Praveen Nettaru murder; ಮುಸ್ಲಿಂ ಗೂಂಡಾಗಳಿಂದ ಈ ಹತ್ಯೆ, ಈಶ್ವರಪ್ಪ ಆರೋಪ

By Suvarna NewsFirst Published Jul 28, 2022, 5:10 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯ   ಪ್ರವೀಣ್ ನೆಟ್ಟಾರು ಹತ್ಯೆಯನ್ನು ಆ ಭಾಗದ ಮುಸ್ಲಿಂ ಗೂಂಡಾಗಳೇ ಮಾಡಿದ್ದಾರೆಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.28): ಮಂಗಳೂರಿನ ಮುಸ್ಲಿಂ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದು, ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ಕೊಲೆಗಡುಕರಿಗೆ ಖಡಕ್ ಸಂದೇಶ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ ಮಾತನಾಡಿದರು‌. ಮುಸ್ಲಿಂಮರು ಮಾನಸಿಕ ಸ್ಥಿತಿಯನ್ನು ಅವರು ಬದಲಾವಣೆ ಮಾಡಿಕೊಂಡಿಲ್ಲ. ಹೇಡಿಗಳ ರೀತಿ ಪ್ರವೀಣ್ ನೆಟ್ಟಾರು‌ ಹತ್ಯೆ ಮಾಡಿದ್ದಾರೆ. ಒಬ್ಬನೇ ಇದ್ದಾಗ ಹತ್ಯೆ ಮಾಡಿ ಓಡಿ ಹೋಗಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಗೂಂಡಾಗಳಿಗೆ ತಿಳಿ ಹೇಳಬೇಕು. ಇಡೀ ರಾಜ್ಯದ ಶಾಂತಿ, ವ್ಯವಸ್ಥೆ ಹಾಳು ಮಾಡ್ತಿದ್ದಾರೆ. ಬೆಳಗ್ಗೆ ತಾನೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿದ್ದೇನೆ.  ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆ ಸೂಕ್ತ ಕ್ರಮದ ಬಗ್ಗೆ ಚಿಂತನೆ ನಡೆಯುತ್ತಿದೆ. ಕೊಲೆ ಮಾಡದಂತೆ ಯಾವ ರೀತಿ ಭಯ ಇರಬೇಕೆಂಬ ಚಿಂತನೆ ಮಾಡಲಾಗ್ತಿದೆ. ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಹಿಂದೂ ಸಮಾಜ ದುರ್ಬಲ ಅಂತ ಅಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು  ನಿರಪರಾಧಿ ಹುಡುಗರ ಕೊಲೆ ಇಡೀ ರಾಜ್ಯ ದೇಶ  ಗಮನಿಸುತ್ತಿದೆ.

ರಾಜ್ಯದ ಸಿಎಂ, ಪ್ರಧಾನಿ, ಅಮಿತ್ ಶಾ ಅವರಲ್ಲಿ ಪ್ರಾರ್ಥನೆ. ಇದೇ ಕೊಲೆ ಕೊನೆ ಆಗಬೇಕು, ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು. ತುರ್ತಾಗಿ ಕಾನೂನು ರಚನೆ ಆಗಬೇಕು ಕೊಲೆಗಾರರು ಯಾರೆಂದು ಪತ್ತೆ ಹಚ್ಚಬೇಕು. ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆ ಇದೆ ಪತ್ತೆ ಹಚ್ಚಬೇಕು. ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ ಬಿಜೆಪಿ ಸರ್ಕಾರ ಇದ್ದಾಗ್ಯೂ ಕಾರ್ಯಕರ್ತರ ರಕ್ಷಣೆಯಲ್ಲಿ ಯಶಸ್ವಿ ಆಗಿಲ್ಲ. ನಾಯಕರು , ರಾಜ್ಯಕ್ಕೆ ನೋವಿದೆ. ಕೊಲೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯದ ಜನ, ಹಿಂದೂ ಸಮಾಜಕ್ಕೆ ಆಕ್ರೋಶವಿದೆ ಕೆಲವರು ಬಿಜೆಪಿ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ರಕ್ತವನ್ನು ಬೆವರು ರೂಪದಲ್ಲಿ ಸುರಿಸಿ ಹಿರಿಯರು ಪಕ್ಷ ಕಟ್ಟಿದ್ದಾರೆ. ಪಕ್ಷದ ಮೇಲೆ ಆಕ್ರೋಶ ತೀರಿಸುವುದರಲ್ಲಿ ಅರ್ಥ ಇಲ್ಲ. ಮುಸ್ಲಿಂ ಗುಂಡಾಗಳಿಂದ ಕೊಲೆ ಹಿನ್ನೆಲೆ ಕೊಲೆಗಳಾಗದಂತೆ ಕ್ರಮಕ್ಕೆ ಹಿರಿಯರಿಂದ ಚಿಂತನೆ ಸಿಟ್ಟಿನ ಕೈಲಿ ನಮ್ಮತನ ಕೊಟ್ಟು ರಾಜೀನಾಮೆ ತಪ್ಪಾಗುತ್ತದೆ ಸರ್ಕಾರದ ವಿರುದ್ಧ ರಾಜೀನಾಮೆ ಎಂದು ವಿಪಕ್ಷಗಳಿಗೆ ಅಸ್ತ್ರ ಅಧ್ಯಕ್ಷ ಕಟೀಲ್ ಬಳಿ ಮಾತಾಡಿದಾಗ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ಸಮಾಜ ಹೊಡೆತ ಕೊಟ್ಟರೆ ರಕ್ತದೋಕಳಿ ಹಿಂದೂ ಸಮಾಜ ಯಾವತ್ತೂ ಹಾಗೇ ಮಾಡಿಲ್ಲ. ರಾಜೀನಾಮೆ ಇನ್ನೂ ಮೆಚುರಿಟಿ ಆಗಿಲ್ಲವೇನೋ ಅನ್ನಿಸುತ್ತದೆ. ಮೆಚ್ಯುರಿಟಿ ಇಲ್ಲದ ಕೆಲವರು ರಾಜೀನಾಮೆಯಿಂದ ಹಲವರು ಹಾಗೇ ಮಾಡುತ್ತಾರೆ.

