ಡ್ರಗ್‌ಗೆ ದಾಸನಾಗಿದ್ದ ಮಗನ ಕೊಂದು ದೇಹ ಪೀಸ್‌ ಪೀಸ್ ಮಾಡಿ ವಿವಿಧೆಡೆ ಬಿಸಾಕಿದ ತಂದೆ

By Anusha Kb  |  First Published Jul 25, 2022, 12:57 PM IST

ದುಶ್ಚಟಕ್ಕೆ ಒಳಗಾಗಿದ್ದ ಮಗನನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿ ಆತನ ದೇಹದ ಭಾಗಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಎಸೆದಂತಹ ಭಯಾನಕ ಘಟನೆ ಗುಜರಾತ್‌ ಅಹ್ಮದಾಬಾದ್‌ನಲ್ಲಿ ನಡೆದಿದೆ.


ಅಹ್ಮದಾಬಾದ್‌: ದುಶ್ಚಟಕ್ಕೆ ಒಳಗಾಗಿದ್ದ ಮಗನನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿ ಆತನ ದೇಹದ ಭಾಗಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಎಸೆದಂತಹ ಭಯಾನಕ ಘಟನೆ ಗುಜರಾತ್‌ ಅಹ್ಮದಾಬಾದ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 65 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಹ್ಮದಾಬಾದ್‌ನ ಅಂಬಾವಾಡಿಯ ನಿವಾಸಿಯಾದ ನಿಲೇಶ್‌ ಜೋಷಿ ಕೃತ್ಯವೆಸಗಿದ ವ್ಯಕ್ತಿ. ಈತನನ್ನು ರಾಜಸ್ತಾನದ ಸವಾಯ್ ಮದೋಪುರ್‌ ಜಿಲ್ಲೆಯ ರೈಲು ನಿಲ್ದಾಣದಲ್ಲಿ ನಿಂತಿದ್ದ ಅವಧ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ. 

ಈತ ಉತ್ತರಪ್ರದೇಶದ ಗೋರಖ್‌ಪುರ ಮೂಲಕ ತೆರಳಿ ನೇಪಾಳ ಗಡಿ ದಾಟಿ ಪರಾರಿಯಾಗುವ ಹಾದಿಯಲ್ಲಿದ್ದ ವೇಳೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ನಿವೃತ್ತ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿದ್ದ ನಿಲೇಶ್‌ ಜೋಷಿ ದುಶ್ಚಟಕ್ಕೆ ಒಳಗಾಗಿದ್ದ ತನ್ನ 21 ವರ್ಷದ ಮಗ ಸ್ವಯಂನನ್ನು ಜುಲೈ 18 ರಂದು ಕೊಲೆ ಮಾಡಿದ್ದ. ಅಪ್ಪ ಮಗನ ನಡುವಿನ ಮಾತುಕತೆ ವಿವಾದಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಮಗನ ಕೊಲೆಯ ನಂತರ ಇಲೆಕ್ಟ್ರಾನಿಕ್ ಕಟ್ಟರ್ ಬಳಸಿ ತನ್ನ ಮಗನ ದೇಹವನ್ನು ಆರು ಪೀಸ್‌ಗಳಾಗಿ ಮಾಡಿದ ನಿಲೇಶ್ ಜೋಷಿ ಅದನ್ನು ದೊಡ್ಡದಾದ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಅಹ್ಮದಾಬಾದ್‌ನ ವಸ್ನಾ ಹಾಗೂ ಇಲ್ಲಿಸ್ ಸೇತುವೆಯ ಸಮೀಪದ ಸ್ಥಳಗಳಲ್ಲಿ ಎಸೆದಿದ್ದ. 

