ಗುರಾಯಿಸಿದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬನ್ನೇರುಘಟ್ಟ ರಸ್ತೆಯ ಕಲ್ಕೇರೆ ಗೇಟ್ ಬಳಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಹರ್ಷ (33) ಕೊಲೆ ದುರ್ದೈವಿ.
ಆನೇಕಲ್ (ಜೂ.26): ಬಾರ್‌ನಲ್ಲಿ ಕುಡಿಯಲು ಹೋಗಿದ್ದ ವೇಳೆ ಗುರಾಯಿಸಿದ್ದಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯ ಆಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ. ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕೆರೆಯ ಬಾರೋಂದಕ್ಕೆ ಗುಲ್ಬರ್ಗ ಮೂಲದ ಹರ್ಷ ಕುಡಿಯಲು ಬಂದಾಗ ಈ ದುರ್ಘಟನೆ ನಡೆದಿದೆ, ಇಂದು ಸಂಜೆ 7 ಗಂಟೆಗೆ ಸುಮಾರಿಗೆ ಮೃತ ಹರ್ಷ ಕುಡಿಯಲು ಕಲ್ಕೆರೆ ಗೇಟ್ ನಲ್ಲಿರುವ SKR ಬಾರ್‌ಗೆ ಹೋಗಿದ್ದಾನೆ, ಕುಡಿಯುತ್ತಾ ಪಕ್ಕದ ಟೇಬಲ್ ಜೋರಾಗಿ ಮಾತಾನಾಡುತ್ತಿದ್ದವರ ಕಡೇಗೆ ತಿರುಗಿ ನೋಡಿದ್ದಾನೆ,
ಆ ವೇಳೆ ಕುಡಿದ ಮತ್ತಿನಲ್ಲಿ ಯುವಕರು ಏನೋ ಗುರಾಯಿಸ್ತಾ ಇದೀಯಾ ಎಂದು ಜಗಳ ಆರಂಭಿಸಿದ್ದಾರೆ. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದು ನಂತರ ಹೊಟ್ಟೆಗೆ ಚುಚ್ಚಿದ್ದಾರೆ ಹೊಡೆತ ತಿಂದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದು ರಕ್ತಸ್ರಾವ ಆಗಿ ಮೃತಪಟ್ಟಿದ್ದಾನೆ, ವಿಷಯ ತಿಳಿದ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ, ಇನ್ನು ಕೊಲೆ ಮಾಡಿರೋರು ಸುತ್ತಮುತ್ತಲಿನ ನಿವಾಸಿಗಳೇ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ, ಇನ್ನು ಮೃತ ಹರ್ಷ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ.
ಹುಬ್ಬಳ್ಳಿಯ ಭಾಗ್ಯ ನಗರದಲ್ಲಿ ಫ್ಲಾಟ್ ಕೊಡದ ಎಸ್.ಬಿ.ಪ್ರಾಪರ್ಟಿಸ್‍ಗೆ ದಂಡ: ಆಯೋಗ ಆದೇಶ
ಸಿ.ಕೆ.ಪಾಳ್ಯದ ಮನೆಯೊಂದರಲ್ಲಿ ಬಾಡಿಗೆಗಿದ್ದ ಸಂಜೆ ಎಂದಿನಂತೆ ಕುಡಿಯಲು ಬಂದಿದ್ದ ವೇಳೆ ಕುಡಿದ ಮತ್ತಿನಲ್ಲಿ ಜಗಳ ವಿಕೋಪಕ್ಕೋಗಿ ಕೊಲೆಯಲ್ಲಿ ಅಂತ್ಯವಾಗಿದೆಯೆಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಮೋಹನ್ ಕುಮಾರ್ ಬನ್ನೇರುಘಟ್ಟ ಇನ್ಸ್ ಪೆಕ್ಟರ್ ಕುಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ನು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.