ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಮೇಲೆ ರೌಡಿಶೀಟರ್‌ ಅತ್ಯಾಚಾರ

By Kannadaprabha NewsFirst Published Apr 13, 2020, 8:32 AM IST
Highlights

ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿ ಮೇಲೆ ರೌಡಿಶೀಟರ್‌ ಅತ್ಯಾಚಾರ| ಫೇಸ್‌ಬುಕಲ್ಲಿ ಪರಿಚಯವಾದ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಕೆಡವಿದ ರೌಡಿ| ಆಕೆಯಿಂದ ದೋಚಿದ್ದ ಆಭರಣ ವಾಪಸ್‌ ಕೊಡುವುದಾಗಿ ಲಾಡ್ಜ್‌ಗೆ ಕರೆದೊಯ್ದು ರೇಪ್‌| - ಮಗಳ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದಿರುವುದ ಕಂಡು ಪೋಷಕರ ಪ್ರಶ್ನೆ| ಸರ ಸ್ನೇಹಿತೆಗೆ ಕೊಟ್ಟಿರುವುದಾಗಿ ಸುಳ್ಳು ಹೇಳಿದ ವಿದ್ಯಾರ್ಥಿನಿ| ಲಾಕರ್‌ ತೆರೆದಾಗ ಅದರಲ್ಲಿದ್ದ ಅರ್ಧ ಕೆ.ಜಿ. ಚಿನ್ನ ಇಲ್ಲದಿರುವುದು ಬೆಳಕಿಗೆ| ಈ ಕುರಿತು ಪ್ರಶ್ನಿಸಿದಾಗ ಇಡೀ ವೃತ್ತಾಂತ ಬಾಯ್ಬಿಟ್ಟವಿದ್ಯಾರ್ಥಿನಿ

ಬೆಂಗಳೂರು(ಏ.13): ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ನಲ್ಲಿ ಪರಿಚಯವಾದ ರೌಡಿಶೀಟರ್‌ವೊಬ್ಬ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತೆಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಅತ್ಯಾಚಾರ ಎಸೆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಲ್ಲದೆ, ಬಾಲಕಿಗೆ ಬೆದರಿಸಿ ಮನೆಯಲ್ಲಿದ್ದ ಸುಮಾರು .20 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ . 57 ಸಾವಿರ ದೋಚಿದ್ದು, ಈ ಸಂಬಂಧ ಈ ಸಂಬಂಧ 17 ವರ್ಷದ ಸಂತ್ರಸ್ತೆಯ ಪೋಷಕರು ನಂದಿನಿ ಲೇಔಟ್‌ ಠಾಣೆಗೆ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣದಡಿ ರೌಡಿಶೀಟರ್‌ ಆಗಿರುವ ಆರೋಪಿ ಅಭಿಷೇಕ್‌ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಳುವಾದ ಮೊಬೈಲ್‌:

ಯುವತಿ ರಾಜಾಜಿನಗರ ನಿವಾಸಿಯಾಗಿದ್ದು, ನವರಂಗ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ತರಗತಿಯ ಪ್ರಾಜೆಕ್ಟ್ ವರ್ಕ್ನ ಬಳಕೆಂದು ಆಕೆಯ ಪೋಷಕರು 2019ರಲ್ಲಿ ಮಗಳಿಗೆ ಮೊಬೈಲ್‌ ಕೊಡಿಸಿದ್ದರು. ಬಾಲಕಿ ಮೊಬೈಲ್‌ನಲ್ಲಿ ತನ್ನದೇ ಆದ ಫೇಸ್‌ಬುಕ್‌ ಖಾತೆ ತೆರೆದಿದ್ದಳು. ಬಾಲಕಿಗೆ ಫೇಸ್‌ಬುಕ್‌ನಲ್ಲಿ ರೌಡಿಶೀಟರ್‌ ಅಭಿಷೇಕ್‌ಗೌಡ್‌ ಪರಿಚಯವಾಗಿದ್ದ. ಇಬ್ಬರು ಪರಿಚಯ ಆತ್ಮೀಯವಾಗಿದ್ದು, ಮೊಬೈಲ್‌ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಆರೋಪಿ ಬಾಲಕಿಯನ್ನು ಪ್ರೀತಿಸುವುದಾಗಿ ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ನಂತರ ಆಕೆಯನ್ನು ನಂಬಿಸಿ ಹಂತ-ಹಂತವಾಗಿ ಬಾಲಕಿಯ ಮನೆಯಲ್ಲಿದ್ದ ಸುಮಾರು . 20 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಮತ್ತು . 57 ಸಾವಿರ ಹಣ ಪಡೆದಿದ್ದಾನೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಹಿಳೆಯ ಮೈದುನನ ರುಂಡ ತುಂಡರಿಸಿದ ಕೀಚಕ...!

