ಪತ್ನಿಯ ನಿಂದಿಸಿದ್ದ ಗೆಳೆಯನನ್ನು ಬಾಟಲಿಯಲ್ಲಿ ಹೊಡೆದು ಹತ್ಯೆಗೈದ ಪತಿ'ರಾಯ'!

By Web Desk  |  First Published Nov 24, 2019, 7:53 AM IST

ಪತ್ನಿಯ ನಿಂದಿಸಿದ್ದ ಗೆಳೆಯನನ್ನು ಬಾಟಲಿಯಲ್ಲಿ ಹೊಡೆದು ಹತ್ಯೆ!| ಮದ್ಯದ ಅಮಲಿನಲ್ಲಿ ಕೆಟ್ಟದಾಗಿ ಮಾತನಾಡಿದ| ಜೀವನಹಳ್ಳಿಯಲ್ಲಿ ಘಟನೆ


ಬೆಂಗಳೂರು[ನ.24]: ಮದ್ಯ ಅಮಲಿನಲ್ಲಿ ತನ್ನ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ ಗೆಳೆಯನನ್ನು ಕೊಂದು ಕ್ಯಾಬ್‌ ಚಾಲಕನೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ದೇವರ ಜೀವನಹಳ್ಳಿ ಸಮೀಪ ನಡೆದಿದೆ.

ದುಬೈ ಲೇಔಟ್‌ ನಿವಾಸಿ ಅಂಬರೀಷ್‌ (28) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತನ ಸ್ನೇಹಿತ ಸಂದೀಪ್‌ ಪಾಟೀಲ್‌ ಪೊಲೀಸರಿಗೆ ಶರಣಾಗಿದ್ದಾನೆ. ತನ್ನ ಮನೆಯಲ್ಲಿ ಗೆಳೆಯ ಅಂಬರೀಷ್‌ ಜತೆ ಶುಕ್ರವಾರ ರಾತ್ರಿ ಸಂದೀಪ್‌ ಮದ್ಯ ಸೇವಿಸುತ್ತಿದ್ದ. ಆಗ ಕುಡಿದ ಮತ್ತಿನಲ್ಲಿ ಅವರ ಮಧ್ಯೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

undefined

ಬೇರೊಬ್ಬಳ ಆಸೆಗೆ ಹೈಡ್ರಾಮಾ: ರಾಕೇಶ್ ಗುಪ್ತನ ಗುಪ್ತ್-ಗುಪ್ತ್ ಆಟ ಬಟಾಬಯಲು

ಕಲುಬರಗಿ ಜಿಲ್ಲೆಯ ಅಂಬರೀಷ್‌, ನಗರದಲ್ಲಿ ಕ್ಯಾಬ್‌ ಚಾಲಕರಾಗಿದ್ದ. ಎರಡು ವರ್ಷಗಳಿಂದ ಸಂದೀಪ್‌ ಮತ್ತು ಅಂಬರೀಷ್‌ ಸ್ನೇಹಿತರಾಗಿದ್ದು, ಇದೇ ವಿಶ್ವಾಸದಲ್ಲಿ ಗೆಳೆಯನಿಗೆ ತನ್ನ ಮನೆಯಲ್ಲೇ ಸಂದೀಪ್‌ ಔತಣಕೂಟ ಆಯೋಜಿಸಿದ್ದ. ಆ ವೇಳೆ ಕಂಠಮಟ ಮದ್ಯ ಸೇವಿಸಿದ ಅಂಬರೀಷ್‌, ಹಳೆಯ ವಿಚಾರಗಳನ್ನು ಪ್ರಸ್ತಾಪಿಸಿ ಸಂದೀಪ್‌ ಪಾಟೀಲ್‌ಗೆ ನಿಂದಿಸುತ್ತಿದ್ದ.

ಈ ಹಂತದಲ್ಲಿ ಆತನ ಪತ್ನಿ ಬಗ್ಗೆ ಆತ ಕೀಳು ಮಟ್ಟದ ಭಾಷೆ ಬಳಸಿ ಮಾತನಾಡಿದ್ದಾನೆ. ಇದರಿಂದ ಕೆರಳಿದ ಸಂದೀಪ್‌, ಅಂಬರೀಷ್‌ಗೆ ತಲೆಗೆ ಮದ್ಯದ ಬಾಟಲ್‌ ಹಾಗೂ ದೀಪಾಲೆ ಕಂಬದಿಂದ ಹೊಡೆದು ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಡಿ.ಜೆ.ಹಳ್ಳಿ ಠಾಣೆಗೆ ತೆರಳಿ ಆರೋಪಿ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೂತಿದ್ದ ಶವ ತೆಗೆಯಲು ಪೊಲೀಸರ ಪರದಾಟ..!

click me!