Bengaluru Fridge Murder: ಮಹಾಲಕ್ಷ್ಮಿಯ ದೇಹ 30 ಪೀಸ್‌, ಫ್ರಿಜ್‌ನಿಂದ ಹೊರಬರ್ತಿತ್ತು ಹುಳಗಳು!

By Santosh Naik  |  First Published Sep 21, 2024, 6:47 PM IST

ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದ ಭಯಾನಕ ಕೊಲೆಯಲ್ಲಿ 29 ವರ್ಷದ ಯುವತಿಯನ್ನು ಕೊಲೆ ಮಾಡಿ ದೇಹವನ್ನು 30 ಪೀಸ್‌ ಮಾಡಿ ಫ್ರಿಜ್‌ನಲ್ಲಿ ಇರಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.


ಬೆಂಗಳೂರು (ಸೆ.21): ಉದ್ಯಾನಗರಿ ಭಯಾನಕ ಕೊಲೆಗೆ ಬೆಚ್ಚಿಬಿದ್ದಿದೆ. ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ದೆಹಲಿಯ ಶ್ರದ್ಧಾ ವಾಕರ್‌ ರೀತಿಯ ಮರ್ಡರ್‌ ನಡೆದಿದ್ದು, ನೇಪಾಳ ಮೂಲದ 29 ವರ್ಷ ಯುವತಿ ಮಹಾಲಕ್ಮೀಯನ್ನು ಕೊಂದಿರುವುದು ಮಾತ್ರವಲ್ಲದೆ, ಆಕೆಯ ದೇಹವನ್ನು 30 ಪೀಸ್‌ ಮಾಡಿ ಫ್ರಿಜ್‌ನಲ್ಲಿ ಇರಿಸಲಾಗಿದೆ. ದೇಹವನ್ನು ಪೀಸ್‌ ಪೀಸ್‌ ಮಾಡಿ ಫ್ರಿಜ್‌ನಲ್ಲಿಟ್ಟು ಹಂತಕ ತೆರಳಿದ್ದಾರೆ. ಈ ವೇಳೆ  ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕಿದೆ. ಹಂತ ಹಂತವಾಗಿ ರಕ್ತ ಫ್ರೀಜ್ ನಿಂದ ತೊಟ್ಟಿಕ್ಕಲು ಆರಂಭಿಸಿದೆ. ರಕ್ತ ತೊಟ್ಟಿಕ್ಕಿ ನೆಲದ ಮೇಲೆ ಹರಿದಿದ್ದು, ಅದರಲ್ಲಿ ಗೊಬ್ಬರ ಮಾದರಿಯ ಹುಳಗಳು ಜನ್ಮತಾಳಿವೆ ಎನ್ನಲಾಗಿದೆ. ಸದ್ಯ ಪೊಲೀಸರು ಹಾಗೂ ಎಫ್‌ಎಸ್‌ಎಲ್‌ ತಂಡದಿಂದ ಮಾಹಿತಿ ಕಲೆಹಾಕಾಗುತ್ತಿದೆ. ಫ್ರಿಜ್‌ನಿಂದ ಪೀಸ್‌ ಪೀಸ್‌ ಆದ ಬಾಡಿ ತೆಗೆಯಲು ಸಿದ್ದತೆ ನಡೆಯುತ್ತಿದೆ. ಬೌರಿಂಗ್ ಆಸ್ಪತ್ರೆ ಸಿಬ್ಬಂದಿಗಳಿಂದ ಫ್ರಿಡ್ಜ್  ನಿಂದ ದೇಹದ ತುಂಡುಗಳನ್ನ ತೆಗೆಯಲು ಪ್ರಯತ್ನಿಸಲಾಗುತ್ತಿದೆ. ಈ ವೇಳೆ ಸೋಕೊ, ಎಫ್ ಎಸ್ ಎಲ್ ಅವರಿಂದ ಎಲ್ಲಾ ಆಯಾಮ ದಲ್ಲಿ ಸ್ಯಾಂಪಲ್ ಕಲೆ ಹಾಕಲಾಗುತ್ತಿದೆ.

ಇನ್ನು  ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಪತಿ ಹುಕುಮ್‌ ಸಿಂಗ್ ರಾಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದರೊಂದಿಗೆ ಮಹಾಲಕ್ಷ್ಮಿ ಕುಟುಂಬಸ್ಥರನ್ನು ಕರೆಸಿ ಕೂಡ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಖುದ್ದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ರವರಿಂದ ವಿಚಾರಣೆ ನಡೆಯುತ್ತಿದೆ. ಕೊನೆಯದಾಗಿ ಹೆಂಡತಿಯನ್ನು ಭೇಟಿ ಮಾಡಿದ್ದು ಯಾವಾಗ? ಗಂಡ-ಹೆಂಡತಿ ದೂರ ಇದ್ದಿದ್ದು ಯಾಕೆ? ಎನ್ನುವ ಪ್ರಶ್ನೆಗಳನ್ನು ಹುಕುಮ್‌ ಸಿಂಗ್‌ಗೆ ಕೇಳಲಾಗಿದೆ.