ಲಾಕರ್‌ ತೆರೆದಾಗ ಸತ್ಯಾಂಶ ಬೆಳಕಿಗೆ:

ಮಗಳ ಕೊರಳಿನಲ್ಲಿದ್ದ 10 ಚಿನ್ನ ಗ್ರಾಂ ಚಿನ್ನದ ಸರ ಇಲ್ಲದಿರುವುದನ್ನು ಕಂಡು ಪೋಷಕರು ಪ್ರಶ್ನೆ ಮಾಡಿದ್ದರು. ಈ ವೇಳೆ ಬಾಲಕಿ ಸ್ನೇಹಿತನಿಗೆ ಕೊಟ್ಟಿದ್ದು, ವಾಪಸ್‌ ಪಡೆಯುವುದಾಗಿ ಹೇಳಿದ್ದಳು. ಪೋಷಕರು ಏ.5ರಂದು ಮನೆಯ ಲಾಕರ್‌ ನೋಡಿದಾಗ 500 ಗ್ರಾಂ ಚಿನ್ನಾಭರಣ ಹಾಗೂ . 57 ಸಾವಿರ ನಗದು ಇಲ್ಲದಿರುವುದು ಗೊತ್ತಾಗಿದೆ. ಪುತ್ರಿಯನ್ನು ವಿಚಾರಿಸಿದಾಗ ಅಭಿಷೇಕ್‌ಗೌಡನ ಕೃತ್ಯದ ಬಗ್ಗೆ ಬಾಲಕಿ ಬಾಯ್ಬಿಟ್ಟಿದ್ದಾಳೆ.

ತಾತನ ಕೈ ಜಾರಿ 2ನೇ ಮಹಡಿಯಿಂದ ಬಿದ್ದು 6 ತಿಂಗಳ ಮಗು ಸಾವು!

ವಿಡಿಯೋ ವೈರಲ್‌ ಮಾಡುವ ಬೆದರಿಕೆ:

ತನ್ನನ್ನು ಪ್ರೀತಿಸುವುದಾಗಿ ನಂಬಿಸಿದ ಆರೋಪಿ ಚಿನ್ನಾಭರಣ ತರುವಂತೆ ಒತ್ತಡ ಹಾಕುತ್ತಿದ್ದ, ಹೀಗಾಗಿ ಆಗಾಗ ಆಭರಣ ಒಯ್ದು ನೀಡುತ್ತಿದ್ದೆ. ಕೊಟ್ಟಚಿನ್ನ ಹಿಂತಿರುಗಿಸುವಂತೆ ಕೇಳಿದಾಗ ಅವುಗಳನ್ನು ಕೊಡುವುದಾಗಿ ನಂಬಿಸಿ ಲಾಡ್ಜ್‌ಗೆ ಕರೆದೊಯ್ದು ಆತ್ಯಾಚಾರ ಎಸೆಗಿದ್ದ. ಇಷ್ಟಾದರೂ ಚಿನ್ನಾಭರಣ ನೀಡಲಿಲ್ಲ. ತುಂಬಾ ಒತ್ತಡ ಹಾಕಿದಾಗ ಇಬ್ಬರ ಖಾಸಗಿ ಕ್ಷಣಗಳ ವಿಡಿಯೋ ಇದ್ದು, ಅವುಗಳನ್ನು ಫೇಸ್‌ಬುಕ್‌ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ, ಪೋಷಕರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದ ಎಂದು ಬಾಲಕಿ ದೂರಿನಲ್ಲಿ ವಿವರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.

click me!