ಆಟೋದಲ್ಲಿ ಕರೆದೊಯ್ದು ಯುವತಿ ಮೇಲೆ ರೇಪ್‌ ಮಾಡಿದ್ದ ಕಾಮುಕನ ಬಂಧನ

By Kannadaprabha News  |  First Published Dec 19, 2020, 7:44 AM IST

ಮನೆಗೆ ಹೊರಟ್ಟಿದ್ದವಳ ಮೇಲೆ ಆಟೋ ಚಾಲಕನ ದೌರ್ಜನ್ಯ| ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ| ಈ ಸಂಬಂಧ ದೂರು ನೀಡಿ​ದ್ದ ಸಂತ್ರಸ್ತೆ| 


ಬೆಂಗಳೂರು(ಡಿ.19): ಹದಿ​ನೆಂಟು ವರ್ಷದ ಯುವ​ತಿಯ ಮೇಲೆ ಅತ್ಯಾ​ಚಾರ ಎಸ​ಗಿದ ಆಟೋ ಚಾಲ​ಕ​ನನ್ನು ಸಂಪಿ​ಗೆ​ಹಳ್ಳಿ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ದೇವನಹಳ್ಳಿ ನಿವಾಸಿಯಾದ ಮುಬಾರಕ್‌ (28) ಬಂಧಿತ ಆಟೋ ಚಾಲ​ಕ. ಡಿ.11ರಂದು ಬೆಳಗ್ಗೆ ಕೃತ್ಯ ನಡೆ​ಸಿ​ದ್ದು, ​ಈ ಸಂಬಂಧ 18 ವರ್ಷದ ಯುವತಿ ದೂರು ನೀಡಿದ್ದರು. ಪಾಲಿಟೆಕ್ನಿಕ್‌ ವ್ಯಾಸಂಗ ಮಾಡುತ್ತಿರುವ ಯುವತಿ, ಬಿಡುವಿನ ವೇಳೆಯಲ್ಲಿ ಮದುವೆ ಸಮಾರಂಭಗಳಲ್ಲಿ ಸ್ವಾಗತಕಾರಿಣಿ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಡಿ.10ರಂದು ಹೆಗಡೆ ನಗರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹೋಗಿ ಕೆಲಸ ಮಾಡಿದ್ದರು. ತಡರಾತ್ರಿಯಾಗಿದ್ದರಿಂದ ಕಲ್ಯಾಣ ಮಂಟಪದಲ್ಲೇ ತಂಗಿದ್ದರು. ಮರುದಿನ ಬೆಳಗ್ಗೆ ಮನೆಗೆ ಹೋಗಲು ಥಣಿಸಂದ್ರ ಮುಖ್ಯರಸ್ತೆಗೆ ಬಂದು ಬಸ್ಸಿ​ಗಾಗಿ ಕಾಯುತ್ತಿದ್ದರು. 

Tap to resize

Latest Videos

ಆಟೋದಲ್ಲಿ ಬಂದ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

ಆಟೋದಲ್ಲಿ ಸ್ಥಳಕ್ಕೆ ಬಂದಿದ್ದ ಮುಬಾರಕ್‌ ಎಲ್ಲಿಗೆ ಹೋಗಬೇಕೆಂದು ಕೇಳಿದ್ದ. ನಾಗವಾರ ಕಡೆ ಹೋಗಬೇಕೆಂದು ಯುವತಿ ಹೇಳಿದ್ದರು. ಆ ಕಡೆಯೇ ಹೊರಟಿರುವುದಾಗಿ ಹೇಳಿದ್ದ ಆರೋಪಿ, ಯುವತಿಯನ್ನು ಹತ್ತಿಸಿಕೊಂಡಿದ್ದ. ಯುವತಿ ಹೇಳಿದ್ದ ಸ್ಥಳದಲ್ಲಿ ಆಟೋ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದ ಆರೋಪಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿಯೇ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಸಂಬಂಧ ಸಂತ್ರಸ್ತೆ ದೂರು ನೀಡಿ​ದ್ದರು. ಬಳಿಕ ಆರೋ​ಪಿ​ಯನ್ನು ಬಂಧಿ​ಸ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ​ರು.
 

click me!