ಹುಕುಮ್‌ ಸಿಂಗ್‌ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ  ಪತಿಯಿಂದ ಹೀಗಾಗಲೇ ಡಿವೋರ್ಸ್ ಪಡೆದುಕೊಂಡಿದ್ದಳು. ನಾಲ್ಕು ವರ್ಷದ ಮಗು ತಂದೆಯೊಂದಿಗೆ ಇದ್ದು, ಆಗಾಗ ಪತ್ನಿಗೆ ಮಗುವನ್ನು ಭೇಟಿ ಮಾಡಿಸುತ್ತಿದ್ದ. ಹಲವು ದಿನದಿಂದ ಕರೆ ಮಾಡಿದ್ದರೂ ಪತ್ನಿ ಕರೆ ಸ್ವೀಕರಿಸುತ್ತಿರಲಿಲ್ಲ. ಇಂದು ಪತಿ ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲು ತರೆದಾಗ ಫ್ರಿಜ್‌ನಿಂದ ಹುಳಗಳು ಹೊರಬರುತ್ತಿದ್ದವು. ಸುಮಾರು 10-15ದಿನದ ಹಿಂದೆಯೆ ಕೊಲೆ ನಡೆದಿರೊ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಪೊಲೀಸರಿಗೆ ಕೊಲೆ ತನಿಖೆಯೇ ಚಾಲೆಂಜ್: ಇನ್ನು ಪೊಲೀಸರಿಗೆ ಕೊಲೆ ತನಿಖೆಯೇ ದೊಡ್ಡ ಚಾಲೆಂಜ್‌ ಆಗಿದೆ. ಎಷ್ಟು ದಿನದ ಹಿಂದೆ ಕೊಲೆಯಾಗಿದೆ ಎನ್ನುವ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ. ಎಷ್ಟು ದಿನದ ಹಿಂದಿನಿಂದ ಈಕೆ ಹೊರ ಬಂದಿಲ್ಲ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಈಕೆ ಕೆಲಸ ಮಾಡುತ್ತಿದ್ದ ಜಾಗದಲ್ಲೂ ವಿಚಾರಣೆ ನಡೆಸಲಾಗಿದೆ. ಎಷ್ಟು ದಿನದಿಂದ ಈಕೆ ಕೆಲಸಕ್ಕೆ ಬಂದಿಲ್ಲ. ರಜೆ ಹಾಕುವ ಬಗ್ಗೆ ಮುಂಚಿತವಾಗಿ ಮಾಹಿತಿ ಕೊಟ್ಟಿದ್ದರೇ? ಕೆಲಸಗಾರರ ಬಳಿ ಏನಾದರೂ ಹೇಳಿಕೊಂಡಿದ್ದರೇ? ಎನ್ನುವ ಆಯಾಮದಲ್ಲೂ ತನಿಖೆ ಆಗುತ್ತಿದೆ. ಆಕೆಯ ಲಾಸ್ಟ್ ಕಾಲ್ ಬಗ್ಗೆ ಕೂಡ ಪರಿಶೀಲನೆ ಮಾಡಲಾಗಿದೆ. ಟವರ್ ಡಂಪ್ ತೆಗೆದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

Tap to resize

Latest Videos

ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿ ಕೇಸ್‌?: ಯುವತಿಯನ್ನು ಕೊಂದು 30ಕ್ಕೂ ಅಧಿಕ ಪೀಸ್‌ ಮಾಡಿ ಫ್ರಿಜ್‌ನಲ್ಲಿಟ್ಟ ಹಂತಕ!

ಎಸ್ಕೇಪ್‌ ಆಗಲು ಮಾಸ್ಟರ್‌ ಪ್ಲ್ಯಾನ್‌:
ಕೊಲೆ ಮಾಡಿ ಎಸ್ಕೇಪ್ ಆಗಲು ಹಂತಕ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಫ್ರಿಜ್ ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ಟರೆ ಅಷ್ಟು ಸುಲಭವಾಗಿ ಗೊತ್ತಾಗೋದಿಲ್ಲ. ತಪ್ಪಿಸಿಕೊಳ್ಳಲು ಸಹ ಸಮಯ ಸಿಗಲಿದೆ ಅಂತಾ ಪ್ಲ್ಯಾನ್‌ ಮಾಡಿದ್ದಾನೆ. ಕೊಲೆ ನಡೆದು ಅಂದಾಜು 15 ದಿನಗಳ ಬಳಿಕವಾಸನೆ ಬರಲು ಶುರುವಾಗಿದೆ. ತಕ್ಷಣಕ್ಕೆ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಫ್ರಿಜ್‌ಅನ್ನು ಹಂತಕ ಆನ್‌ ಮಾಡಿ ಹೋಗಿದ್ದ. 15 ದಿನದ ಹಿಂದೆ ಘಟನೆ ನಡೆದಿದ್ದರೂ ಆರೋಪಿಗೆ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿದೆ. ಇದರಿಂದಾಗಿ ಆರೋಪಿಯ ಜಾಡು ಪತ್ತೆ ಮಾಡೋದೆ ಪೊಲೀಸರಿಗೆ ಸವಾಲು ಎನಿಸಿದೆ.

ಶ್ರದ್ಧಾ ವಾಕರ್‌ ಕುರಿತಾದ ಕೇಸ್‌ನ ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

click me!