Dharwad double murder: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ; ಮನೆಮುಂದೆ ಕುಳಿತಿದ್ದಾಗಲೇ ಗ್ಯಾಂಗ್ ಅಟ್ಯಾಕ್!

By Ravi Janekal  |  First Published May 26, 2023, 8:31 AM IST

ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಜಿಲ್ಲೆಯ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ನಡೆದಿದ್ದು, ಜನರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ.


ಧಾರವಾಡ (ಮೇ.26) : ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಜಿಲ್ಲೆಯ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ನಡೆದಿದ್ದು, ಜನರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ.

ಮಹಮ್ಮದ್​ ಕುಡಚಿ(45), ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಉದ್ಯಮಿ ಮನೆಮುಂದೆ ಕುಳಿತಿದ್ದಾಗಲೇ ದುಷ್ಕರ್ಮಿಗಳ ಗುಂಪು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

Tap to resize

Latest Videos

ರಕ್ತಸಿಕ್ತವಾಗಿ ಬಿದ್ದಿರುವ ಮತ್ತೊಂದು ಮೃತದೇಹ!

ಕುಡಚಿ ಮನೆಯಿಂದ ಅನತಿ ದೂರದಲ್ಲೇ ರಕ್ತಸಿಕ್ತವಾಗಿ ಬಿದ್ದಿರುವ ಮತ್ತೊಂದು ಶವ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ. ಮಹ್ಮದ್ ಕುಡುಚಿ ಮೇಲೆ ದಾಳಿಯಾದಾಗ ಈತನ ಮೇಲೆಯೂ ದಾಳಿ ನಡೆಸಿರುವ ಸಾಧ್ಯತೆ ಇದ್ದು, ತಪ್ಪಿಸಿಕೊಂಡು ಹೋಗುವ ಯತ್ನದಲ್ಲಿ ಬೇರೆ ಜಾಗದಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ.

ಸೀರೆಯಿಂದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಬಾಲಕಿ ಆತ್ಮ ಹತ್ಯೆ!

ಸ್ಥಳಕ್ಕೆ ಕಮಿಷನರ್ ಭೇಟಿ:

ಹತ್ಯೆ ನಡೆದ ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ಧಾರವಾಡ ಕಮಿಷನರ್ ರಮಣಗುಪ್ತಾ(Dharwad police commissioner ramanagupta) ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಹತ್ಯೆ ಘಟನೆಗೆ ಸಂಬಧಿಸಿದಂತೆ ಮಾತನಾಡಿದ ಕಮಿಷನರ್, ಕಮಲಾಪೂರ ಗ್ರಾಮದಲ್ಲಿ ಡಬಲ್ ಮರ್ಡರ್ ಆಗಿದೆ. ನಾನು‌ ಸೇರಿ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದೇವೆ. ಎಲ್ಲ ಆಯಾಮಗಳಲ್ಲಿ ಸೈಂಟಿಫಿಕ್ ಆಗಿ ತನಿಖೆ ಮಾಡುತ್ತೇವೆ. ಹತ್ಯೆ ಪ್ರಕರಣ ಸಂಬಂಧ ಸ್ಥಳದಲ್ಲಿ ಮೂರು ಮಾರಕಾಸ್ತ್ರಗಳು ಸಿಕ್ಕಿವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ.

ಆದಷ್ಟು ಬೇಗ ಆರೋಪಿಗಳ ಪತ್ತೆ ಮಾಡಲಾಗುವುದು. ಈಗಾಗಲೇ ಆರೋಪಿಗಳ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ತನಿಖೆ ಹಂತದಲ್ಲಿದೆ ಹೆಚ್ಚಿನ ಮಾಹಿತಿ ನೀಡಲಾಗದು. ಆದರೆ ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಕಮಿಷನರ್ ರಮಣ್ ಗುಪ್ತಾ ಹೇಳಿದರು. ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ಬೇಡ ಬೇಡ ಅಂದ್ರೂ ಆಂಟಿಯೊಂದಿಗೆ ಅನೈತಿಕ ಸಂಬಂಧ: ಮಹಿಳೆ ಗಂಡನಿಂದ ಯುವಕನ ಕೊಲೆ

click me!