ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ; ಆಸ್ತಿ ವಿಚಾರಕ್ಕೆ ದುಷ್ಕರ್ಮಿಗಳಿಂದ ಹತ್ಯೆ!

By Ravi Janekal  |  First Published Feb 6, 2024, 12:39 PM IST

ಆಸ್ತಿ ವಿಚಾರವಾಗಿ ಬೆಳ್ಳಂಬೆಳಗ್ಗೆ ವೃದ್ಧೆಯನ್ನ ಭೀಕರವಾಗಿ ಹತ್ಯೆ ದುಷ್ಕರ್ಮಿಗಳು ಪರಾರಿಯಾದ ಘಟನೆ ಧಾರವಾಡ ನಗರದ ನವಲೂರು ಬಡಾವಣೆಯಲ್ಲಿ ನಡೆದಿದೆ. ಕರೆವ್ವ ಈರಬಗೇರಿ(58) ಕೊಲೆಯಾದ ವೃದ್ದೆ. ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ.

ಧಾರವಾಡ (ಫೆ.6): ಆಸ್ತಿ ವಿಚಾರವಾಗಿ ಬೆಳ್ಳಂಬೆಳಗ್ಗೆ ವೃದ್ಧೆಯನ್ನ ಭೀಕರವಾಗಿ ಹತ್ಯೆ ದುಷ್ಕರ್ಮಿಗಳು ಪರಾರಿಯಾದ ಘಟನೆ ಧಾರವಾಡ ನಗರದ ನವಲೂರು ಬಡಾವಣೆಯಲ್ಲಿ ನಡೆದಿದೆ.

ಕರೆವ್ವ ಈರಬಗೇರಿ(58) ಕೊಲೆಯಾದ ವೃದ್ದೆ. ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ವೃದ್ಧೆ. ಪೂಜೆ ಮುಗಿಸಿ ಮರಳಿ ಮನೆಯತ್ತ ಬರುವಾಗ ನಡೆದಿರುವ ಕೊಲೆ. ಆಸ್ತಿ ವಿಚಾರವಾಗಿ ವೃದ್ಧೆಯೊಂದಿಗೆ ಜಗಳ ಮಾಡಿರುವ ದುಷ್ಕರ್ಮಿಗಳು. ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಪಾಪಿಗಳು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕೊಲೆ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tap to resize

Latest Videos

ಪಣಂಬೂರು ಬೀಚ್‌ನಲ್ಲಿ ನೈತಿಕ ಪೊಲೀಸ್‌: ನಾಲ್ವರು ಆರೋಪಿಗಳ ದಸ್ತಗಿರಿ

ಹಲಗೂರು

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಮುತ್ತತ್ತಿಯಲ್ಲಿ ನಡೆದಿದೆ.

ಮೂಲತಃ ರಾಮನಗರ ಜಿಲ್ಲೆ ದೊಡ್ಡ ಗಂಗಾವಾಡಿ ಬೋರೇಗೌಡರ ಪುತ್ರ ಹಾಲಿ ಬೆಂಗಳೂರು ನಾಯಂಡಹಳ್ಳಿ ನಿವಾಸಿ ಡಿ.ಬಿ.ವಿಶ್ವಾಸ್ (27) ಮೃತಪಟ್ಟವರು.

ಐದು ಸ್ನೇಹಿತರ ಜೊತೆ ಭಾನುವಾರ ಮುತ್ತತ್ತಿ ಆಂಜನೇಯಸ್ವಾಮಿ ದೇವರ ದರ್ಶನ ಪಡೆಯಲು ಬಂದಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ಹೋಗಿ ಡಿ.ಬಿ.ವಿಶ್ವಾಸ್ ಸಾವನ್ನಪ್ಪಿದರು. ಈತ ಮನೆಗಳ ಇಂಟೀರಿಯರ್ ಡಿಸೈನ್ ವರ್ಕ್ ಮಾಡುತ್ತಿದ್ದ ಎನ್ನಲಾಗಿದೆ. ಹಲಗೂರು ಪೊಲೀಸರು ಸೋಮವಾರ ಕಾವೇರಿ ನದಿಯಲ್ಲಿ ನುರಿತ ಈಜುಗಾರಿಂದ ಶವವನ್ನು ಹುಡುಕಿಸಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ನೀಡಿದ್ದಾರೆ. ಹಲಗೂರು ಪೊಲೀಸ ಠಾಣೆಯಲ್ಲಿ ಕೇಸು ದಾಖಲಾಗಿದೆ

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು!

ಹಲಗೂರು: ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಮುತ್ತತ್ತಿಯಲ್ಲಿ ನಡೆದಿದೆ.ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಮುತ್ತತ್ತಿಯಲ್ಲಿ ನಡೆದಿದೆ. ಬೋರೇಗೌಡರ ಪುತ್ರ ಹಾಲಿ ಬೆಂಗಳೂರು ನಾಯಂಡಹಳ್ಳಿ ನಿವಾಸಿ ಡಿ.ಬಿ.ವಿಶ್ವಾಸ್ (27) ಮೃತಪಟ್ಟವರು.

ಹಾಡಹಗಲೇ ಮಾಲ್ಡೀವ್ಸ್ ಪ್ರಾಸಿಕ್ಯೂಟರ್ ಜನರಲ್ ಮೇಲೆ ದಾಳಿ: ಕ್ರೂರವಾಗಿ ಇರಿದ ಕಿಡಿಗೇಡಿಗಳು

click me!