ತನ್ನ ಮಗಳಿಂದ ಆರೋಪಿ ಗಿರೀಶ್ ₹3.30 ಲಕ್ಷ ಮೌಲ್ಯದ ಚಿನ್ನಾಭರಣ, ₹8 ಸಾವಿರ ನಗದು ಪಡೆದು ಕೊಂಡು ಮರಳಿ ನೀಡದೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಎಂಬುವರು ದೂರು ಸಲ್ಲಿಸಿದ ವೀರಾಪುರ ಓಣಿಯ ವಿಜಯಲಕ್ಷ್ಮಿ ಮಡಿವಾಳರ
ಹುಬ್ಬಳ್ಳಿ(ಮೇ.19): ನಗರದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ಆರೋಪಿ ಗಿರೀಶ್ ಸಾವಂತ್ ವಿರುದ್ಧ ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಮತ್ತೊಂ ದು ಪ್ರಕರಣ ದಾಖಲಾಗಿದೆ
ತನ್ನ ಮಗಳಿಂದ ಆರೋಪಿ ಗಿರೀಶ್ ₹3.30 ಲಕ್ಷ ಮೌಲ್ಯದ ಚಿನ್ನಾಭರಣ, ₹8 ಸಾವಿರ ನಗದು ಪಡೆದು ಕೊಂಡು ಮರಳಿ ನೀಡದೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ವೀರಾಪುರ ಓಣಿಯ ವಿಜಯಲಕ್ಷ್ಮಿ ಮಡಿವಾಳರ ಎಂಬುವರು ದೂರು ಸಲ್ಲಿಸಿದ್ದಾರೆ.
ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಮರೆತ ಕಾಂಗ್ರೆಸ್..!
ಆರು ತಿಂಗಳ ಹಿಂದೆ ನನ್ನ ಮಗಳು ಟ್ಯೂಷನ್‌ಗೆ ಹೋಗುತ್ತಿದ್ದಾಗ ಗಿರೀಶ್ ನನ್ನ ಅಂಜಲಿ ಮಗಳಿಗೆ ಪರಿಚಯವಾಗಿದ್ದ. ಆಕೆಯೊಂದಿಗೆ ಸಲುಗೆ ಬೆಳೆಸಿದ್ದ ಆತ್ಮ ತನಗೆ ಹಣದ ಅವಶ್ಯಕತೆಯಿದೆ ಎಂದು ಹೇಳಿ 8 ಸಾವಿರ ಪಡೆದಿದ್ದ. ಅದಾದ ನಂತರ ಮತ್ತೆ ₹ 90 ಸಾವಿರ ಮೌಲ್ಯದ 15 ಗ್ರಾಂ ತೂಕದ ನೆಕ್ಸಸ್, ₹60 ಸಾವಿರ ಮೌಲ್ಯದ 2 ಉಂಗುರ, ಈ 60 ಸಾವಿರ ಮೌಲ್ಯದ 10 ಗ್ರಾಂ ತೂಕದ ಜೀರಾಮಣಿ, ₹30 ಸಾವಿರ ಮೌಲ್ಯದ 5 ಗ್ರಾಂ ತೂಕದ ಗೋರಮಾಳ ಸರ, ₹ 30 ಸಾವಿರ ಮೌಲ್ಯದ 5 ಗ್ರಾಂ ತೂಕದ ಎರಡು ಜುಮಕಿ ಸೇರಿ ಈ 3.30 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ. ಅದನ್ನು ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.