21 ವರ್ಷದ ಮಗಳನ್ನು ಕೊಂದು, ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ತಂದೆ!

By Santosh NaikFirst Published Nov 21, 2022, 11:52 AM IST
Highlights

ಉತ್ತರ ಪ್ರದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣ ವರದಿಯಾಗಿದ್ದು, ತಂದೆಯೊಬ್ಬ ತನ್ನ 21 ವರ್ಷದ ಮಗಳನ್ನು ದಾರುಣವಾಗಿ ಕೊಲೆ ಮಾಡಿದ್ದು ಮಾತ್ರವಲ್ಲದೆ, ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಎಸೆದು ಹೋದ ಘಟನೆ ನಡೆದಿದೆ.
 

ನವದೆಹಲಿ (ನ.21): ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ ವೇ ಬಳಿ ಭಾನುವಾರ ಕೆಂಪು ಬಣ್ಣದ ಟ್ರಾಲಿ ಬ್ಯಾಗ್‌ನಲ್ಲ ಹುಡುಗಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಇದು ದೆಹಲಿಯ 21 ವರ್ಷದ ಆಯುಷಿ ಯಾದವ್‌ ದೇಹ ಎಂದು ಪೊಲೀಸರು ಗುರುತಿಸಿದ್ದಾರೆ. ಭಾನುವಾರ, ಆಕೆಯ ತಾಯಿ ಹಾಗೂ ಸಹೋದರ ಇದು ಆಯುಷಿ ಯಾದವ್‌ ಅವರ ದೇಹ ಎಂದು ಪತ್ತೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಆಯುಷಿ ಕೊಲೆ ಪ್ರಕರಣ ಎನ್ನುವುದು ಮರ್ಯಾದಾ ಹತ್ಯೆ ಆಗಿರಬಹುದು ಎಂದಿದ್ದಾರೆ. ಸ್ವತಃ ಆಯುಷಿ ಅವರ ತಂದೆಯೇ, ಆಕೆಯನ್ನು ಶೂಟ್‌ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಆ ಬಳಿಕ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದಾರೆ. ಬಳಿಕ ಮಥುರಾದ ರಯಾ ಪ್ರದೇಶದಲ್ಲಿ ಇದನ್ನು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ತಂದೆಯನ್ನು ಬಂಧನ ಮಾಡಿರುವ ಪೊಲೀಸರು ಅವರ ವಿಚಾರಣೆಯನ್ನೂ ಆರಂಭ ಮಾಡಿದ್ದಾರೆ. ನವೆಂಬರ್‌ 17 ರಂದು ಆಯುಷಿ ಯಾದವ್‌ ತಮ್ಮ ಮನೆಯಿಂದ ಹೊರಹೋಗಿದ್ದರು ಎಂದು ನಗರದ ಎಸ್‌ಪಿ ಎಂಪಿ ಸಿಂಗ್‌ ಹೇಳಿದ್ದಾರೆ. ನವೆಂಬರ್‌ 18 ರಂದು ಯಮುನಾ ಎಕ್ಸ್‌ಪ್ರೆಸ್‌ ವೇಯ ಸರ್ವೀಸ್‌ ರಸ್ತೆಯಲ್ಲಿ ರಕ್ತದಿಂದ ತೊಯ್ದುಹೋಗುದ್ದ ಆಕೆಯ ದೇಹ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಆಯುಷಿ ಯಾದವ್‌ ಅವರ ತಲೆ, ಕೈಗಳು ಹಾಗೂ ಕಾಲಿನ ಮೇಲೆ ಗಾಯದ ಗುರುತುಗಳಿದ್ದು, ಎದೆಗೆ ಶೂಟ್‌ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ಪತ್ತೆ ಮಾಡಲು ಮಥುರಾ ಪೊಲೀಸ್‌ 8 ತಂಡಗಳನ್ನು ಮಾಡಿತ್ತು. ಪೊಲೀಸರು ಗುರುಗ್ರಾಮ, ಆಗ್ರಾ, ಆಲಿಗಢ, ಹತ್ರಾಸ್‌, ನೊಯ್ಡಾ ಹಾಗೂ ದೆಹಲಿಗೆ ತಲುಪಿ ಮೃತದೇಹ ಯಾರದೆಂದು ಗುರುತಿಸುವ ಪ್ರಯತ್ನ ಮಾಡಿದ್ದರು.

