ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನೋರ್ವ ತನ್ನ ಅಜ್ಜಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಬೆಟೋಳಿ ಗ್ರಾಮದಲ್ಲಿ ನಡೆದಿದೆ.
ಕೊಡಗು (ಜು.11): ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನೋರ್ವ ತನ್ನ ಅಜ್ಜಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಬೆಟೋಳಿ ಗ್ರಾಮದಲ್ಲಿ ನಡೆದಿದೆ.
ಎರವರ ಜಾನಕಿ(45) ಮೃತ ದುರ್ದೈವಿ. ಗಣೇಶ್ ಲೈನ್ ಎಂಬುವವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧೆ. ಅಪ್ರಾಪ್ತ ಬಾಲಕನಾಗಿರೋ ಮೊಮ್ಮಗ ವಿಪರೀತ ಮದ್ಯಪಾನಕ್ಕೆ ದಾಸನಾಗಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ಅಜ್ಜಿಯೊಂದಿಗೆ ಕುಡಿದ ಮತ್ತಿನಲ್ಲಿ ಜಗಳಕ್ಕೆ ಇಳಿದಿದ್ದಾನೆ. ಈವೇಳೆ ಮೃತ ಜಾನಕಿ ಮೊಮ್ಮಗನಿಗೆ ಬುದ್ಧಿಮಾತು ಬೈದಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಅಜ್ಜಿಯ ಹತ್ಯೆ ಮಾಡಿರುವ ಪಾಪಿ ಮೊಮ್ಮಗೆ
ಕೊಡಗು: ಬಾಲಕಿ ಮೇಲೆ ಅತ್ಯಾಚಾರ, ಮತ್ತೊಬ್ಬಾಕೆ ಮೇಲೆ ರೇಪ್‌ಗೆ ಸ್ಕೆಚ್, ಐವರು ಕಾಮುಕರ ಬಂಧನ
ವಿರಾಜಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತ ಬಾಲಕನನ್ನ ಬಂಧಿಸಿದ ಪೊಲೀಸರು.