Bengaluru Fridge Murder: ಮಹಾಲಕ್ಷ್ಮೀ ಪೀಸ್‌ ಮರ್ಡರ್‌, ಯಾರ ಮೇಲಿದೆ ಮನೆಯವರ ಅನುಮಾನ?

By Santosh Naik  |  First Published Sep 22, 2024, 4:53 PM IST

ಬೆಂಗಳೂರಿನಲ್ಲಿ 29 ವರ್ಷದ ಮಹಾಲಕ್ಮೀ ಎಂಬ ಯುವತಿಯನ್ನು ಕೊಲೆ ಮಾಡಿ, ದೇಹವನ್ನು 59 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇಡಲಾಗಿದೆ. ಈ ಘಟನೆ ಮಲ್ಲೇಶ್ವರದಲ್ಲಿ ನಡೆದಿದ್ದು, ಪೊಲೀಸರು ನಾಲ್ವರ ಬೆನ್ನು ಬಿದ್ದಿದ್ದಾರೆ.


ಬೆಂಗಳೂರು (ಸೆ.22): ಉದ್ಯಾನಗರಿ ಬೆಂಗಳೂರಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಭೀಕರ ಕೊಲೆ ನಡೆದಿದೆ. 29 ವರ್ಷದ ಮಹಾಲಕ್ಮೀ ಎನ್ನುವ ಯುವತಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದು ಮಾತ್ರವಲ್ಲದೆ, ಆಕೆಯ ದೇಹವನ್ನು 59 ಪೀಸ್‌ಗಳನ್ನಾಗಿ ಪಾಡಿ 165 ಲೀಟರ್‌ನ ಫ್ರಿಜ್‌ಗೆ ತುಂಬಲಾಗಿದೆ. ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ನಡೆದ ಘಟನೆ ಶನಿವಾರ ಬೆಳಕಿಗೆ ಬಂದಿತ್ತು.ಕೊಲೆ ನಡೆದು 15ಕ್ಕೂ ಹೆಚ್ಚಿನ ದಿನಗಳಾಗಿರುವ ಸಾಧ್ಯತೆ ಇದ್ದು, ಫ್ರಿಜ್‌ನಿಂದ ಹುಳಗಳು ಬೀಳುತ್ತಿರುವ ವಿಡಿಯೋಗಳು ಕೂಡ ವೈರಲ್‌ ಆಗಿದೆ. ಇದರ ನಡುವೆ ಆಕೆಯ ದೇಹವನ್ನು ತುಂಡು ತುಂಡು ಮಾಡಿ ಫ್ರಿಜ್‌ಗೆ ತುಂಬಿಟ್ಟಿರುವ ಫೋಟೋಗಳು ಕೂಡ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಮನೆಯ ಒಗೆ ಹೋಗುವಾಗ ಮಹಾಲಕ್ಮಿಯ ತಾಯಿ ವಿಡಿಯೋ ಕೂಡ ಮಾಡಿಕೊಂಡಿದ್ದು, ಫ್ರಿಜ್‌ ಬಾಗಿಲಿ ತೆರೆದು ನೋಡಿದಾಗ ಮಗಳ ದೇಹ ಪೀಸ್‌ ಪೀಸ್‌ ಆಗಿರುವುದು ಕಂಡು ಕಿರುಚಾಡುತ್ತಲೇ ಹೊರಗೆ ಓಡಿ ಹೋಗಿರುವ ದೃಶ್ಯಗಳೂ ಲಭ್ಯವಾಗಿದೆ. ಈ ನಡುವೆ ಮಹಾಲಕ್ಮಿಯ ಪತಿ, ಆಕೆಯ ತಾಯು ಹಾಗೂ ತಂಗಿ ಕೆಲವರ ಮೇಲೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಮಹಾಲಕ್ಮೀಯ ಪತಿ ಹೇಮಂತ್‌ ದಾಸ್‌ ಮಾತನಾಡಿ, 'ಘಟನೆಯ ಬಗ್ಗೆ ನನಗೆ ನಿನ್ನೆ ಗೊತ್ತಾಗಿತ್ತು. ಮನೆಯ ಮಾಲೀಕರು ಫೋನ್‌ ಮಾಡಿ ತಿಳಿಸಿದ್ದರು. ರೂಮ್‌ನಿಂದ ಏನೋ ಸ್ಮೆಲ್‌ ಬರುತ್ತಿದೆ. ನಾನು ನಿನ್ನೆ ಬಂದು ನೋಡಿದಾಗ ಘಟನೆ ಗೊತ್ತಾಗಿದೆ. ಮಹಾಲಕ್ಷ್ಮಿ ಕುಟುಂಬ ನೇಪಾಳ ಮೂಲದವರು 35 ವರ್ಷದಿಂದ ನೆಲಮಂಗಲ ವಾಸವಿದ್ದರು. 9 ತಿಂಗಳ ಹಿಂದೆ ನನ್ನಿಂದ ದೂರ ಇದ್ದರು. ನನ್ನ ಮೇಲೆ ಠಾಣೆಯಲ್ಲಿ ದೂರು ನೀಡಿ ಬಿಟ್ಟು ಹೋಗಿದ್ದರು. ಮಗು ನನ್ನ ಬಳಿ ಇತ್ತು ಆಗಾಗ ನೋಡೋಕೆ ಬರುತ್ತಿದ್ದರು. ಅಶ್ರಫ್ ಮೇಲೆ ನನಗೆ ಅನುಮಾನ ಇತ್ತು. ಈ ಹಿಂದೆ ನಾನು ನೆಲಮಂಗಲದಲ್ಲಿ ದೂರು ಕೊಟ್ಟಿದ್ದೆ. ಅಶ್ರಫ್ ಉತ್ತರಾಖಂಡ್ ಮೂಲದವನು. ಭೇಟಿಗೆ ತಿಂಗಳಿಗೆ ಒಮ್ಮೆ ಬರುತ್ತಿದ್ದಳು. ಲಾಸ್ಟ್ ಘಟನೆ ಆದ 25 ದಿನದ ಹಿಂದೆ ಬಂದಿದ್ದರು. ಬಂದಾಗ ನನ್ನ ಮೇಲೆ ಕೋಪ ಇತ್ತು ಕೋಪದಿಂದಲೇ ಮಾತನಾಡುತ್ತಿದ್ದರು' ಎಂದು ಹೇಳಿದ್ದಾರೆ.

