ಹೆಂಡ್ತಿನ ನೋಡ್ಕೊಳಕೆ ಆಗಲ್ಲಾ ಅಂದ್ಮೇಲೆ ಮದ್ವೆ ಯಾಕೆ? ಹೀಗಂತ ಕಮೆಂಟ್ ಮಾಡಿದ್ದ ಸ್ನೇಹಿತನ ಹತ್ಯೆಗೈದಿದ್ದಾರೆ. ಈ ಘಟನೆ ನಡೆದಿದ್ದು ಎಲ್ಲಿ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ವರದಿ : ಮಧು.ಎಂ.ಚಿನಕುರಳಿ
ಮೈಸೂರು, (ಜುಲೈ.13): ಸೋಷಿಯಲ್ ಮಿಡಿಯಾದ ಅವಾಂತರ ಒಂದರೆಡಲ್ಲ. ಕೈಯಲ್ಲಿ ಮೊಬೈಲಿದ್ದು ಬಳಸೊಕೆ ಸೋಷಿಯಲ್ ಮಿಡಿಯಾ ಅಕೌಂಟ್ ಇದ್ರೆ ಸಾಕು ಜನ್ರು, ಯಾರು ಏನ್ ಬೇಕಾದ್ರು ಕಮೆಂಟ್ ಹಾಕ್ತಾರೆ. ಆದ್ರೆ ಅಂತಹ ಕಮೆಂಟ್ ಗಳು ಜೀವಕ್ಕೆ ಕುತ್ತು ತರ್ತವೆ ಅನ್ನೊದು ಹಾಕಿದವರಿಗೆ ಗೊತ್ತಿರಲ್ಲಾ. ಅಂತಹಂದೊಂದು ಘಟನೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದಿದ್ದು ಯುವಕನ ಪ್ರಾಣವೇ ಹೋಗಿದೆ.
ಹೌದು....ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಸ್ನೇಹಿತರೇ ಸ್ನೇಹಿತನನ್ನ ಚಾಕು ಇರಿದು ಕೊಂದಿದ್ದಾರೆ. ಕೊಲೆಯಾದವ ಬಿರೇಶ. ಮೂಲತಹ ಹುಣಸೂರಿನ ನಿವಾಸಿ. ಬಿರೇಶ್ ಗೆ ಸಾಕಷ್ಟು ಜನರು ಸ್ನೇಹಿತರಿದ್ರು. ಪ್ರತಿನಿತ್ಯ ಸ್ನೇಹಿತರ ಜೊತೆ ಹೋಗಿ ರಾತ್ರಿಯಾದ್ರು ಮನೆಗೆ ಬರುತ್ತಿರಲಿಲ್ಲಾ. ಈ ಬಗ್ಗೆ ಪೋಷಕರು ಬುದ್ಧಿಮಾತುಗಳನ್ನ ಹೇಳಿದ್ರು. ಮನೋಜ್ ಮತ್ತು ನಿತಿನ್ ಬಿರೇಶ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ರು. ಈ ಮಧ್ಯೆ ನಿತಿನ್ ಕಳೆದ ಕೆಲ ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ನಿತಿನ್ ಮದುವೆ ವಿಚಾರವನ್ನ ಪ್ರಸ್ತಾಪಿಸಿ ಬಿರೇಶ್ ಹೆಂಡತಿನ ನೋಡ್ಕೊಳಕೆ ಆಗಲ್ಲಾ ಅಂದ ಮೇಲೆ ಮದುವೆ ಯಾಕ ಬೇಕು ಎಂದು ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ.
undefined
Hassan ರೌಡಿಶೀಟರ್ ಪತ್ನಿಗೆ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನ ಕೊಲೆ
ಇದನ್ನ ಗಮನಿಸಿದ ನಿತಿನ್ ಕಮೆಂಟ್ ಫೋಟೋ ತೆಗದು ಎಲ್ಲಾ ಸ್ನೇಹಿತರಿಗೂ ಕಳುಹಿಸಿದ್ದಾನೆ. ಕಳೆದ ಒಂದು ವಾರದಿಂದ ಈ ವಿಚಾರವಾಗಿ ಬಿರೇಶ್ ಮತ್ತು ನಿತಿನ್ ನಡುವೆ ಜಗಳ ನಡೆಯುತ್ತಲ್ಲೇ ಇತ್ತಂತೆ. ನಿನ್ನೆ(ಮಂಗಳವಾರ) ಮಧ್ಯಾಹ್ನ ನಿನ್ನ ಜೊತೆ ಮಾತನಾಡಬೇಕು ಬಾ ಬಿರೇಶನನ್ನ ಬೈಕ್ ನಲ್ಲಿ ಕುರಿಸಿಕೊಂಡು ನಿತಿನ್ ಮತ್ತು ಮನೋಜ್ ತ್ರಿಬಲ್ ರೈಡ್ ಹೊರಟಿದ್ದಾರೆ. ಹುಣುಸೂರು ನಗರದ ಸರಸ್ವತಿ ಪ್ಲಾಜಾ ಬಳಿ ಬರುತ್ತಿದಂತೆ ಹಿಂಬಂದಿಯಲ್ಲಿ ಕುಳಿತಿದ್ದ ನಿತಿನ್ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಬೈಕ್ ನಿಂದ ಬಿರೇಶ್ ಕೆಳಗೆ ಬಿದಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಬಿರೇಶ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬಿರೇಶ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಮೃತನ ಪೋಷಕರು ನಿತಿನ್ ಮತ್ತು ಮನೋಜ್ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮಧ್ಯೆ ಶವಗಾರದಲ್ಲಿ ಕೊಲೆ ಆರೋಪಿಗಳು ಬಳಸಿದ್ದ ಬೈಕ್ ಮಾಲೀಕ ಪೋತರಾಜ್ ಗೆ ಹಿಗ್ಗಾಮುಗ್ಗ ಥಳಿಸಿದ್ರು.
ಒಟ್ಟಾರೆ ಸಿನಿಮಾದಲ್ಲಿ ಹೇಳೊ ರೀತಿ ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಹರ್ತ ಇಡ್ತಾರೆ ಅನ್ನೂ ಮಾತು ಅಕ್ಷರ ಸಹ ಸತ್ಯವಾಗಿದೆ. ಕಷ್ಟ ಸುಖದಲ್ಲಿ ಒಟ್ಟಿಗೆ ಇರ್ತಿನಿ ಎಂದ ಸ್ನೇಹಿತರು ಕೇವಲ ಒಂದೇ ಕಮೆಂಟಿಗೆ ಈ ರೀತಿ ಮಾಡಿದ್ದು ಮಾತ್ರ ದುರಂತ.