ಬರ್ತಡೆ ಪಾರ್ಟಿಗೆ ಹೋಗಿದ್ದ ಬ್ಯುಟಿಷಿಯನ್ ಮೇಲೆ ಅತ್ಯಾಚಾರ/ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ರೇಪ್/ ಇಲ್ಲಿಯವರೆಗೆ ಯಾರ ಬಂಧನವೂ ಆಗಿಲ್ಲ
ಪ್ರಯಾಗ್ ರಾಜ್: (ಸೆ. 07) ಗೆಳೆಯರು ಕರೆದ ಪಾರ್ಟಿಗೆ ಹೋದ 20 ವರ್ಷದ ಬ್ಯುಟಿಶಿಯನ್ ಮೇಲೆ ಗ್ಯಾಂಗ್ ರೇಪ್ ಆಗಿದೆ. ಉತ್ತರ ಪ್ರದೇಶದಿಂದ ಮತ್ತೆ ಮತ್ತೆ ಅತ್ಯಾಚಾರದ ಘಟನೆಗಳು ವರದಿಯಾಗುತ್ತಲೇ ಇವೆ.
ಪ್ರಯಾಗ್ ರಾಜ್ ನ ಬೆನಿಗಂಜ್ ನ ಮಹಿಳೆ ಮೇಲೆ ಅತ್ಯಾಚಾರವಾಗಿದೆ. ಸುಲೇಂ ಸರೈನಲ್ಲಿರುವ ಗೆಳೆಯರ ಮನೆಗೆ ಹೋಗಿದ್ದ ವೇಳೆ ಕಾಮಾಂಧರು ಎರಗಿದ್ದಾರೆ. ಬರ್ತಡೆ ಪಾರ್ಟಿ ನಡೆಯುತ್ತಿದ್ದು ಬ್ಯುಟಿಶಿಯನ್ ಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಅತ್ಯಾಚಾರ ಮಾಡಲಾಗಿದೆ.
ಬಾಯ್‌ಪ್ರೆಂಡ್ ಸಿಕ್ಕಾಕಿಸಲು ಗಮ್ ನಿಂದ ಖಾಸಗಿ ಅಂಗ ಸೀಲ್ ಮಾಡಿಕೊಂಡಿದ್ದ ಮಹಿಳೆ!
ಸಂತ್ರಸ್ತೆ ಧೂಮ್ ಮಂಗಜ್ ಪೊಲೀಸ್ ಸ್ಟೇಶನ್ ಗೆ ತೆರಳಿ ದೂರು ದಾಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಉತ್ತರ ಪ್ರದೇಶದಲ್ಲಿ ಮಾತ್ರ ಕಾಮಪಿಶಾಚಿಗಳ ಕ್ರೌರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಬ್ಬಿನ ಹೊಲದಲ್ಲಿ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ದೆ.
ಉತ್ತರ ಪ್ರದೇಶದ ಲಖಿಮ್ ಫುರ್ ಖೇರಿ ಜಿಲ್ಲೆಯಲ್ಲಿ ಮೂರು ವಾರದ ಅಂತರಲ್ಲಿ ಮೂರು ರೇಪ್ ಮತ್ತು ಕೊಲೆ ಪ್ರಕರಣಗಳು ನಡೆದಿದ್ದವು.