ಬೆಳಗಾವಿ: ವ್ಯಕ್ತಿ ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲೆತ್ನಿಸಿದ ಪ್ರಕರಣ, 6 ಮಂದಿ ಅರೆಸ್ಟ್

By Kannadaprabha NewsFirst Published Jun 6, 2024, 9:31 PM IST
Highlights

ಆರೋಪಿ ಬಸವರಾಜ ಬಗವತಿಯನ್ನು ಪೊಲೀಸರು ವಿಚಾರಿಸಿದ ವೇಳೆ ವೈಯಕ್ತಿಕ ದ್ವೇಷದಿಂದ ವಿರೂಪಾಕ್ಷ ಹರ್ಲಾಪುರ ಅವರಿಗೆ ಕಾರು ಹಾಯಿಸಿ ಕೊಲೆ ಮಾಡಿ ಕಾರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುವುದಾಗಿ ಹೇಳಿದ್ದಾನೆ. 

ಬೆಳಗಾವಿ(ಜೂ.06):  ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಸಂಚಾರ ಮತ್ತು ಎಪಿಎಂಸಿ ಠಾಣೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಬಿಮ್ಸ್‌ ಆಸ್ಪತ್ರೆ ಎದುರಿಗೆ ಮೇ 30 ರಂದು ನಡೆದ ರಸ್ತೆ ಅಪಘಾತದಲ್ಲಿ ಧಾರವಾಡ ವನಶ್ರೀ ನಗರದ ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪುರ (60) ಮೃತಪಟ್ಟಿದ್ದರು. ವಾಹನ ಚಾಲಕ ಅಪಘಾತದ ಬಳಿಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದ. ಈ ಪ್ರಕರಣ ಸಂಬಂಧ ಶಂಕಿತ ಆರೋಪಿ ಮಹೇಶ ಸಿದ್ರಾಮ ಸುಂಕದ (24) ಎಂಬುವರನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಇದು ಪೂರ್ವ ನಿಯೋಜಿತ ಕೃತ್ಯ ಎಂಬುವುದು ಗೊತ್ತಾಗಿದೆ. 

Latest Videos

ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿತ..!

ಬೆಳಗಾವಿಯ ಮಾಳಮಾರುತಿ ಬಡಾವಣೆಯ ಬಸವರಾಜ ಬಗವತಿ (50), ಕಾಂಗ್ರೆಸ್‌ ಕೆ.ಎಚ್‌ ನಿವಾಸಿಗಳಾದ ಪ್ರಕಾಶ ರಾಠೋಡ (41), ರವಿ ಕುಂಬರಗಿ (28), ಸಚಿನ ಪಾಟೀಲ (24) ಮತ್ತು ರಾಮ ವಂಟಮುರಿ (28) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ರಾಮಾ ಪಾಟೀಲ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.

ಆರೋಪಿ ಬಸವರಾಜ ಬಗವತಿಯನ್ನು ಪೊಲೀಸರು ವಿಚಾರಿಸಿದ ವೇಳೆ ವೈಯಕ್ತಿಕ ದ್ವೇಷದಿಂದ ವಿರೂಪಾಕ್ಷ ಹರ್ಲಾಪುರ ಅವರಿಗೆ ಕಾರು ಹಾಯಿಸಿ ಕೊಲೆ ಮಾಡಿ ಕಾರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುವುದಾಗಿ ಹೇಳಿದ್ದಾನೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!