ಪೀಪಲ್ ಫಾರ್ ಅನಿಮಲ್ಸ್‌ನ ಸ್ವಯಂಸೇವಕರ ಪ್ರಕಾರ, ಈ ವ್ಯಕ್ತಿ ಬೀದಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದು ಇದು ಮೊದಲೇನಲ್ಲ. ಈ ಬಾರಿ ಅವನ ಗೋದಾಮಿನ ಬಾಗಿಲಿನಿಂದ ಇದನ್ನು ರೆಕಾರ್ಡ್ ಮಾಡಲಾಗಿದೆ.
ನವದೆಹಲಿ (ಸೆ.15): ಬೀದಿನಾಯಿಯ ಮೇಲೆ ಅತ್ಯಾಚಾರವೆಸಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೆಹಲಿ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಾಣಿ ಹಕ್ಕುಗಳ ಎನ್‌ಜಿಒ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ವ್ಯಕ್ತಿ ಪುನರಾವರ್ತಿತ ಅಪರಾಧಿ ಮತ್ತು ಬೀದಿ ನಾಯಿಯ ಮೇಲೆ ಅತ್ಯಾಚಾರ ಮಾಡುವ ವೀಡಿಯೊವನ್ನು ಸುಭಾಷ್ ನಗರದಲ್ಲಿರುವ ಅವರ ಗೋದಾಮಿನ ಬಾಗಿಲಿನಿ ಸಣ್ಣ ಕಿಂಡಿಯಿಂದ ರೆಕಾರ್ಡ್ ಮಾಡಲಾಗಿದೆ ಎಂದು ಎನ್‌ಜಿಒ ತಮ್ಮ ದೂರಿನಲ್ಲಿ ಹೇಳಿಕೊಂಡಿದೆ. “ಆರೋಪಿಗಳ ವಿರುದ್ಧ ಪುನರಾವರ್ತಿತ ದೂರುಗಳು ಮತ್ತು ವೀಡಿಯೊ ಪುರಾವೆಗಳ ನಂತರ, ನಾವು ಪ್ರಕರಣವನ್ನು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದೇವೆ. ನಾವು ಪೊಲೀಸರಿಗೆ ಲಭ್ಯವಿರುವ ಎಲ್ಲಾ ವಿವರಗಳನ್ನು ಒದಗಿಸಿದ್ದೇವೆ ಮತ್ತು ಎಫ್‌ಐಆರ್‌ಗೆ ವಿನಂತಿಸಿದ್ದೇವೆ" ಎಂದು ಪೀಪಲ್ ಫಾರ್ ಅನಿಮಲ್ಸ್, ಎನ್‌ಜಿಒ ಸ್ವಯಂಸೇವಕ ತಿಳಿಸಿದ್ದಾರೆ.
"ಹಿರಿಯ ಅಧಿಕಾರಿಯ ಮಧ್ಯಸ್ಥಿಕೆಯ ನಂತರವೇ, ಆರೋಪಿಗಳ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದಾಗ್ಯೂ, ಎಫ್‌ಐಆರ್ ಹೊರತಾಗಿಯೂ ಆರೋಪಿಯನ್ನು ಇದುವರೆಗೆ ಬಂಧಿಸಲಾಗಿಲ್ಲ" ಎಂದು ಸ್ವಯಂಸೇವಕರು ಹೇಳಿದ್ದಾರೆ. ದೂರುದಾರರ ಪ್ರಕಾರ, ಆರೋಪಿಯು ಸೆಪ್ಟೆಂಬರ್ 6 ರಂದು ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ವೀಡಿಯೊ ಮಾಡಿದ ವ್ಯಕ್ತಿಯ ಫೋನ್ ಅನ್ನು ಕಸಿದುಕೊಂಡಿದ್ದರು ಆದರೆ ಪೊಲೀಸರ ಮಧ್ಯಸ್ಥಿಕೆಯ ನಂತರ ಮೊಬೈಲ್ ಫೋನ್ ಹಿಂತಿರುಗಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
"ಮತ್ತೆ ಸೆಪ್ಟೆಂಬರ್ 13 ರಂದು, ಆತ ಬೀದಿನಾಯಿಯ ಮೇಲೆ ಅತ್ಯಾಚಾರ ಮಾಡುವಾಗ ಸಿಕ್ಕಿಬಿದ್ದಿದ್ದ. ಆತ ತನ್ನ ಸುಭಾಶ್‌ನಗರದಲ್ಲಿರುವ ಗೋದಾಮಿನ ಒಳಗೆ ಬೀದಿನಾಯಿಯನ್ನು ಕರೆದುಕೊಂಡು ಹೋಗಿದ್ದಲ್ಲದೆ, ಅದರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ನಾವು ಪೊಲೀಸರನ್ನು ಸಂಪರ್ಕಿಸಿದೆವು' ಎಂದು ಸ್ವಯಂಸೇವಕರು ತಿಳಿಸಿದ್ದಾರೆ. ಆದರೆ, ವಿಡಿಯೋದಲ್ಲಿರುವ ಆರೋಪಿಗಳ ಗುರುತು ಪತ್ತೆಯಾಗಬೇಕಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಲನ್ ಜೊತೆ ರೇಪ್ ಸೀನ್ ಮಾಡ್ವಾಗ ನಡೆದದ್ದೇ ಭಯಾನಕ: ಆ ದಿನ ನೆನೆದು ಹೆದರಿದ ಮಾಧುರಿ!
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಆರೋಪಿಗಳ ವಿರುದ್ಧ ಸೆಪ್ಟೆಂಬರ್ 15 ರಂದು ರಾಜೌರಿ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 268, 377, 428, 429 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 11 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಡಿಯೋದಲ್ಲಿ ಆರೋಪಿಯ ಮುಖ ಅಸ್ಪಷ್ಟವಾಗಿರುವುದರಿಂದ ಮೊದಲು ಆತನ ಗುರುತು ಪತ್ತೆ ಮಾಡುತ್ತೇವೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒತ್ತಾಯ ಪೂರ್ವಕ ಡ್ರಗ್ಸ್, ಗೋಮಾಂಸ ತಿನ್ನಿಸಿ ದಲಿತ ಯುವತಿ ಮೇಲೆ ಗ್ಯಾಂಗ್‌ರೇಪ್!
"स्ट्रीट डॉग्स के खिलाफ आंदोलन करने वाला तथाकथित समाजसेवी संस्था का सेकेट्री स्ट्रीट डॉग्स के साथ अप्राकृतिक संबंध बनाते पाया गया FIR रजिस्टर वीडियो वायरल" Subhash nagar block 6/105 abto kutte ne kaata nahi ji dekhe 👇 pic.twitter.com/M9EXLsFvOa
— voiceforanimals11 (@vfanimals11)