ಇನ್ನು ಮಹಾಲಕ್ಮಿಯ ತಾಯಿ ಮೀನಾ ರಾಣಾ, ' ಮನೆಯಿಂದ ವಾಸನೆ ಬರ್ತಾ ಇದೆ ಅಂತ ಮಾಲೀಕರು ಹೇಳಿದ್ದರು. ನಿನ್ನೆ 12 ಗಂಟೆಗೆ ಬಂದು ಬೀಗ ತೆಗೆದಿದ್ದೆವು. ನನ್ನ ಮಗಳ ಹೆಣ ಫ್ರೀಜರ್ ಅಲ್ಲಿ ತುಂಬಿದ್ದರು. ಕಳೆದ ರಾಖಿ ಹಬ್ಬದಂದು ಕೊನೆಯದಾಗಿ ನೋಡಿದ್ದೆವು. ನಾನು ನೆಲಮಂಗಲದಲ್ಲಿ ವಾಸವಿದ್ದೆ' ಎಂದು ತಿಳಿಸಿದ್ದಾರೆ.

ಇನ್ನು ಮಹಾಲಕ್ಮಿಯ ತಂಗಿ ಸಹೀದಾ,  'ಯಾರು ಮಾಡಿದಾರೆ ಅನ್ನೋದು ಗೊತ್ತಿಲ್ಲ. ಅವರಿಗೆ ಶಿಕ್ಷೆ ಆಗಬೇಕು. ಫ್ರಿಜ್‌ಅಲ್ಲಿ ಪೀಸ್ ಪೀಸ್ ಮಾಡಿ ಇಟ್ಟಿದ್ದರು. ಅಕ್ಕ ನನ್ನ ನೋಡಿ ಒಂದು ವರ್ಷ ಆಯ್ತು. ಅವರು ಮದುವೆಯಾಗಿ ಬೇರೆ ಬೇರೆ ಇದ್ದರು. ಯಾರು ಮಾಡಿದಾರೆ ಅವರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದ್ದಾರೆ.

