ಅಪ್ರಾಪ್ತೆ ಮೇಲೆ 15 ಜನರಿಂದ ಅತ್ಯಾಚಾರ, ಶೃಂಗೇರಿಯಲ್ಲಿ ಪೈಶಾಚಿಕ ಕೃತ್ಯ!

By Kannadaprabha News  |  First Published Feb 1, 2021, 7:17 AM IST

ಅಪ್ರಾಪ್ತೆ ಅತ್ಯಾ​ಚಾ​ರ: 15ಕ್ಕೂ ಹೆಚ್ಚು ಮಂದಿ ಮೇಲೆ ಕೇಸ್‌| ಪೋಕ್ಸೋ ಕಾಯ್ದೆ ಅಡಿ ದೂರು ದಾಖಲು| 6 ಆರೋಪಿಗಳ ಬಂಧನ| ಬಾಲಕಿ ಮೇಲೆ ಅತ್ಯಾ​ಚಾ​ರಕ್ಕೆ ಸಹ​ಕಾರ ನೀಡಿದ ಆರೋಪ


 ಚಿಕ್ಕಮಗಳೂರು(ಫೆ.01): ಜಲ್ಲಿ ಕ್ರಷರ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಿಕ್ಕಮ್ಮನೊಂದಿಗೆ ವಾಸವಾಗಿದ್ದ ಹದಿ​ನೈ​ದರ ಹರೆ​ಯದ ಬಾಲಕಿ ಮೇಲೆ ನಾಲ್ಕು ತಿಂಗಳಿಂದ ನಿಂತರ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ 15ಕ್ಕೂ ಹೆಚ್ಚು ಮಂದಿ ಮೇಲೆ ಪೋಕ್ಸೋ ಕಾಯ್ದೆ ಅಡಿ ಕೇಸ್‌ ದಾಖಲಾಗಿದೆ. ಪ್ರಕ​ರ​ಣಕ್ಕೆ ಸಂಬಂಧಿಸಿ ಬಾಲಕಿಯ ಚಿಕ್ಕಮ್ಮ ಗೀತಾ ಸೇರಿ ಒಟ್ಟು 6 ಮಂದಿಯನ್ನು ಭಾನುವಾರ ಬಂಧಿಸಲಾಗಿದೆ.

ಬಾಲಕಿಯು ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾವಿಯವಳಾಗಿದ್ದು, 7ನೇ ತರಗತಿಯಲ್ಲಿ ಓದು​ತ್ತಿ​ರು​ವಾ​ಗಲೇ ತಾಯಿ​ಯನ್ನು ಕಳೆ​ದು​ಕೊಂಡಿ​ದ್ದ​ಳು. ಹೀಗಾಗಿ ಶೃಂಗೇ​ರಿಯ ಜಲ್ಲಿ ಕ್ರಷ​ರ್‌​ನಲ್ಲಿ ಕೆಲಸ ಮಾಡು​ತ್ತಿದ್ದ ಚಿಕ್ಕಮ್ಮ ಆಕೆಯನ್ನು ಓದಿ​ಸು​ವು​ದಾಗಿ ತನ್ನೊಟ್ಟಿಗೆ ಇಟ್ಟುಕೊಂಡಿದ್ದಳು. ಸದ್ಯ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದಳು.

Tap to resize

Latest Videos

ಸೆಪ್ಟಂಬರ್‌ನಲ್ಲಿ ಚಿಕ್ಕಮ್ಮನಿಗೆ ಆರೋಗ್ಯ ಸರಿ ಇಲ್ಲದಿದ್ದರಿಂದ ಬಾಲಕಿ ಜಲ್ಲಿ ಕ್ರಷರ್‌ನ ಕೆಲಸಕ್ಕೆ ಹೋಗಿದ್ದಳು. ಆ ವೇಳೆ ಚಾಲಕ ಕೆಲಸ ಮಾಡುತ್ತಿದ್ದ ಗಿರೀಶ್‌ ಪರಿಚಯವಾಗಿದ್ದು, ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ನಂತರದ ದಿನಗಳಲ್ಲಿ ಗಿರೀಶ್‌ ತನ್ನ ಸ್ನೇಹಿತ ಅಭಿಗೆ ಈಕೆ​ಯ​ನ್ನು ಪರಿಚಯ ಮಾಡಿದ್ದ. ಆತ ಮತ್ತು ಆತನ ಸ್ನೇಹಿತರೂ ಈಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

30ಕ್ಕೂ ಹೆಚ್ಚು ಮಂದಿ​ಯಿಂದ ಕೃತ್ಯ: ಸದ್ಯ 15ಕ್ಕೂ ಹೆಚ್ಚು ಮಂದಿ ಮೇಲೆ ಅತ್ಯಾ​ಚಾರ ಪ್ರಕ​ರಣ ಹಾಗೂ ಬಾಲಕಿ ಚಿಕ್ಕಮ್ಮ ಸೇರಿ ಇಬ್ಬರ ಮೇಲೆ ಅತ್ಯಾ​ಚಾ​ರಕ್ಕೆ ಸಹ​ಕಾರ ನೀಡಿದ ಪ್ರಕ​ರ​ಣ ದಾಖ​ಲಾ​ಗಿದೆ. ಆದರೆ, ಬಾಲಕಿ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಸುಮಾರು 30 ಮಂದಿ ಅತ್ಯಾಚಾರ ನಡೆಸಿದ್ದಾರೆ ಎನ್ನ​ಲಾ​ಗಿದೆ. ಬಾಲಕಿಯನ್ನು ಲೈಂಗಿ​ಕ​ವಾಗಿ ಬಳ​ಸಿ​ಕೊಂಡ ಉಳಿದ ಆರೋ​ಪಿ​ಗಳ ಗುರುತು ಪತ್ತೆ​ಹ​ಚ್ಚುವ ಕಾರ್ಯ ಮುಂದು​ವ​ರಿ​ದಿ​ದೆ.

ಈ ಪ್ರಕರಣ ಶೃಂಗೇರಿ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯ ಗಮನಕ್ಕೆ ಮೊದಲು ಬಂದಿದ್ದು, ತಕ್ಷಣ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಶೃಂಗೇರಿ ಠಾಣೆಗೆ ದೂರು ನೀಡಿದ್ದಾರೆ. ಅದ​ರಂತೆ ಬಾಲ​ಕಿ​ಯನ್ನು ರಕ್ಷಿಸಿ ಚಿಕ್ಕಮಗಳೂರಿನ ಸ್ವಾಧಾರ ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿದೆ.

ಕ್ರಷರ್‌ ಮಾಲೀ​ಕರ ವಿರು​ದ್ಧವೂ ಕೇಸ್‌: ಜಲ್ಲಿ ಕ್ರಷರ್‌ನಲ್ಲಿ ಬಾಲಕಿಯಿಂದ ಕೆಲಸ ಮಾಡಿಸಿದ ಕಾರಣಕ್ಕಾಗಿ ಕ್ರಷರ್‌ ಮಾಲೀಕರ ವಿರುದ್ಧ ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

click me!