ಬದರ್‌ಪುರ ಪ್ರದೇಶದ ಆಯುಷಿ ಯಾದವ್‌: ಆಯುಷಿ ಯಾದವ್‌ ಅವರ ಕುಟುಂಬದವರನ್ನು ಪತ್ತೆ ಮಾಡಲು ಪೊಲೀಸರು ಸಾಕಷ್ಟು ಶ್ರಮಪಟ್ಟಿದ್ದರು. ಕೊನೆಗೆ ಇದು ನಿತೇಶ್‌ ಯಾಸವ್‌ ಅವರ ಪುತ್ರಿ ಆಯುಷಿ ಯಾದವ್‌ ಎನ್ನುವುದು ಗೊತ್ತಾಗಿದ್ದು, ದೆಹಲಿಯ ಬದರ್‌ಪುರದ ನಿವಾಸಿ ಎನ್ನುವುದು ಗೊತ್ತಾಗಿದೆ. ಆ ಬಳಿಕ ಪೊಲೀಸರು ಆಯುಷಿ ಯಾದವ್‌ ಅವರ ಮನೆಗೆ ತೆರಳಿತ್ತು. ಈ ವೇಳೆ ಅವರ ತಾಯಿ ಹಾಗೂ ಸಹೋದರ ಸಿಕ್ಕಿದ್ದರೆ, ತಂದೆ ನಾಪತ್ತೆಯಾಗಿದ್ದರು. ಬಳಿಕ ಇಬ್ಬರನ್ನೂ ಆಯುಷಿ ಯಾದವ್‌ ಅವರ ಮರಣೋತ್ತರ ಪರೀಕ್ಷೆಗಾಗಿ ಕರೆತರಲಾಗಿತ್ತು. ಈ ವೇಳೆ ಆಯುಷಿ ಅವರ ಮೃತದೇಹವನ್ನು ಗುರುತಿಸಿದ್ದಾರೆ. ಈ ವೇಳೆ ಆಯುಷಿ ಅವರ ತಾಯಿ ಇದು ತನ್ನ ಮಗಳು ಎಂದು ಗುರುತಿಸಿದರೂ, ಕೊಲೆಗೆ ಕಾರಣವೇನು ಎನ್ನುವ ಮಾಹಿತಿ ಹೇಳಲು ನಿರಾಕರಿಸಿದ್ದಾರೆ.

ಶ್ರದ್ಧಾಳ ಮದುವೆಗೂ ಒಪ್ಪಿದ್ದ ಪಾಲಕರು: ಆದರೆ ಅಫ್ತಾಬ್‌ ಮನೆಯವರಿಂದಲೇ ಅಸಮ್ಮತಿ

ಮಗಳು ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ದಾಖಲು ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ಆದರೆ, ಈ ಪ್ರಕರಣದಲ್ಲಿ ಹುಡುಗಿಯನ್ನು ಆಕೆಯ ತಂದೆಯೇ ಸಾಯಿಸಿರಬಹುದು ಎನ್ನುವ ಅನುಮಾನ ಮೊದಲಿನಿಂದಲೂ ಇತ್ತು. ಸದ್ಯ ಆರೋಪಿ ನಿತೇಶ್‌ ಯಾದವ್‌ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಅಲ್ಲದೇ ಕೊಲೆಗೆ ಬಳಸಿದ್ದ ಆಯುಧ ಹಾಗೂ ಮೃತದೇಹ ಸಾಗಿಸಲು ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.  ಹುಡುಗಿಯನ್ನು ಗುರುತಿಸಲು, 20,000 ಮೊಬೈಲ್ ಫೋನ್‌ಗಳನ್ನು ಪೊಲೀಸರು ಟ್ರ್ಯಾಕ್‌ ಮಾಡಿದ್ದಾರೆ.

ಗೆಳತಿಯ ಕೊಂದು ನಾಲ್ಕು ದಿನ ಮೆಡಿಕಲ್‌ ಶಾಪ್‌ನಲ್ಲಿ ಇಟ್ಟಿದ್ದ ಪಾಪಿ!

ಮೊಬೈಲ್‌ಗಳ ಸ್ಥಳದ ಬಗ್ಗೆಯೂ ಕಣ್ಗಾವಲು ತಂಡ ತನಿಖೆ ನಡೆಸಿದೆ. ಜೇವರ್, ಜಬ್ರಾ ಟೋಲ್, ಖಂಡೌಲಿ ಟೋಲ್ ಅಲ್ಲದೆ ಹತ್ರಾಸ್, ಅಲಿಗಢ ಮತ್ತು ಮಥುರಾಗೆ ಬರುವ ಮಾರ್ಗಗಳಲ್ಲಿ ಅಳವಡಿಸಲಾಗಿರುವ 210 ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಶೋಧಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆ ತಾಯಿ ಮತ್ತು ಸಹೋದರ ಆಯುಷಿಯ ಮೃತ ದೇಹವನ್ನು ಖಚಿತಪಡಿಸಿದ್ದಾರೆ ಎಂದು ಹಂಗಾಮಿ ಎಸ್‌ಎಸ್‌ಪಿ ಎಂಪಿ ಸಿಂಗ್ ಹೇಳಿದ್ದಾರೆ. ಈ ಕುಟುಂಬವು ಮೂಲತಃ ಗೋರಖ್‌ಪುರ ಜಿಲ್ಲೆಯ ನಿವಾಸಿಗಳು ಎಂದು ಹೇಳಲಾಗಿದೆ ಆರೋಪಿ ನಿತೇಶ್ ಯಾದವ್ ಎಲೆಕ್ಟ್ರಾನಿಕ್ ಅಂಗಡಿ ಹೊಂದಿದ್ದಾರೆ.

click me!