ಪ್ರೀತ್ಸೆ ಪ್ರೀತ್ಸೆ ಎಂದು ಬಾಲಕಿಯ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ ಬಾಲಕಿಯನ್ನು ಹತ್ಯೆ ಮಾಡಿ ಶವ ಮಣ್ಣಲ್ಲಿ ಮುಚ್ಚಿರುವ ಘಟನೆ ನಡೆದಿದೆ. ಬರಗೂರು ನಿವಾಸಿ ನಿತಿನ್ (23) ಎಂಬಾತ ಕೊಲೆ ಮಾಡಿದ ಪಾಗಲ್ ಪ್ರೇಮಿ.
ಹೊಸಕೋಟೆ (ಫೆ.10): ಪ್ರೀತ್ಸೆ ಪ್ರೀತ್ಸೆ ಎಂದು ಬಾಲಕಿಯ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ ಬಾಲಕಿಯನ್ನು ಹತ್ಯೆ ಮಾಡಿ ಶವ ಮಣ್ಣಲ್ಲಿ ಮುಚ್ಚಿರುವ ಘಟನೆ ನಡೆದಿದೆ. ಬರಗೂರು ನಿವಾಸಿ ನಿತಿನ್ (23) ಎಂಬಾತ ಕೊಲೆ ಮಾಡಿದ ಪಾಗಲ್ ಪ್ರೇಮಿ. 2 ದಿನಗಳ ಹಿಂದೆ ಕಾಣೆಯಾಗಿದ್ದ 15 ವರ್ಷದ ಬಾಲಕಿ ತಾಲೂಕಿನ ಅನುಗೊಂಡನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಕೋಲಾರಜಿಲ್ಲೆ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ಬಾಲಕಿ ಕೊಲೆಯಾದ ನತದೃಷ್ಟೆ. 20 ದಿನಗಳ ಹಿಂದೆ ಶಾಲೆಗೆ ಹೋಗುತ್ತಿ ದ್ದಾಗ ನಿತಿನ್ ಬಾಲಕಿಗೆ ಚುಡಾಯಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಿತಿನ್ ಬಾಲಕಿ ಮೇಲೆ ಹಲ್ಲೆ ಮಾಡಿದ್ದ.
ಈ ವಿಚಾರ ಬಾಲಕಿಯು ಪೋಷಕರಿಗೆ ತಿಳಿಸಿ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಎರಡು ಗ್ರಾಮದವರು ಪರಸ್ಪರ ಮಾತು ಕತೆಯಿಂದ ರಾಜಿ ಮಾಡಿಕೊಂಡಿದರು. ಇದಾದ ಮೂರು ದಿನದ ಬಳಿಕ ನಂದಿನಿ ನಾಪತ್ತೆಯಾಗಿದ್ದು, ಹೊಸಕೋಟೆ ತಾಲೂಕಿನ ಬಾಣಾರ ಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದಳು. ಬಾಲಕಿ ಹಿಂದೆ ಬಿದ್ದಿದ್ದ ನಿತಿನ್ ಆಕೆಯನ್ನು ಕೊಲೆಗೈದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆತನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
undefined
ದಲಿತ ಸಂಘಟನೆಗಳ ಪ್ರತಿಭಟನೆ: ಹತ್ಯೆ ಆದ ದಲಿತ ಕುಟುಂಬಕ್ಕೆ ನ್ಯಾಯದೊರಕಿಸಿ ಕೊಡುವಂತೆ ದಲಿತ ಸಂಘಟನೆಗಳ ವತಿ ಯಿಂದ ದೊಮ್ಮಲೂರು ಮುಖ್ಯರಸ್ತೆ ಯಲ್ಲಿ ಪ್ರತಿಭಟನೆಯನ್ನು ನಡೆಸಿ, ಪ್ರಕರ ಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದವು.
ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಸ್ತ್ರೀ ಸಂಘಗಳಿಂದ ಹಣ ಸುಲಿಗೆ?: ಅಸಲಿಗೆ ಆಗಿದ್ದೇನು?
ಮೂವರು ಆರೋಪಿಗಳ ಸೆರೆ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಟಿಪ್ಪರ್ ಲಾರಿ ಚಾಲಕನ್ನು ಕೊಲೆ ಮಾಡಿ ಪರಾರಿಯಾಗಿದ್ದ 3 ಮಂದಿ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ನಾಗೇಂದ್ರಕುಮಾರ್(27), ಬೆಂಗಳೂರಿನ ಆಶೋಕನಗರ ನಿವಾಸಿ ಖೈಸರ್‌ಪಾಷ (30), ಪತ್ನಿ ರಬಿಯಾ (26)ಳನ್ನು ಬಂಧಿಸಲಾಗಿದೆ.
ಫೆ.1ರಂದು ರಾತ್ರಿ 11 ಗಂಟೆ ವೇಳೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಎಪಿಎಂಸಿ ಮಾರುಕಟ್ಟೆಯ ರಸ್ತೆಯಲ್ಲಿ ಸೆಂಚುರಿ ಪಾರ್ಕ್ ಬಡಾವಣೆ ಬಳಿ ಲಾರಿ ಚಾಲಕನನ್ನು ಇಬ್ಬರು ಲಾಂಗ್‌ನಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಸ್ಥಳೀಯರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದರು. ಇದೀಗ ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.