Tap to resize

Latest Videos

Bengaluru Crime News : ಅಂಗವಿಕಲ ಮಗನ ಸಂಪಿಗೆ ಎಸೆದು ಕೊಂದು ತಂದೆ ಆತ್ಮಹತ್ಯೆ

ಅಹ್ಮದಾಬಾದ್‌ನ ಪ್ರತಿಷ್ಠಿತ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮನುಷ್ಯ ದೇಹದ ಭಾಗಗಳು ಬಿದ್ದು ಸಿಕ್ಕಿದ್ದು, ಇದು ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿತ್ತು. ಇದು ಪೊಲೀಸರಿಗೆ ತಲುಪಿ ಅಹ್ಮದಾಬಾದ್‌ನ ಸಿಟಿ ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್‌ನವರು ತನಿಖೆ ಆರಂಭಿಸಿ ಪ್ರಕರಣದ ಬೆನ್ನಟ್ಟಿದ್ದಾಗ ಈ ಭಯಾನಕ ಸತ್ಯ ಹೊರಗೆ ಬಂದಿದೆ. 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಕಮೀಷನರ್ ಪ್ರೇಮ್‌ವೀರ್ ಸಿಂಗ್ ಮಾಹಿತಿ ನೀಡಿದ್ದು, ಮಾದಕ ವ್ಯಸನಿ ಹಾಗೂ ಕುಡಿತಕ್ಕೆ ದಾಸನಾಗಿದ್ದ ಮಗನ ಕಾರಣಕ್ಕೆ ಅಪ್ಪ ಮಗನ ಮಧ್ಯೆ ಸದಾ ಜಗಳಗಳಾಗುತ್ತಿದ್ದವು. ಜುಲೈ 18 ರಂದು ಹಣದ ವಿಚಾರವಾಗಿ ಮಗ ಸ್ವಯಂ ಜೋಷಿ ಹಾಗೂ ತಂದೆಯ ನಡುವೆ ಮಾತಿನ ಚಕಮಕಿ ನಡೆದಿದೆ. ತಂದೆ ಹಣ ನೀಡಲು ನಿರಾಕರಿಸಿದಾಗ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ತಂದೆ ಗ್ರೈಂಡರ್ ಕಲ್ಲಿನಿಂದ  ಮಗನನ್ನು ಹಲವು ಬಾರಿ ಹೊಡೆದು ಕೊಂದಿದ್ದಾರೆ. 

ನಂತರ ತಂದೆ ಕಾಲುಪುರದ ಮಾರುಕಟ್ಟೆಯಲ್ಲಿ ಇಲೆಕ್ಟ್ರಾನಿಕ್ ಕಟ್ಟರ್ ಹಾಗೂ ಕೆಲವು ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿ ತಂದುಮಗನ ದೇಹವನ್ನು ಆರು ಭಾಗಗಳಾಗಿ ಕತ್ತರಿಸಿ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ನಗರದ ಕೆಲ ಪ್ರದೇಶಗಳಲ್ಲಿ ಎಸೆದು ಬಂದಿದ್ದಾರೆ. ಈ ಬಗ್ಗೆ ವಸ್ನಾ ನಗರದಲ್ಲಿ ಎಫ್‌ಐಆರ್ ದಾಖಲಾಗಿದೆ. 

ಮಗನ ಕೊಲೆಗೆ ಅಪ್ಪನೇ ಸುಪಾರಿ ಕೊಟ್ಟ : ಪುತ್ರ ದ್ವೇಷಕ್ಕೆ ಕಾರಣವೇ ಇದು!

ತಂತ್ರಜ್ಞಾನವನ್ನು ಬಳಸಿ ಆರೋಪಿ ರಾಜಸ್ತಾನದ ಸವಾಯ್ ಮಧೋಪುರದ ಗಂಗಾಪುರ ರೈಲು ನಿಲ್ದಾಣದಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಜಿಲ್ಲಾ ಅಪರಾಧ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರ ಪ್ರಕಾರ ಜೋಷಿಯವರ ಹೆಂಡತಿ ಹಾಗೂ ಮಗಳು ಕಳೆದ ಆರು ವರ್ಷಗಳಿಂದ ಜರ್ಮನಿಯಲ್ಲಿ ನೆಲೆಸಿದ್ದಾರೆ. ಈ ಕಾರಣದಿಂದ ಜೋಷಿ ತನ್ನ ಮಗನೊಂದಿಗೆ ಅಹ್ಮದಾಬಾದ್‌ನಲ್ಲಿ ನೆಲೆಸಿದ್ದರು. 
 

click me!