Bengaluru Fridge Murder: ಪೋಸ್ಟ್‌ ಮಾರ್ಟಮ್‌ಗೆ 59 ಪೀಸ್‌ ಜೋಡಿಸಿಯೇ ಸುಸ್ತಾದ ವೈದ್ಯರು, ಕೊಲೆಯ ರೀತಿ ಕಂಡು ಶಾಕ್‌!

By Santosh NaikFirst Published Sep 22, 2024, 6:16 PM IST
Highlights

Postmortem Report  Of mahalakshmi ಮಹಾಲಕ್ಷ್ಮೀ ಎನ್ನುವ ಯುವತಿಯನ್ನು ಕೊಂದು 59 ಪೀಸ್‌ಗಳನ್ನಾಗಿ ತುಂಡು ಮಾಡಿ ಫ್ರಿಜ್‌ನಲ್ಲಿ ತುಂಬಿದ ಘಟನೆಗೆ ಸಂಬಂಧಿಸಿದಂತೆ, ಭಾನುವಾರ ಬೌರಿಂಗ್‌ ಆಸ್ಪತ್ರೆಯಲ್ಲಿ ಆಕೆಯ ಪೋಸ್ಟ್‌ ಮಾರ್ಟಮ್‌ ನಡೆದಿದೆ. ಈ ವೇಳೆ ಹಂತಕ ಆಕೆಯ ತಲೆಯನ್ನು ಮೂರು ಭಾಗ ಮಾಡಿ ಕಟ್‌ ಮಾಡಿದ್ದು ಗೊತ್ತಾಗಿದೆ.

ಬೆಂಗಳೂರು (ಸೆ.22):  ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲಿ ಭಾನುವಾರ ಬೆಳಗ್ಗೆ  ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಬೆಳಗ್ಗೆ 10 ಘಂಟೆಯ ಬಳಿಕ ಪೋಸ್ಟ್‌ ಮಾರ್ಟಮ್‌ ನೆರವೇರಿದೆ. ಪೀಸ್ ಪೀಸ್  ಆಗಿದ್ದ ಬಾಡಿಯನ್ಜು ಪೋಸ್ಟ್ ಮಾರ್ಟಂ ಮಾಡುವುದೇ ವೈದ್ಯರಿಗೆ ದೊಡ್ಡ ಸವಾಲಾಗಿದೆ ಮಹಾಲಕ್ಷ್ಮಿ ಪೋಸ್ಟ್ ಮಾರ್ಟಂ ಹೇಗೆ ನಡೆಯಿತು ಅನ್ನೋದನ್ನ ನೋಡೋದಾದರೆ, ಮೊದಲು ಪ್ರತಿ ಪೀಸ್‌ಗೂ ನಂಬರ್‌ ಹಾಕಲಾಗಿತ್ತು. ಆ ಬಳಿಕ ಪ್ರತಿ ಪೀಸ್ ನ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಹಾಗೂ ಸಿಟಿ ಸ್ಕ್ಯಾನ್ ಎಕ್ಸರೇ ಕೂಡ ಮಾಡಲಾಗಿದೆ. ಆ ಬಳಿಕ ಆಯ್ದ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗಿದೆ. ಆಯ್ದ ತುಂಡುಗಳ ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಕೂಡ ನಡೆದಿದೆ. ಕೊನೆಯಲ್ಲಿ ಡಿಎನ್‌ಎ ಪರೀಕ್ಷೆ ನಡೆದಿದೆ. ಹಾಗೇನಾದರೂ ತೀರಾ ಅವಶ್ಯವಿದ್ದರೆ, ಬಾಡಿ ರೀಅಸೆಂಬಲ್‌ ಅಂದರೆ ದೇಹವನ್ನು ಮರು ಜೋಡಿಸುವ ಕಾರ್ಯ ನಡೆಯಲಿದೆ ಎನ್ನಲಾಗಿತ್ತು. ಅಂತಿಮವಾಗಿ ಕಂಡು ಬಂದ ಅಂಶಗಳ ಆಧಾರದ ಮೇಲೆ ವರದಿ ನೀಡಲಾಗುತ್ತದೆ.

ಪೋಸ್ಟ್‌ ಮಾರ್ಟಮ್‌ ವೇಳೆ ಮಹಾಲಕ್ಷ್ಮಿಯ ತಲೆಯನ್ನ ಮೂರು ಭಾಗವಾಗಿ ಹಂತಕ ಕಟ್‌ ಮಾಡಿದ್ದಾನೆ ಎನ್ನುವುದು ಗೊತ್ತಾಗಿದೆ. ತುಂಡರಿಸಿರುವ ದೇಹವನ್ನ ನೋಡಿ ಇಡೀ ಕುಟುಂಬ ಶಾಕ್‌ ಆಗಿದೆ. ಇನ್ನು ದೇಹವನ್ನು ಕತ್ತರಿಸಿರುವ ರೀತಿ ನೋಡಿ ವೈದ್ಯರೂ ಕೂಡ ಅಚ್ಚರಿ ಪಟ್ಟಿದ್ದಾರೆ. ತುಂಡರಿಸಿದ ದೇಹವನ್ನ ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹಂತ ಹಂತವಾಗಿ ಜೋಡಿಸಿ ಮರಣೋತ್ತರ ಪರೀಕ್ಷೆ ನಡೆದಿದೆ. ಈ ಕಾರಣದಿಂದಾಗಿ ಪೋಸ್ಟ್‌ ಮಾರ್ಟಮ್‌ಗೆ ಸಾಕಷ್ಟು ಸಮಯ ಕೂಡ ಆಗಿದೆ.

ಇಂದೇ ಅಂತ್ಯಸಂಸ್ಕಾರ: ಮಧ್ಯಾಹ್ನದ ವೇಳೆಗೆ ಮಹಾಲಕ್ಷ್ಮೀಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಇಂದೇ ಆಕೆಯ ಅಂತ್ಯಸಂಸ್ಕಾರ ನಡೆಯಲಿದೆ. ಲಾಲಾಬಾಗ್ ನ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.

Latest Videos

BENGALURU FRIDGE MURDER: ಮೂರು ಹಂತದ ತನಿಖೆಗೆ ಮುಂದಾದ ಪೊಲೀಸ್‌, ಕೊಲೆಗಾರ ಸಿಗ್ತಾನಾ?

ಶಶಿಧರ್‌ ವಶಕ್ಕೆ: ಈ ನಡುವೆ ಪ್ರಕರಣದ ಮೊದಲ ಸಕ್ಸಸ್‌ ಪೊಲೀಸರಿಗೆ ಸಿಕ್ಕಿದ್ದು, ಮಹಾಲಕ್ಷ್ಮಿಯ ಸ್ನೇಹಿತನಾಗಿದ್ದ ಶಶಿಧರ್‌ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವೈಯಾಲಿಕಾವೆಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

Bengaluru Fridge Murder: ಮಹಾಲಕ್ಷ್ಮೀ ಪೀಸ್‌ ಮರ್ಡರ್‌, ಯಾರ ಮೇಲಿದೆ ಮನೆಯವರ ಅನುಮಾನ?

click me!