ಕಾನೂನು ಮತ್ತು ಸುವ್ಯವಸ್ಥೆ ಯಶಸ್ವಿ ಆಗದೇ ಇರುವುದೇ ಕೊಲೆಗೆ ಕಾರಣ ಯೋಗಿ ಮಾದರಿ ಹೆಜ್ಜೆ ಇಡಬೇಕೆಂಬುದರ ಬಗ್ಗೆ ಚಿಂತನೆ ಉತ್ತರ ಪ್ರದೇಶ ಬೇರೆ, ಕರ್ನಾಟಕ ಬೇರೆ ಒಂದೇ ಸಲಕ್ಕೆ ಹಾಗೇ ಕ್ರಮ ಕೈಗೊಳ್ಳಲು ಆಗದು. ಯಾವುದೇ ಧರ್ಮದವರು ತಪ್ಪು ಮಾಡಿದರೂ ಕ್ರಮ ಕೈಗೊಳ್ಳಿ ಎಂದು ಸಿದ್ಧರಾಮಯ್ಯ ಹೇಳ್ತಾರೆ ನೇರವಾಗಿ ಮುಸ್ಲಿಂ ಗುಂಡಾಗಳು ಎಂದು ಯಾಕೆ ಹೇಳಲ್ಲ? ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ಆಗಲೂ ಕಾಂಗ್ರೆಸ್ ಯಾರ ಪರವಾಗಿ ನಿಂತಿತ್ತು. ಕಾಂಗ್ರೆಸ್ ನವರದ್ದು ಹಿಂದೂ ವಿರೋಧಿ ಸಂಸ್ಕೃತಿ 
ಹಿಂದೂ ಕಾರ್ಯಕರ್ತನ ಕೊಲೆ ಮಾಡಿದವರ ವಿರುದ್ಧ ಆಕ್ರೋಶ ಇರಬೇಕು. ಬಿಜೆಪಿ ವಿರುದ್ಧ ಆಕ್ರೋಶ ಅಲ್ಲ ಉ.ಪ್ರ ಬುಲ್ಡೊಜರ್ ಮಾದರಿ ತರಬೇಕೆಂಬುದರ ಬಗ್ಗೆ ಚಿಂತನೆ ನಡೆಯುತ್ತಿದೆ.

ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಕೊಲೆ ಮಾಡದೆ ಇರುವಂಗೆ ಕಾನೂನು ಕೊಲೆಯಾದವರ ಮನೆಗೆ ಹೋಗಿ ಕಣ್ಣೀರು, ಸಾಂತ್ವನ ಸಹಜ ಆಗಿದೆ.  ನಾನು ಒಬ್ಬನೇ ಹೋಗುವಾಗ ಹೇಡಿಗಳಿಂದ ಕೊಲೆ ಆದರೆ? ಗೃಹ ಮಂತ್ರಿಗಳು ಏನು ಮಾಡಲು ಆಗುತ್ತದೆ.  ಹಿಂದಿನ ಸರ್ಕಾರದಲ್ಲಿದ್ದ ಸಿಎಂ, ಗೃಹ ಸಚಿವರು ವೀಕ್ ಇದ್ದರೇ? ಕೊಲೆ ಆಗದೇ ಇರುವಂತೆ ಮುನ್ನೆಚ್ಚರಿಕೆ ವಹಿಸುವ ಕಾನೂನು ಬೇಕು. ಬಿಜೆಪಿ ಕೊಲೆಗೆ ಕೊಲೆ ಉತ್ತರ ಕೊಟ್ಟುಕೊಂಡು ಬಂದಿಲ್ಲ. ಕಾರ್ಯಕರ್ತರನ್ನು ಬೆಳೆಸಿಕೊಳ್ಳುತ್ತ ಬಂದಿದೆ. ಕೊಲೆಗೆ ಮನ್ನಣೆ ಕೊಡುವ ಪ್ರಶ್ನೆಯಿಲ್ಲ ಹಿರಿಯರ ಜತೆ ಚರ್ಚಿಸಬೇಕು, ರಾಜೀನಾಮೆ ಪರಿಹಾರ ಅಲ್ಲ ರಾಜೀನಾಮೆ ಕೊಟ್ಟು ಬಳಿಕ ಮುಂದೇನು ನಿಮ್ಮದು? ಆರೋಪಿ ಪತ್ತೆ ಮಾಡುವುದು ದೊಡ್ಡ ಮಾತಲ್ಲ ಕೇಂದ್ರ ಸರ್ಕಾರ ಭಯ ಹುಟ್ಟಿಸಬೇಕಾ? ಸರ್ಕಾರ , ಹಿಂದು ಸಮಾಜದ ಸುದ್ದಿಗೆ ಬರದಂತೆ ಕಾನೂನು ಕೊಲೆಗಡುಕರ ಮಟ್ಟ ಹಾಕಲು ಕಾನೂನು ಕ್ರಮ. ಸೈದ್ಧಾಂತಿಕ ಕೊಲೆ ತಡೆಗೆ ಕಾನೂನು ರೂಪಿಸಬೇಕು. ಉ.ಪ್ರ ಹಿಂದೂ ಕಾರ್ಯಕರ್ತರಿಗೆ ಮುಟ್ಟಿದರೆ ಏನಾಗುತ್ತದೆಂಬ ಭಯವಿದೆ ಯೋಗಿ ಆದಿತ್ಯನಾಥ್ ಏನು ಮಾಡುತ್ತಾರೆಂದು ಗೊತ್ತಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಸೈದ್ಧಾಂತಿಕವಾಗಿ ಏನೇ ಭಿನ್ನಾಭಿಪ್ರಾಯ ಇದ್ರೂ ಕೊಲೆ ನಡೆಯಬಾರದು, ಆರಗ

ತಿಹಾರ್ ಜೈಲಿಗೆ ಹೋಗಿಬಂದ ಭ್ರಷ್ಟ ಬಿಜೆಪಿಗೆ ಭ್ರಷ್ಟಾಚಾರ ಅಂತಾರೆ. ಜನೋತ್ಸವವನ್ನು ಭ್ರಷ್ಟೋತ್ಸವ ಅಂತ ಕರೆಯುತ್ತಿರುವುದು ಸರಿಯಲ್ಲ. ಡಿಕೆಶಿ, ಸಿದ್ಧರಾಮಯ್ಯ ಹೇಳಿಕೆ ಸರಿಯಲ್ಲ ಬಿಜೆಪಿ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿದ್ದರೆ ಹೇಳಿ, ಸೋನಿಯಾ ಗಾಂಧಿ ದೇವಿ, ರಾಹುಲ್ ಗಾಂಧಿ ದೇವಿಯೇ? ಕಾಂಗ್ರೆಸ್ ಪಕ್ಷದ ಪ್ರಕಾರ ಇವರು ದೇವ ದೇವಿಯರೇ? ಇಡಿ ವಿಚಾರಣೆಗೆ ಸೋನಿಯಾ, ರಾಹುಲ್ ಕರೆಯಬಾರದೆ?  ಡಿಕೆಶಿ ಇನ್ನೂ ಬೇಲ್ ನಲ್ಲಿದ್ದಾರೆ, ಯಾವಾಗ ಜೈಲಿಗೆ ಹೋಗುತ್ತಾರೊ ಗೊತ್ತಿಲ್ಲ.

ಜಮೀರ್ ಅಹ್ಮದ್ ಅಂತ ಬ್ರೋಕರ್‌ನನ್ನು ಬಳಸಿಕೊಳ್ತಿದ್ದಾರೆ. ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಜಮೀರ್ ಹೇಳಿಕೆ ಬಾಯಿ ಮುಚ್ಚಿಕೊಂಡಿರಿ ಎಂದು ಜಮೀರ್ ಗೆ ಹೇಳಿದ್ದಾರೆ. ಡಿಕೆಶಿ, ಸಿದ್ಧರಾಮಯ್ಯ ಜಾತಿವಾದಿಗಳು ಇಂಥವರಿಗೆ ರಾಜ್ಯದ ಜನ ಸಿಎಂ ಮಾಡುತ್ತಾರೆಯೇ ಎಂದು ಗುಡುಗಿದರು.

click me!