'ನಿಮ್ಮ ಬ್ಯಾಗ್‌ ಯಾಕಿಷ್ಟು ಭಾರವಿದೆ..' ಸುಚನಾ ಸೇಠ್‌ಗೆ ಕೇಳಿದ್ದ ಡ್ರೈವರ್‌ ರೇಜಾನ್ ಡಿಸೋಜಾ

By Santosh Naik  |  First Published Jan 11, 2024, 6:48 PM IST


ತನ್ನದೇ ನಾಲ್ಕು ವರ್ಷದ ಮುಗುವನ್ನು ಉಸಿರುಗಟ್ಟಿಸಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ಬೆಂಗಳೂರನ ಕಂಪನಿಯೊಂದರ ಸಿಇಒ ಸುಚನಾ ಸೇಠ್‌ ಕೇಸ್‌ನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕ್ಯಾಬ್‌ ಡ್ರೈವರ್‌ ರೇಜಾನ್‌ ಡಿಸೋಜಾ ಈ ಬಗ್ಗೆ ಮಾತನಾಡಿದ್ದಾರೆ.


ಬೆಂಗಳೂರು (ಜ.11): ತನ್ನದೇ ನಾಲ್ಕು ವರ್ಷದ ಮಗನನ್ನು ಉತ್ತರ ಗೋವಾದ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ದಾರುಣವಾಗಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಬರುತ್ತಿದ್ದ ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒ ಸುಚನಾ ಸೇಠ್‌ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಆದರೆ, ಆಕೆಯನ್ನು ಬಹಳ ಸುಲಭವಾಗಿ ಪೊಲೀಸರ ಕೈಗೊಪ್ಪಿಸಲು ಸಹಾಯ ಮಾಡಿದ್ದು ಕ್ಯಾಬ್‌ ಡ್ರೈವರ್‌  ರೇಜಾನ್‌ ಡಿಸೋಜಾ. ಈ ವೇಳೆ ಆ ದಿನ ನಡೆದ ಘಟನೆಗಳ ಬಗ್ಗೆ ಸ್ವತಃ ಡ್ರೈವರ್‌ ರೇಜಾನ್‌ ಡಿಸೋಜಾ ಮಾತನಾಡಿದ್ದಾರೆ. ಸುಚನಾ ಸೇಠ್‌ ಹಾಗೂ ಆಕೆಯ ಪುತ್ರನ ಮೃತದೇಹವಿದ್ದ ಸೂಟ್‌ಕೇಸ್‌ಅನ್ನು ಹೊತ್ತ ಕಾರ್‌ಅನ್ನು ರೇಜಾನ್‌ ಡಿಸೋಜಾ 12 ಗಂಟೆಗಳ ಕಾಲ ಡ್ರೈವ್‌ ಮಾಡಿದ್ದ, ಖಾಸಗಿ ಟಿವಿಯೊಂದಿಗೆ ಮಾತನಾಡಿರುವ ಆತ, ಕಾರ್‌ನಲ್ಲಿ ಕುಳಿತ ಕ್ಷಣದಿಂದಲೂ ಸುಚನಾ ಸೇಠ್‌ ನಡವಳಿಕೆ ಅನುಮಾನಾಸ್ಪದವಾಗಿತ್ತು ಎಂದು ಹೇಳಿದ್ದಾರೆ. ಅದಲ್ಲದೆ, ಗೋವಾದಲ್ಲಿ ಅವರು ಸೂಟ್‌ಕೇಸ್‌ಅನ್ನು ಕಾರ್‌ಗೆ ಹಾಕುವ ವೇಳೆ, ನಿಮ್ಮ ಸೂಟ್‌ಕೇಸ್‌ ಯಾಕೆ ಇಷ್ಟು ಭಾರವಿದೆ ಎಂದೂ ನಾನು ಅವರಿಗೆ ಕೇಳಿದ್ದೆ ಎಂದು ತಿಳಿಸಿದ್ದಾರೆ.

