ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್: ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ!

By Govindaraj S  |  First Published Jul 24, 2024, 10:07 AM IST

ಪಿಸ್ತೂಲ್​ನಿಂದ ಗುಂಡು ಹಾರಿಸಿ ಅಣ್ಣನ ಮಗನನ್ನು ಚಿಕ್ಕಪ್ಪ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ. ನಜೀರ್ ಅಹ್ಮದ್ ಕೊಲೆಯಾದ ದುರ್ದೈವಿ. 


ಚಿಕ್ಕಬಳ್ಳಾಪುರ (ಜು.24): ಪಿಸ್ತೂಲ್​ನಿಂದ ಗುಂಡು ಹಾರಿಸಿ ಅಣ್ಣನ ಮಗನನ್ನು ಚಿಕ್ಕಪ್ಪ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ. ನಜೀರ್ ಅಹ್ಮದ್ ಕೊಲೆಯಾದ ದುರ್ದೈವಿ. ಬಶೀರ್ ಅಹ್ಮದ್ (66) ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿ. ಜೊತೆಗೆ ಅಣ್ಣ ಮಾಬೂಸಾಬಿ ಮೇಲೂ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. 

ಗಂಭೀರವಾಗಿ ಗಾಯಗೊಂಡಿರುವ ಮಾಬೂಸಾಬಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಬಶೀರ್ ಅಹ್ಮದ್ ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಊರಿಗೆ ಬಂದಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಬಶೀರ್ ಅಹ್ಮದ್​​ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tap to resize

Latest Videos

ಬೈಕ್‌ನಲ್ಲಿ ತನ್ನ ಪತ್ನಿ ಕರೆದೊಯ್ಯುತ್ತಿದ್ದ ಯುವಕನ ಬರ್ಬರ ಹತ್ಯೆ: ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ತಾಲೂಕಿನ ಲಕ್ಷ್ಮೇಶ್ವರ ಕ್ರಾಸ್ ಬಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಲಕ್ಷೇಶ್ವರದ ಮೌಲಾಸಾಬ ಯಾಸೀನ್‌ ಮೋಮಿನ್(22) ಹತ್ಯೆಯಾದ ಯುವಕ. ಸುಣಧೋಳಿ ಗ್ರಾಮದ ಅಮೋಘ ಭರತೇಶ ಢವಳೇಶ್ವರ ಕೊಲೆ ಆರೋಪಿ. ಅನೈತಿಕ ಸಂಬಂಧವೇ ಹತ್ಯೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ: ಪರಿಚಯಸ್ಥನಿಂದಲೇ ಕೃತ್ಯ ಶಂಕೆ

ಹತ್ಯೆಗೊಳಗಾದ ಮೌಲಾಸಾಬ ಮೊಮಿನ್ ಆರೋಪಿ ಅಮೋಘನ ಪತ್ನಿಯನ್ನು ಬೈಕ್ ಮೇಲೆ ಕರೆದುಕೊಂಡು ಹೊರಟಿರುವಾಗ ತಡೆದು ಮಾರಕಾಸ್ತ್ರದಿಂದ ಮೌಲಾಸಾಬ ಹಾಗೂ ತನ್ನ ಪತ್ನಿ ಮೇಲೂ ಹಲ್ಲೆ ನಡೆಸಿದ್ದಾನೆ. ಮೌಲಾಸಾಬ ಮೊಮಿನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಬೆಳಗಾವಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ಡಿ.ಎಚ್. ಮುಲ್ಲಾ, ಸಿಪಿಐ ಶ್ರೀಶೈಲ್ ಬ್ಯಾಕೂಡ್ ಮತ್ತು ಪಿಎಸ್‌ಐ ಆನಂದ ಬಿ. ಮತ್ತು ಜೆ.ಡಿ. ನರಸಿಂಹರಾಜು ಇದ್ದರು. ಈ ಕುರಿತು ಕುಲಿಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!