ಬೆಂಗಳೂರಲ್ಲಿ ಕಳೆದ 20 ವರ್ಷದಿಂದ ಜೊತೆಗಿದ್ದ ತೃತೀಯ ಲಿಂಗಿಯನ್ನು ಕೊಲೆಗೈದ ಮಹಿಳೆ!

By Sathish Kumar KH  |  First Published May 10, 2024, 4:19 PM IST

ಬೆಂಗಳೂರಿನ ಮಹಿಳೆಯೊಬ್ಬಳು ಕಳೆದ 20 ವರ್ಷಗಳಿಂದ ಜೊತೆಯಲ್ಲಿ ವಾಸವಾಗಿದ್ದ ತೃತೀಯ ಲಿಂಗಿಯನ್ನೇ ಕೊಲೆ ಮಾಡಿ ಹೋಗಿದ್ದಾಳೆ.


ಬೆಂಗಳೂರು (ಮೇ 10): ಬೆಂಗಳೂರಿನ ಜೆ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರಿಗೆ ಮೃತ ವ್ಯಕ್ತಿಯ ಜೊತೆಗಿದ್ದ ಮಹಿಳೆಯೇ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಕೊಲೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಾಸವಿದ್ದ ಮಹಿಳೆ ತನ್ನ ಗಂಡ ತೀರಿಕೊಂಡ ಮೇಲೆ ಕಳೆದ 20 ವರ್ಷಗಳಿಂದ ತೃತೀಯ ಲಿಂಗಿ ಮಂಜಿ ಬಾಯಿ @ ಮಂಜನಾಯ್ಕ ಜೊತೆಗೆ ವಾಸವಿದ್ದಳು. ಆದರೆ, ಕಳೆದೊಂದು ವಾರದ ಹಿಂದೆ ಇಬ್ಬರ ನಡುವೆ ನಡೆದ ಜಗಳದಿಂದಾಗಿ ತೃತೀಯ ಲಿಂಗಿಯನ್ನು ಕೊಲೆ ಮಾಡಿ ಹೋಗಿದ್ದಳು. ಈ ಘಟನೆ ನಡೆದ ಮೂರ್ನಾಲ್ಕು ದಿನಗಳ ನಂತರ ಕೊಳೆತು ದುರ್ವಾಸನೆ ಬಂದಿದ್ದು, ನೆರೆಹೊರೆಯವರು ಪೊಲೀಸ್ ಠಾಣೆಗೆ ತಿಳಿಸಿದ್ದರು. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರಿಗೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.

Tap to resize

Latest Videos

10ನೇ ತರಗತಿ ಪಾಸ್‌ ಆದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಹತ್ಯೆ! ರುಂಡಕ್ಕಾಗಿ ಪೊಲೀಸರ ತೀವ್ರ ಹುಡುಕಾಟ

ಕೊಲೆಯಾದ ಮೃತರನ್ನು ಮಂಜಿ ಬಾಯ್ @ ಮಂಜ ನಾಯ್ಕ್ (42) ಎಂದು ಗುರುತಿಸಲಾಗಿದೆ. ಇವರು ತೃತೀಯ ಲಿಂಗಿ ಆಗಿದ್ದರು. ಈ ಘಟನೆಯ ಬಗ್ಗೆ ಜೆ.ಬಿ.ನಗರ ಪೊಲೀಸ್ ಠಾಣೆಯ ಪೊಲೀಸರು ಮೇ 3ರಂದು UDR ಪ್ರಕರಣ ದಾಖಲಿಸಿಕೊಂಡಿದ್ದರು. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆಯೋ ಎಂದು ತಿಳಿಯದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮೃತ ಜೊತೆಯಲ್ಲಿದ್ದ ಮಹಿಳೆಯೇ ಕೊಲೆ ಮಾಡಿದ್ದಾಳೆಂದು ತಿಳಿದುಬಂದಿದೆ. 

ತೃತೀಯ ಲಿಂಗಿ ಮಂಜಿಬಾಯಿ ಅವರೊಂದಿಗೆ ಮಹಿಳೆ ಪ್ರೇಮ (51) ಕಳೆದ ಇಪ್ಪತ್ತು ವರ್ಷಗಳಿಂದ ವಾಸವಾಗಿದ್ದರು.ಮಂಜಿ ಬಾಯ್ ಕಂಪನಿಯೊಂದರ ಕ್ಯಾಂಟಿನ್ ನಲ್ಲಿ ಕೆಲಸ ಮಾಡ್ತಿದ್ದರು. ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಕಳೆದ ಏ.26 ರಂದು ಮನೆಯಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ಈ ವೇಳೆ ತೃತೀಯ ಲಿಂಗಿ ಮಂಜಿಬಾಯಿ  ಮಹಿಳೆಗೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದನು. ಆಗ ಭಯಗೊಂಡ ಮಹಿಳೆ ತನ್ನ ಪ್ರಾಣ ಉಳಿಸಿಕೊಳ್ಳಲು ಟವಲ್ ಅವನ್ನು ಮಂಜಿಬಾಯಿ ಕುತ್ತಿಗೆಗೆ ಬಿಗಿಯಾಗಿ ಹಿಡಿದುಕೊಂಡಿದ್ದಾಳೆ.

ಶಿವಮೊಗ್ಗ ರೌಡಿಶೀಟರ್‌ಗಳ ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್; ಕೊಲೆ ಮಾಡಲು ಬಂದವರೇ ಬೀದಿ ಹೆಣವಾದರು!

ಆಗ ಉಸಿರುಗಟ್ಟಿ ಪ್ರಾಣ ಹೋಗಿದೆ. ಮಂಜಿಬಾಯಿ ಸತ್ತಿದ್ದ ಬಗ್ಗೆ ತಿಳಿಯುತ್ತಿದ್ದಂತೆಯೇ ಪ್ರೇಮಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಳು. ಪೊಲೀಸರು ಆಕೆಯ ಜಾಡನ್ನು ಹಿಡಿದುಕೊಂಡು ಹೋಗಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿದ ಸತ್ಯ ಬಾಯಿಬಿಟ್ಟಿದ್ದಾಳೆ. ಈಗ ಪ್ರೇಮಾಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

click me!