ದಾವಣಗೆರೆ: ದೇವರ ಮಗ ಮರ್ಡರ್‌ ಕೇಸ್‌, 48 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

By Girish Goudar  |  First Published May 26, 2022, 12:08 PM IST

*  ಹೊನ್ನಾಳಿ ಕುಮಾರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು
*  ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು, ಬೈಕ್‌ ಜಪ್ತಿ
*  ಪೊಲೀಸರ ಕಾರ್ಯಕ್ಕೆ ಪ್ರಶಂಸಿಸಿ ಬಹುಮಾನ ಘೋಷಿಸಿದ ಎಸ್‌ಪಿ ಸಿ.ಬಿ.ರಿಷ್ಯಂತ್‌ 
 


ದಾವಣಗೆರೆ/ಹೊನ್ನಾಳಿ(ಮೇ.26):  ಹೊನ್ನಾಳಿಯ ಕುಮಾರ ಹತ್ಯೆ ನಡೆದ 48 ಗಂಟೆಯಲ್ಲೇ ಇಬ್ಬರು ಸುಪಾರಿ ಹಂತಕರೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಆಯುಧಗಳು, 1 ಬೈಕ್‌ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆ ಕಡದಾರವಳ್ಳಿ ಗ್ರಾಮದ ಸ್ಟ್ಯಾಫ್‌ ನರ್ಸ್‌ ಡಿ.ದಿನೇಶ(38 ವರ್ಷ), ಹೊನ್ನಾಳಿಯ ಸುಂಕದಕಟ್ಟೆರಸ್ತೆ ವಾಸಿ, ಕೆಇಬಿ ಗುತ್ತಿಗೆದಾರ ಬಿ.ಎಸ್‌.ಮೋಹನ್‌(28), ಹರಿಹರ ತಾ. ಹಿಂಡಸಘಟ್ಟಕ್ಯಾಂಪ್‌ನ ಕೂಲಿ ಕೆಲಸಗಾರ ಕಾರ್ತಿಕ ಕುಮಾರ ನಾಯ್ಕ(29), ಪರಮೇಶ ನಾಯ್ಕ(30) ಹಾಗೂ ಸುನೀಲ್‌ ನಾಯ್ಕ(24) ಬಂಧಿತ ಆರೋಪಿಗಳಾಗಿದ್ದಾರೆ.

Tap to resize

Latest Videos

ದೇವರ ಗಣ ಮಗನಾದ ಹೊನ್ನಾಳಿ ದುರ್ಗಿಗುಡಿಯ ಕುರುವಾಸದ 3ನೇ ಕ್ರಾಸ್‌ನ ಕುಮಾರ ಎಂಬವನರನ್ನು ಮೇ 22ರ ಮಧ್ಯಾಹ್ನ 12.30ರಿಂದ ಮೇ.23ರದ ಬೆಳಿಗ್ಗೆ 9ರ ಅವದಿಯಲ್ಲಿ ಎಚ್‌.ಕಡದಕಟ್ಟೆಗ್ರಾಮದ ತಿಮ್ಮಪ್ಪ ಎಂಬುವರ ಜಮೀನಿನ ಬಳಿ ಕರೆದೊಯ್ದು, ಜಮೀನಿನ ಬಳಿ ಕಾರಿಯನಲ್ಲಿ ಕರೆದೊಯ್ದು, ಯಾವುದೋ ಆಯುಧದಿಂದ ಕೊಲೆ ಮಾಡಲಾಗಿತ್ತು. ಕುಮಾರ ಕೊಲೆಯಾದ ಬಗ್ಗೆ ಮೃತನ ತಾಯಿ ಶಾರದಮ್ಮ ಕೆಂಚಪ್ಪ ದೂರು ನೀಡಿದ್ದರು.

Davanagere Crime: ದೇವರ ಮಗನನ್ನೇ ಬರ್ಬರವಾಗಿ ಕೊಂದ ದುಷ್ಕರ್ಮಿಗಳು: ಕಾರಣ?

ಐವರು ಆರೋಪಿಗಳ ಸೆರೆ:

ಘಟನಾ ಸ್ಥಳಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್‌, ಎಎಸ್ಪಿ ರಾಮಗೊಂಡ ಬಿ.ಬಸರಗಿ, ಚನ್ನಗಿರಿ ಡಿವೈಎಸ್ಪಿ ಕೆ.ಎಂ.ಸಂತೋಷ ಮಾರ್ಗದರ್ಶನದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ.ದೇವರಾಜ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಕುಮಾರ ಕೊಲೆಯಾದ 48 ಗಂಟೆಗಳಲ್ಲೇ ಹತ್ಯೆ ಪ್ರಕರಣ ಬೇಧಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಯುಧಗಳು ಹಾಗೂ 1 ಬೈಕ್‌ನ್ನು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಡಾ.ಸಂತೋಷ್‌, ಹೊನ್ನಾಳಿ ಸಿಪಿಐ ಟಿ.ವಿ.ದೇವರಾಜ್‌, ಹೊನ್ನಾಳಿ ಸಬ್‌ ಇನ್ಸಪೆಕ್ಟರ್‌ ಬಸವರಾಜ ಬಿರಾದಾರ, ಎಎಸ್‌ಐಗಳಾದ ಹರೀಶ, ಪರಶುರಾಮಪ್ಪ, ಮಾಲತೇಶಪ್ಪ, ಸಿಬ್ಬಂದಿಯಾದ ರಂಗನಾಥ, ರಾಜು, ಮಂಜುನಾಥ, ಮೌನೇಶ, ಗಣೇಶ, ಜಿ.ವಿ.ಜಗದೀಶ, ಸುನಿಲ್‌ಕುಮಾರ, ಯೋಗೇಶ, ಪ್ರಸನ್ನಕುಮಾರ, ರಂಗನಾಥ, ಜಗದೀಶ, ಹನುಮಂತ, ಶಾಂತಕುಮಾರ, ರಾಘವೇಂದ್ರ ಪತ್ತೆ ಕಾರ್ಯದ ಬಗ್ಗೆ ಎಸ್ಪಿ ರಿಷ್ಯಂತ್‌, ಎಎಸ್ಪಿ ರಾಮಗೊಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಜಿಲ್ಲಾ ಎಸ್‌ಪಿ ಸಿ.ಬಿ.ರಿಷ್ಯಂತ್‌ ಪ್ರಶಂಸಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
 

click me!