ತುಮಕೂರು: ದೇವಸ್ಥಾನದ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆಯುತ್ತಿದ್ದ ಸೈಕೋ ಬಂಧನ

By Girish Goudar  |  First Published Oct 26, 2024, 10:28 AM IST

ಬಂಧಿತ ಸೈಕೋ ಆಸಾಮಿ ಮೊಟ್ಟೆ ಹೊಡೆದು ದೇವಾಲಯ ಅಪವಿತ್ರಗೊಳಿಸುತ್ತಿದ್ದ, ಪ್ರಸಿದ್ಧ ದೇವಾಲಯಗಳ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದ ಅರೋಪಿ.


ತುಮಕೂರು(ಅ.26):  ದೇವಸ್ಥಾನದ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆಯುತ್ತಿದ್ದ ಕಿಡಿಗೇಡಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ (29) ಬಂಧಿತ ಆರೋಪಿ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಆರೋಪಿ ಮಂಜುನಾಥ್‌ನನ್ನ ಬಂಧಿಸಿದ್ದಾರೆ.  ಬಂಧಿತ ಸೈಕೋ ಆಸಾಮಿ ಮೊಟ್ಟೆ ಹೊಡೆದು ದೇವಾಲಯ ಅಪವಿತ್ರಗೊಳಿಸುತ್ತಿದ್ದ, ಪ್ರಸಿದ್ಧ ದೇವಾಲಯಗಳ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದ ಅರೋಪಿ.

ಬಂಧಿತ ಆರೋಪಿ ಮಂಜುನಾಥ್ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ತಾಲೂಕಿನ ಕುರುಬರಹಳ್ಳಿ ಕಾಡೇನಹಳ್ಳಿಯ ನಿವಾಸಿಯಾಗಿದ್ದಾನೆ. ತಾಲೂಕಿನ ಗೋಡೇಕೆರೆ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ, ಗರ್ಭಗುಡಿಯ ಪಕ್ಕದ ಬಲಭಾಗದ ವೀರಭದ್ರೇಶ್ವರ ವಿಗ್ರಹ, ಮತ್ತು ಎಡಭಾಗದ ಗದ್ದುಗೆಯ ಲಿಂಗಕ್ಕೆ ಮೊಟ್ಟೆ ಹೊಡೆದಿದ್ದ ಆರೋಪಿ ಹಾಗೂ ಭಾವನಹಳ್ಳಿ ಶ್ರೀ ನಿರ್ವಾಣಸ್ವಾಮಿ ದೇವಸ್ಥಾನ, ದಬ್ಬೇಘಟ್ಟ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿದ್ದ ಕಿಡಿಗೇಡಿ.

Tap to resize

Latest Videos

undefined

ಬೆಂಗಳೂರು: ಕದ್ದ ಬೈಕ್‌ ಮಾರಾಟಕ್ಕೆ ಸಿನಿಮೀಯ ಶೈಲಿ ಕಥೆ, ಖತರ್ನಾಕ್‌ ಖದೀಮ ಅರೆಸ್ಟ್‌!

ಈ ಬಗ್ಗೆ ದೇವಸ್ಥಾನದ ಭಕ್ತರು ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ದೂರು ದಾಖಲಾಗಿತ್ತು. ಅ.21ರಂದು ಆರೋಪಿ ಮಂಜುನಾಥನನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿದ್ದರು.  

ವಿಚಾರಣೆ ವೇಳೆ 3 ದೇವಾಲಯಗಳಲ್ಲಿ ಕೋಳಿ ಮೊಟ್ಟೆ ಹೊಡೆದಿದ್ದು ದೇವಾಲಯ ಅಪವಿತ್ರಗೊಳಿಸಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.

click me!