ಉತ್ತರ ಗೋವಾದ ಕಾಂಡೋಲಿಮ್‌ನಲ್ಲಿರುವ ಸೋನ್‌ ಬನ್ಯನ್‌ ಗ್ರಾಂಡೆ ಸರ್ವೀಸ್‌ ಅಪಾರ್ಟ್‌ಮೆಂಟ್‌ನಿಂದ ಜನವರಿ 7 ರಂದು ನನಗೆ ಕರೆ ಬಂದಿತ್ತು. ಮಹಿಳೆಯೊಬ್ಬರು ಬೆಂಗಳೂರಿಗೆ ಪ್ರಯಾಣ ಮಾಡಬೇಕಿದೆ ಎಂದು ಅವರು ತಿಳಿಸಿದ್ದರು. ಮಧ್ಯರಾತ್ರಿ 12.30ಕ್ಕೆ ನಾನು ಹಾಗೂ ಇನ್ನೊಬ್ಬ ಡ್ರೈವರ್‌ ಅಪಾರ್ಟ್‌ಮೆಂಟ್‌ ಬಳಿ ಬಂದಿದ್ದೆವು ಎಂದು ಡಿಸೋಜಾ ತಿಳಿಸಿದ್ದಾರೆ.
ಅಂದಾಜು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಆಕೆ ನನ್ನ ಕ್ಯಾಬ್‌ ಏರಿದ್ದಳು. ಈ ವೇಳೆ, ಬ್ಯಾಗ್‌ಅನ್ನು ಕಾರ್‌ಗೆ ಎತ್ತಿಡುವಂತೆ ನಮಗೆ ತಿಳಿಸಿದರು. ಈ ವೇಳೆ ಆಕೆಯ ಸೂಟ್‌ಕೇಸ್‌ ಅಸ್ವಾಭಾವಿಕ ಎನಿಸುವಷ್ಟು ಭಾರವಿತ್ತು. ಇದರ ಬಗ್ಗೆ ಪ್ರಶ್ನೆ ಮಾಡಿದಾಗ, ಕೆಲವು ಲಿಕ್ಕರ್‌ ಬಾಟಲಿಗಳು ಅದರಲ್ಲಿವೆ ಎಂದು ತಿಳಿಸಿದ್ದರು.

ಪ್ರಯಾಣದ ಸಂಪೂರ್ಣ ಹಾದಿಯಲ್ಲಿ ಆಕೆಯ ಸುಮ್ಮನೇ ಇದ್ದರು. ಏನನ್ನೂ ಕೂಡ ಹೇಳಿರಲಿಲ್ಲ. ಯಾವುದೋ ಒಂದು ಪ್ರದೇಶದಲ್ಲಿ ನೀರಿನ ಬಾಟಲಿಗಾಗಿ ಮಾತ್ರವೇ ಆಕೆ ಕಾರ್‌ಅನ್ನು ನಿಲ್ಲಿಸುವಂತೆ ಹೇಳಿದ್ದಳು ಎಂದು ತಿಳಿಸಿದ್ದಾರೆ.

ಗೋವಾ-ಕರ್ನಾಟಕ ಗಡಿಯಲ್ಲಿ ನಮಗೆ ರೋಡ್‌ಬ್ಲಾಕ್‌ ಎದುರಾಗಿತ್ತು. ಇದರಿಂದ ಪ್ರಯಾಣ ನಾಲ್ಕು ಗಂಟೆ ವಿಳಂಬವಾಗಿತ್ತು. ಅಷ್ಟು ತಡವಾಗಿದ್ದರೂ ಕೂಡ ಸುಚನಾ ಸೇಠ್‌, ತಾಳ್ಮೆಗೆಡುವುದಾಗಲಿ, ಪ್ಯಾನಿಕ್‌ ಲಕ್ಷಣವಾಗಲಿ ತೋರಿಸಿರಲಿಲ್ಲ. ನಿಮಗೆ ಹಾಗೇನಾದರೂ ಅರ್ಜೆಂಟ್‌ ಆಗಿ ಹೋಗಬೇಕಿದ್ದಲ್ಲಿ ಇಲ್ಲಿಂದಲೇ ಯೂ ಟರ್ನ್‌ ಮಾಡಿ ನಿಮಗೆ ಏರ್‌ಪೋರ್ಟ್‌ಗೆ ಡ್ರಾಪ್‌ ಮಾಡುತ್ತೇನೆ ಎಂದು ಡಿಸೋಜಾ ಅಲಹೆ ನೀಡಿದ್ದರು. ಆದರೆ, ಸುಚನಾ ಸೇಠ್‌ ಇದನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ಟ್ರಾಫಿಕ್‌ ಕ್ಲಿಯರ್‌ ಆಗುವವರೆಗೂ ಕಾಯುವುದಾಗಿ ತಿಳಿಸಿದ್ದರು ಎಂದಿದ್ದಾರೆ.

