Gadag Crime: ಶಾಲೆಯಲ್ಲಿಯೇ 4ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಅತಿಥಿ ಶಿಕ್ಷಕ

By Sathish Kumar KHFirst Published Dec 19, 2022, 2:07 PM IST
Highlights

ಶಾಲೆಯಲ್ಲಿ ಪಾಠ ಮಾಡಲೆಂದು ನಿಯೋಜನೆ ಮಾಡಿಕೊಂಡಿರುವ ಅತಿಥಿ ಶಿಕ್ಷನೊಬ್ಬ ಪಾಠ ಮಾಡುವುದನ್ನು ಬಿಟ್ಟು 4ನೇ ತರಗತಿ ವಿದ್ಯಾರ್ಥಿಯನ್ನು ಶಾಲಾ ಆವರಣದಲ್ಲಿಯೇ ಹೊಡೆದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. 

ಗದಗ (ಡಿ.19): ಶಾಲೆಯಲ್ಲಿ ಪಾಠ ಮಾಡಲೆಂದು ನಿಯೋಜನೆ ಮಾಡಿಕೊಂಡಿರುವ ಅತಿಥಿ ಶಿಕ್ಷನೊಬ್ಬ ಪಾಠ ಮಾಡುವುದನ್ನು ಬಿಟ್ಟು 4ನೇ ತರಗತಿ ವಿದ್ಯಾರ್ಥಿಯನ್ನು ಶಾಲಾ ಆವರಣದಲ್ಲಿಯೇ ಹೊಡೆದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಭರತ್ (10) ಮೃತಪಟ್ಟ ಬಾಲಕನಾಗಿದ್ದಾನೆ. ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತ ವಿದ್ಯಾರ್ಥಿ ಮೇಲೆ ಪಿಕಾಸಿ (ಗುದ್ದಲಿ)ಯಿಮದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ನೋರ್ವ ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಆದರೆ, ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವಗೊಂಡ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. 

ಕತ್ತರಿಯಿಂದ ಹಲ್ಲೆ ಮಾಡಿ ಬಾಲಕಿಯನ್ನು ಮೊದಲ ಮಹಡಿಯಿಂದ ಎಸೆದ ಶಿಕ್ಷಕಿ

ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ ಶಾಲೆಯಲ್ಲಿ ಭಯ: ಇನ್ನು ಅತಿಥಿ ಶಿಕ್ಷಕನ ಹುಚ್ಚಾಟಕ್ಕೆ ಹದ್ಲಿ ಗ್ರಾಮದ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಇನ್ನು ಹಲ್ಲೆ ಮಾಡುವುದನ್ನು ಬಿಡಿಸಲು ಹೋದ ಸರ್ಕಾರಿ ಶಾಲೆಯ ಸಹ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ. ಕೂಡಲೇ ಇವರು ಮಕ್ಕಳನ್ನು ಶಾಲೆ ತರಗತಿಯಲ್ಲಿ ಭಯಭೀತರಾಗಿದ್ದ ಮಕ್ಕಳನ್ನು ಹೊರಗೆ ಕಳುಹಿಸಿ ಗ್ರಾಮಸ್ಥರನ್ನು ಸಹಾಯಕ್ಕೆ ಕರೆದಿದ್ದಾರೆ. ನಂತರ ಗ್ರಾಮಸ್ಥರು ಬಂದು ಅತಿಥಿ ಶಿಕ್ಷಕನ ಹುಚ್ಚಾಟವನ್ನು ನಿಯಂತ್ರಣ ಮಾಡಿದ್ದಾರೆ. ಕೂಡಲೇ ಆಂಬುಲೆನ್ಸ್‌ ಗೆ ಕರೆ ಮಾಡಿ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ ಬಾಲಕ ಮತ್ತು ತೀವ್ರ ಗಾಯಗೊಂಡಿರುವ ಅತಿಥಿ ಶಿಕ್ಷಕಿಯರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 

ದೆಹಲಿಯಲ್ಲೂ ಇಂತಹ ಘಟನೆ ವರದಿ: ಕಳೆದ ಮೂರು ದಿನಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಶಿಕ್ಷಕಿ ಮೊದಲು ಕತ್ತರಿಯಿಂದ (scissors) ಹಲ್ಲೆ ಮಾಡಿ ನಂತರ ಆಕೆಯನ್ನು ಮೊದಲನೇ ಮಹಡಿಯಿಂದ ಕೆಳಗೆ ಎಸೆದಿದ್ದಾಳೆ. ಮೊದಲ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ದೆಹಲಿಯ ನಗರ ನಿಗಮದ ಬಾಲಿಕ ವಿದ್ಯಾಲಯದಲ್ಲಿ (Delhi Nagar Nigam Balika Vidyalaya) ಬೆಳಗ್ಗೆ 11.15ರ ಸುಮಾರಿಗೆ ಈ ಆಘಾತಕಾರಿ ಘಟನೆ ನಡೆದಿದೆ. ಹೀಗೆ ಶಿಕ್ಷಕಿಯಿಂದ ಹಲ್ಲೆಗೊಳಗಾದ ಬಾಲಕಿಯನ್ನು 5ನೇ ತರಗತಿಯ ವಂದನಾ (Vandana) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಗೀತಾ ದೇಶ್ವಾಲ್ ( Gita Deshwal) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. 

ಎರಡು ಕತ್ತರಿಗಳಿಂದ ಶಿಕ್ಷಕಿ ಗೀತಾ ಬಾಲಕಿ ವಂದನಾ (Vandana) ಮೇಲೆ ಹಲ್ಲೆ ಮಾಡಿದ್ದಾಳೆ ಅಲ್ಲದೇ ಆಕೆಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳಿದ್ದಾಳೆ. ಈ ವೇಳೆ ಸಹ ಶಿಕ್ಷಕಿ ರಿಯಾ ಮಧ್ಯಪ್ರವೇಶಿಸಿ ಶಿಕ್ಷಕಿಯನ್ನು ತಡೆಯಲು ಯತ್ನಿಸಿದ್ದರಾದರೂ ಅಷ್ಟರಲ್ಲಾಗಲೇ ಶಿಕ್ಷಕಿ ಆಕೆಯನ್ನು ಮಹಡಿಯಿಂದ ಕೆಳಗೆ ಎಸೆದಾಗಿತ್ತು. ಬಾಲಕಿ ಕೆಳಗೆ ಬಿದ್ದಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಜೊತೆಗೆ ಬಾಲಕಿಯನ್ನು ಸಮೀಪದ ಬರ ಹಿಂದೂ ರಾವ್ (Bara Hindu Rao hospital) ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಲ್ಲಿ ಬಾಲಕಿಗೆ ಗಾಯಗಳಾಗಿದ್ದು, ಬಾಲಕಿಗೆ ಸಿಟಿ ಸ್ಕ್ಯಾನ್ (CT scan) ಮಾಡಲಾಗಿದೆ. ಬಾಲಕಿ ಜೀವಾಪಾಯದಿಂದ ಪಾರಾಗಿದ್ದು, ಸ್ಥಿತಿ ಸ್ಥಿರವಾಗಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ. 

click me!