Tap to resize

Latest Videos

Bengaluru Fridge Murder: ಮಹಾಲಕ್ಷ್ಮಿಯ ದೇಹ 30 ಪೀಸ್‌, ಫ್ರಿಜ್‌ನಿಂದ ಹೊರಬರ್ತಿತ್ತು ಹುಳಗಳು!

ನಾಲ್ವರ ಬೆನ್ನು ಬಿದ್ದ ಪೊಲೀಸ್: ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲಿ, ಕುಟುಂಬದವರು ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ನಾಲ್ವರ ಬೆನ್ನು ಬಿದ್ದಿದ್ದಾರೆ. ವೈಯಾಲಿಕಾವೆಲ್ ಪೊಲೀಸರು ಒಟ್ಟು ನಾಲ್ಕು ಮಂದಿಯ ಹುಡುಕಾಟದಲ್ಲಿದ್ದಾರೆ. ಮಹಾಲಕ್ಮೀಯ ಗಂಡ ಅಶ್ರಫ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೆ, ಮಹಾಲಕ್ಷ್ಮಿ ತಮ್ಮನಿಂದ ಮೂವರ ಮೇಲೆ ಅನುಮಾನ ವ್ಯಕ್ತವಾಗಿದೆ. ಶಶಿಧರ್, ಸುನೀಲ್ ಶಾಪ್ ಮ್ಯಾನೇಜರ್, ಮುಕ್ತ ಅವರ ಮೇಲೆ ಅನುಮಾನ ಪಟ್ಟಿದ್ದು ಈ ನಾಲ್ವರ ಹುಡುಕಾಟದಲ್ಲಿ ಪೊಲೀಸ್‌ ಇದ್ದಾರೆ.

ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿ ಕೇಸ್‌?: ಯುವತಿಯನ್ನು ಕೊಂದು 30ಕ್ಕೂ ಅಧಿಕ ಪೀಸ್‌ ಮಾಡಿ ಫ್ರಿಜ್‌ನಲ್ಲಿಟ್ಟ ಹಂತಕ!

ಪರಸಂಗದ ಪೀಕಲಾಟಕ್ಕೆ ಕೊಲೆಯಾದಳ ಸುಂದರಿ?: ಮಹಾಲಕ್ಷ್ಮಿ ಕೊಲೆ ಸುತ್ತ ಈಗ ಹಲವು ಅನುಮಾನ ವ್ಯಕ್ತವಾಗುದೆ. ಮೆನ್ಸ್ ಬ್ಯೂಟಿ ಪಾರ್ಲರ್ ವ್ಯಕ್ತಿ ಜೊತೆ ಮಹಾಲಕ್ಮೀ ಆತ್ಮೀಯತೆಯಿಂದ ಇದ್ದಳು. ಆದರೆ ಕೆಲ ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಅನುಮಾನ ಬಂದಿದೆ. ಸದ್ಯ ಮೆನ್ಸ್‌ ಪಾರ್ಲರ್‌ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಎರಡು ದಿನಗಳ ಹಿಂದೆ ಮನೆಯ ಬಳಿ ಬಂದು ಬಾಗಿಲು ತೆಗೆದು ಪರಾರಿಯಾಗಿದ್ದಾನೆ. 8 ದಿನವಾದ್ರು ಯಾರಿಗೂ ವಿಷಯ ತಿಳಿಯದ ಕಾರಣ. ಮನೆ ಬಾಗಿಲು ತೆಗೆದು ಪರಾರಿಯಾಗಿದ್ದಾನೆ. ಸದ್ಯ ಪಾರ್ಲರ್ ವ್ಯಕ್ತಿಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.

click me!