ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಶಪಥ ಪೂರ್ಣಗೊಳಿಸಲು ಪೊಲೀಸರು, ಅಧಿಕಾರಿಗಳು ಬಿಡುವಿಲ್ಲದೆ ಕಾರ್ಯಾಚರಣೆ ನಡೆಸುತ್ತಿದೆ. ರೇಪ್ ಹಾಗೂ ಕೊಲೆ ಆರೋಪಿ ಮನ ಮೇಲೆ ಬುಲ್ಡೋಜರ್ ಹತ್ತಿಸಿದ್ದರೆ, ಇತ್ತ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ. ಇದೀಗ ಯೋಗಿ ರೀತಿ ಆಡಳಿತ ಬೇಕು ಅನ್ನೋ ಕೂಗೂ ಜೋರಾಗುತ್ತಿದೆ.
ಲಖನೌ(ಜೂ.27) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸದನದಲ್ಲಿ ಮಾಫಿಯಾ, ಗೂಂಡಾಗಳನ್ನು ಮಟ್ಟಹಾಕುತ್ತೇವೆ. ಮಣ್ಣಲ್ಲಿ ಹೂತು ಹಾಕುತ್ತೇವೆ ಎಂದು ಘರ್ಸಿಸಿದ್ದರು. ಇದಾದ ಬಳಿಕ ಘಟಾನುಘಟಿ ಗ್ಯಾಂಗ್‌ಸ್ಟರ್‌ಗಳ ಮೇಲೆ ಎನ್‌ಕೌಂಟರ್ ನಡೆದಿದೆ. ರೇಪ್ ಅಂಡ್ ಮರ್ಡರ್ ಆರೋಪಿಗಳ, ಕ್ರಿಮಿನಲ್ ಮನೆ ಮೇಲೆ ಬುಲ್ಡೋಜರ್ ಹತ್ತಿಸಿ ಧ್ವಂಸ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್, ಬುಲ್ಡೋಜರ್ ಸದ್ದು ಕಡಿಮೆಯಾಗಿತ್ತು. ಇದೀಗ ರೇಪ್ ಅಂಡ್ ಮರ್ಡರ್ ಆರೋಪಿ ಮನೆ ಮೇಲೆ ಬುಲ್ಡೋಜರ್ ಹತ್ತಿಸಿ ಧ್ವಂಸ ಮಾಡಲಾಗಿದೆ. ಇತ್ತ 13ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ನನ್ನು ಬೆಳ್ಳಂಬೆಳಗ್ಗೆ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ.
ಫತೇಪುರ್‌ನ 19 ವರ್ಷದ ಯುವತಿಯನ್ನು ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿ ಸಿಕಂದರ್ ಖಾನ್ ಮನೆ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ.ಸಿಕಂದರ್ ಖಾನ್ ಜೂನ್ 23 ರಂದು 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಫರೀದ್‌ಪುರ್‌ದ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯನ್ನು ಎಳೆಯೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಕಟ್ಟಡದಲ್ಲಿ ಇಟ್ಟಿಗೆಯಿಂದ ಜಜ್ಜಿ ಹತ್ಯೆಗೈದಿದ್ದ.
ಶುಕ್ರವಾರ ಮುಂಜಾನೆಯ ಸೇನೆಯೆ ಭರ್ಜರಿ ಭೇಟೆ, ಐವರು ಪಾಕ್ ಭಯೋತ್ಪಾದಕರ ಎನ್‌ಕೌಂಟರ್!
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಯುವತಿ ಬುದುಕುಳಿಯಲಿಲ್ಲ. ಹಿಂದೂ ಯುವತಿಯನ್ನು ಪ್ರೀತಿಸುವ ನಾಟಕವಾದಿ ಅತ್ಯಾಚಾರ ಎಸಗಿ ಕೊಲೈಗಿದಿರುವ ಮಾತು ಕೇಳಿಬಂದಿದೆ. ಈ ಕುರಿತು ಆರೋಪಿ ಸಿಕಂದರ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಪ್ರಾಥಮಿಕ ತನಿಖೆಯಲ್ಲಿ ಸಿಕಂದರ್ ಖಾನ್ ಕೃತ್ಯ ಎಸಗಿರುವ ಹಲವು ಸಾಕ್ಷ್ಯಗಳು ಲಭ್ಯವಾಗಿದೆ. ಇದರ ಬೆನ್ನಲ್ಲೇ ಅಧಿಕಾರಿಗಳು ಆರೋಪಿ ಸಿಕಂದರ್ ಖಾನ್ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ಇತ್ತ ಕೌಶಂಬಿ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ 13 ಪ್ರಕರಣಗಳ ಮೋಸ್ಟ್ ವಾಂಟೆಡ್ ಆರೋಪಿ ಗುಫ್ರಾನ್ ಮೇಲೆ ಪೊಲೀಸರು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ದರೋಡೆ, ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಿಸ್ಟ್‌ನಲ್ಲಿರುವ ಗುಫ್ರಾನ್ ಮಾಹಿತಿ ಪಡೆದು ಪೊಲೀಸರು ದಾಳಿ ಮಾಡಿದ್ದಾರೆ. ಗುಫ್ರಾನ್ ತಂಗಿರುವ ಮಾಹಿತಿ ಪಡೆದ ಪೊಲೀಸರು ನೇರವಾಗಿ ದಾಳಿ ನಡೆಸಿದ್ದಾರೆ. ಬೆಳಗ್ಗೆ 5 ಗಂಟೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಗುಫ್ರಾನ್ ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗುಫ್ರಾನ್ ತೀವ್ರವಾಗಿ ಗಾಯಗೊಂಡಿದ್ದಾನೆ.
ಉತ್ತರಪ್ರದೇಶ: ಸಿಎಂ ಯೋಗಿ ಆಡಳಿತದಲ್ಲಿ ಒಟ್ಟು 10900 ಎನ್‌ಕೌಂಟರ್!
ಪೊಲೀಸರು ಗುಫ್ರಾನ್ ವಶಕ್ಕೆ ಪಡೆದು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಈತನ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಎರಡು ಪ್ರಕರಣ ಉತ್ತರ ಪ್ರದೇಶದಲ್ಲಿ ಮತ್ತೆ ಸಂಚಲನ ಸಷ್ಟಿಸಿದೆ.