ಬೆಳಗಾವಿ;  ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ವೃದ್ಧನ ಹತ್ಯೆ!

By Suvarna News  |  First Published Oct 28, 2021, 10:35 PM IST

* ಬೈಕ್ ನಿಯಂತ್ರಣ ತಪ್ಪಿ ಪಾದಚಾರಿಗೆ ಗುದ್ದಿತ್ತು
*  ಡಿಕ್ಕಿ ಸವಾರನನ್ನ ಕಾಲಿನಿಂದ ಒದ್ದು ಹತ್ಯೆ ಮಾಡಲಾಗಿದೆ
*  ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ನಲ್ಲಿ ಘಟನೆ
* ವಿಜಯ ಮಹಾಂತೇಶ್ ಹಿರೇಮಠ ಬೈಕ್ ಮೇಲೆ ಬರುತ್ತಿದ್ದರು


ಬೆಳಗಾವಿ(ಅ. 28) ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಹತ್ಯೆಯಾಗಿ (Murder) ಹೋಗಿದೆ.  ಬೈಕ್ ನಿಯಂತ್ರಣ ತಪ್ಪಿ ಪಾದಚಾರಿಗೆ ಗುದ್ದಿದೆ.. ಇದೆ ಕಾರಣಕ್ಕೆ ವಾಹನ ಸವಾರನನ್ನು ಕಾಲಿನಿಂದ ಒದ್ದು ಹತ್ಯೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ನಲ್ಲಿ ಘಟನೆ ನಡೆದಿದೆ. ವಿಜಯ ಮಹಾಂತೇಶ್ ಹಿರೇಮಠ ಬೈಕ್ ಮೇಲೆ ಬರುತ್ತಿದ್ದರು. ಈ ವೇಳೆ ಬೈಕ್‌ಗೆ ಹಿಂಬದಿಯಿಂದ ಕಾರೊಂದು ಗುದ್ದಿದೆ.  ಕಾರು ಗುದ್ದುತ್ತಿದ್ದಂತೆ ಪಾದಚಾರಿಗೆ ಹೋಗಿ ಬೈಕ್ ಡಿಕ್ಕಿಯಾಗಿದೆ.

Tap to resize

Latest Videos

undefined

ನೇಣಿಗೆ ಶರಣಾದ ನಿವೃತ್ತ ಪ್ರಾಧ್ಯಾಪಕ.. ಕಾರಣ ನಿಗೂಢ

ಬೈಕ್ ಗುದ್ದುತ್ತಿದ್ದಂತೆ ಆಕ್ರೋಶಗೊಂಡು ಸವಾರ ವಿಜಯಮಹಾಂತೇಶ್‌ಗೆ ಕಿತ್ತೂರು ತಾಲೂಕಿನ ಮಲ್ಲಾಪೂರ ಗ್ರಾಮದ ಅದೃಶ್ಯ ಎಂಬಾತ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದು 67ವರ್ಷದ ವಿಜಯಮಹಾಂತೇಶ್ ಸಾವು ಕಂಡಿದ್ದಾರೆ.  ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಹತ್ಯೆ ನಡೆಯುವ ಪ್ರಕರಣಗಳು ಇತ್ತೀಚೆಗೆ ಒಂದಾದ ಮೇಲೆ ಒಂದು ವರದಿಯಾಗುತ್ತಲೇ ಇವೆ.  ಚಪಾತಿ ಸರಿಯಾಗಿ ಬೆಂದಿಲ್ಲ ಎಂಬ ಕಾರಣಕ್ಕೆ  ಅಡುಗೆಯವ ಹತ್ಯೆ ಮಾಡಲಾಗಿತ್ತು. ಪಾಕೇಟ್ ಮನಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ತನ್ನ ತಂದೆಯನ್ನೇ ಗುಂಡಿಟ್ಟು ಹತ್ಯೆ ಮಾಡಿದ್ದ.

 

 

click me!