗುಂಡು ಹಾರಿಸಿ ಉದ್ಯಮಿಗಳ ಸಾವು; ಒಂದು ಕೊಲೆ, ಮತ್ತೊಂದು ಆತ್ಮಹತ್ಯೆ

By Sathish Kumar KHFirst Published Jun 20, 2024, 2:36 PM IST
Highlights

ಹಾಸನದಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವೆ ನಡೆದ ಜಗಳದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಶೂಟ್ ಮಾಡಿ ಕೊಲೆಗೈದು, ನಂತರ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಾಸನ (ಜೂ.20): ಹಾಸನದಲ್ಲಿ ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವೆ ನಡೆದ ಜಗಳದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಶೂಟ್ ಮಾಡಿ ಕೊಲೆಗೈದು, ನಂತರ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಹಾಸನ ನಗರದ ಹೊಯ್ಸಳ‌ನಗರ ಬಡಾವಣೆಯಲ್ಲಿ ನಡೆದಿದೆ. ಕೇವಲ 30 ನಿಮಿಷಗಳ ಹಿಂದಷ್ಟೇ ಈ ಘಟನೆ ನಡೆದಿದೆ. ಇನ್ನು ಅಪರಿಚಿತರು ಬಂದು ಖಾಲಿ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಸುಮಾರು 40 ನಿಮಿಷಗಳ ಕಾಲ ಮಾತನಾಡಿದ್ದಾನೆ. ನಂತರ, ಏಕಾಏಕಿ ಕಾರಿನ ಬಳಿ ಬಂದೂಕಿನಿಂದ ಫೈರಿಂಗ್ ಮಾಡಿದ ಸದ್ದು ಕೇಳಿಬಂದಿದೆ. ಈ ಶಬ್ದವನ್ನು ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ. ಹಾಡಹಗಲೇ ಬಂದೂಕಿನಿ ಶಬ್ದ ಕೇಳಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಸನದ ಕೆ.ಆರ್. ಪುರಂ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಇನ್ನು ಹತ್ಯೆ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್ ಸೇರ್ಪಡೆ ಮಾಡಿದ ಪೊಲೀಸರು; ಜೈಲೂಟ ಫಿಕ್ಸ್!

ಮೃತರನ್ನು ಬೆಂಗಳೂರಿನ ಆಸಿಫ್ ಹಾಗೂ ಹಾಸನದ ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು, ಹಾಸನದಲ್ಲಿ ಸೈಟ್ ನೋಡಲು ಬಂದು ಕಾರಿನಲ್ಲಿ ಕುಳಿತು ಮಾತನಾಡಿದ್ದಾರೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಬಂದೂಕು ಹೊಂದಿದ್ದ ವ್ಯಕ್ತಿ ಮತ್ತೊಬ್ಬನ ತಲೆಗೆ ಬಂದೂಕು ಇಟ್ಟು ಗುಂಡು ಹಾರಿಸಿದ್ದಾನೆ. ನಂತರ, ತಾನು ಅಲ್ಲಿಂದ ಓಡಿ ಹೋಗದೇ ಕಾರಿನೊಳಗೆ ಕುಳಿತುಕೊಂಡು ತಾನೂ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

click me!