* ಬೆಂಗಳೂರಿನಲ್ಲಿ ಗೃಹಿಣಿ ನಾಪತ್ತೆ ಪ್ರಕರಣ
* ಹೆಂಡತಿಯನ್ನೆ ಕೊಲೆ ಮಾಡಿ ಕೆರೆ ಎಸೆದಿದ್ದ ಪತಿ
* ಹೆಂಡತಿಯನ್ನೆ ಕೊಲೆ ಮಾಡಿ ಚಿಕ್ಕಬಾಣಾವಾರ ಕೆರೆಗೆ ಎಸೆದಿದ್ದ ಪತಿ ಮುಬಾರಕ್
* ದಾವಣಗೆರೆ ಮೂಲದ ದಂಪತಿಗೆ ಇಬ್ಬರು ಮಕ್ಕಳು
ಬೆಂಗಳೂರು(ಆ. 23) ಬೆಂಗಳೂರಿನಲ್ಲಿ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಹೆಂಡತಿಯನ್ನೆ ಕೊಲೆ ಮಾಡಿ ಪತಿಯೇ ಕೆರೆಗೆ ಎಸೆದಿದ್ದ. ಶಿರಿನ್ (28) ಗಂಡನಿಂದ ಕೊಲೆ ಯಾದ ಗೃಹಿಣಿ ಹೆಂಡತಿಯನ್ನೆ ಕೊಲೆ ಮಾಡಿ ಚಿಕ್ಕಬಾಣಾವಾರ ಕೆರೆಗೆ ಪತಿ ಮುಬಾರಕ್ ಎಸೆದಿದ್ದ.
ಮುಬಾರಕ್ (33) ಹೆಂಡತಿಯನ್ನ ಕೊಲೆ ಮಾಡಿರುವ ಆರೋಪಿ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿ ತರಬನಹಳ್ಳಿಯಲ್ಲಿ ಕುಟುಂಬ ವಾಸವಾಗಿತ್ತು. 7 ವರ್ಷದ ಹಿಂದೆ ಮದುವೆಯಾಗಿದ್ದವರಿಗೆ ಇಬ್ಬರು ಮಕ್ಕಳಿದ್ದಾರೆ.
ಮೈಸೂರು; ಆಭರಣದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ
ಪ್ರತಿನಿತ್ಯ ಸಣ್ಣ ಪುಟ್ಟ ವಿಚಾರಕ್ಕೆ ದಂಪತಿ ನಡುವೆ ಜಗಳ ಆಗುತ್ತಿತ್ತು. ಮೂಲತಃ ದಾವಣಗೆರೆಯವರಾಗಿದ್ದ ದಂಪತಿ ಬೆಂಗಳೂರಿನಲಲ್ಲಿ ವಾಸವಿದ್ದರು. ಜಗಳ ವಿಕೋಪಕ್ಕೆ ಹೋಗಿದ್ದು ಗಂಡನೇ ಪತ್ನಿ ಹತ್ಯೆ ಮಾಡಿ ಕರೆಗೆ ಹಾಕಿದ್ದಾನೆ. ಮೃತ ದೇಹ ಚಿಕ್ಕಬಾಣಾವರ ಕೆರೆಯಲ್ಲಿ ಪತ್ತೆಯಾಗಿದ್ದು ಘಟನೆ ಸಂಬಂಧ ಆರೋಪಿ ಮುಬಾರಕ್ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿತ್ತಿದ್ದಾರೆ.