ಮಕ್ಕಳಿಗೆ ಅಶ್ಲೀಲ ವೀಡಿಯೋ ತೋರಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಪತ್ರಿಕೆ ಮಾಲೀಕ ಸಿಕ್ಕಿಬಿದ್ದಿದ್ದು, ಈತನಕ ಕಚೇರಿಯಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳು ಇದ್ದ CD,ಪೆನ್ ಡ್ರೈವ್ ಪತ್ತೆಯಾಗಿವೆ.
ಭೋಪಾಲ್, (ಜುಲೈ.15): ಭೋಪಾಲ್ ಮೂಲದ ಪತ್ರಿಕೆ ಮಾಲೀಕನನ್ನು ಅತ್ಯಾಚಾರ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಬಾಲಕಿಯರು ಮತ್ತು ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆತನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದು ಭೋಪಾಲ್ ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಸಾಯಿಕೃಷ್ಣ ಥೋಟಾ ಖಚಿತಪಡಿಸಿದ್ದಾರೆ.
ಡ್ರಗ್ಸ್ ಕೊಟ್ಟು ಪುತ್ರಿ ಮೇಲೆ ಮಲತಂದೆ ರೇಪ್: ಹೇಯ ಕೃತ್ಯಕ್ಕೆ ತಾಯಿಯೂ ಸಹಕಾರ!
68 ವರ್ಷದ ಪ್ಯಾರೆ ಮಿಯಾನ್ ಬಂಧಿತ ಆರೋಪಿ. ಮಿಯಾನ್ ಶ್ರೀನಗರದಲ್ಲಿರುವ ಮಾಹಿತಿ ಪಡೆದು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದೆ.
ಕಳೆದ ದಿನವಷ್ಟೇ ಆತನಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ, ಅಶ್ಲೀಲ ಸಿಡಿ, ಐಷಾರಾಮಿ ಕಾರುಗಳು, ಮದ್ಯದ ಬಾಟಲಿ, ಕಾಡು ಪ್ರಾಣಿಗಳ ಮೂಳೆಗಳು ಸಿಕ್ಕಿವೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೋ), ಅಬಕಾರಿ ಕಾಯ್ದೆ, ವನ್ಯಜೀವಿ ಕಾಯ್ದೆ, ಅತ್ಯಾಚಾರ ಪ್ರಕರಣ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ.
ಈತನ ಕಚೇರಿಯಲ್ಲಿ ದಾಳಿ ಮಾಡಿ ಅಶ್ಲೀಲ ಫೋಟೋ, ವಿಡಿಯೋಗಳು ಇದ್ದ ಸಿಡಿ, ಡಿವಿಡಿ, ಪೆನ್ ಡ್ರೈವ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಮಕ್ಕಳಿಗೆ ಅಶ್ಲೀಲ ವೀಡಿಯೋ ತೋರಿಸಿ ಅತ್ಯಾಚಾರ ಎಸಗಿರುವ ಆರೋಪವಿದ್ದು, ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆ ದೂರು ದಾಖಲಿಸಿದ್ದಾರೆ ಎಂದು ಸಾಯಿ ಕೃಷ್ಣ ಥೋಟಾ ಸ್ಪಷ್ಟಪಡಿಸಿದ್ದಾರೆ.