Tap to resize

Latest Videos

ಗೋವಾದಲ್ಲಿ ಮಗನನ್ನು ಕೊಂದು ಬೆಂಗಳೂರಿಗೆ ಪರಾರಿಯಾಗ್ತಿದ್ದ ತಾಯಿ: ಸುಚನಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದೀಗೆ ನೋಡಿ..

ನಾವು ಕರ್ನಾಟಕ ಗಡಿ ಪ್ರವೇಶಿಸಿದ ಬಳಿಕ ಗೋವಾ ಪೊಲೀಸ್‌ ನನ್ನನ್ನು ಸಂಪರ್ಕಿಸಿದ್ದರು. ಅದಲ್ಲದೆ, ಹೋಟೆಲ್‌ ರೂಮ್‌ನಲ್ಲಿ ಮಗುವಿನ ದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದರು.  ಭಾಷೆಯ ಅಡೆತಡೆಗಳು ಮತ್ತು ಪರಿಚಯವಿಲ್ಲದ ಪ್ರದೇಶದ ಹೊರತಾಗಿಯೂ, ಡಿಸೋಜಾ ಅವರು ಹತ್ತಿರದ ಪೊಲೀಸ್‌ ಠಾಣೆಗೆ ಸುಚನಾ ಸೇಠ್‌ರನ್ನು ಅತ್ಯಂತ ಗೌಪ್ತವಾಗಿ ಕರೆತಂದಿದ್ದರು. ಪೊಲೀಸ್‌ ಠಾಣೆಗೆ ಬಂದ ಬೆನ್ನಲ್ಲಿಯೇ ಸುಚನಾ ಅವರನ್ನು ಕರ್ನಾಟಕ ಪೊಲೀಸ್‌ಗೆ ಒಪ್ಪಿಸಿದ್ದಾರೆ. ಈ ವೇಳೆ ಕಾರ್‌ ಹಾಗೂ ಸೂಟ್‌ಕೇಸ್‌ನ ಪರಿಶೀಲನೆ ಮಾಡಿದಾಗ, ಮಗುವಿನ ನಿರ್ಜೀವ ದೇಹ ಪತ್ತೆಯಾಗಿತ್ತು.

100 ಬ್ರಿಲಿಯಂಟ್ ಮಹಿಳೆಯರ ಲಿಸ್ಟ್‌ನಲ್ಲಿದ್ದಾಳೆ ಹೆತ್ತ ಮಗನನ್ನೇ ಕೊಂದು ಬ್ಯಾಗ್‌ನಲ್ಲಿ ಸಾಗಿಸ್ತಿದ್ದ ಪಾಪಿ ತಾಯಿ!

ಗೋವಾ ಪೊಲೀಸರಿಗೆ ಸಿಕ್ತು ಸುಚನಾ ಕೈಬರಹದ ಪತ್ರ: ಈ ನಡುವೆ ಸುಚನಾ ಸೇಠ್‌ ಇದ್ದ ಕೋಣೆಯಲ್ಲಿ ಆಕೆಯ ಕೈಬರಹದ ಪತ್ರ ಸಿಕ್ಕಿದೆ ಎಂದು ಗೋವಾ ಪೊಲೀಸ್‌ ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಈಕೆ ತನ್ನ ಮಗನನ್ನೇ ಕೊಂದಿದ್ದಾಳೆ ಎನ್ನುವ ಕುರಿತು ಎಲ್ಲಾ ಕೋನಗಳಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೇವಲ ನಾಲ್ಕೇ ವಾಕ್ಯಗಳಿರುವ ನೋಟ್‌ ಇದಾಗಿದೆ.
 

click me!