ಸುರೇಶ್ ಮೂಲಿಮನಿ ಬಿದ್ದು ಸತ್ತಿಲ್ಲ.. ಯಾರು ಕೊಲೆ ಮಾಡಿದ್ದಾರೆ ಎಂದು ತನಿಖೆ ಮಾಡಿದಾಗ ಸತ್ಯ ಹೊರಬಂದಿದೆ.. ಆಗಲೇ ಈ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯಾದ ಸುರೇಶ್ ನ ಮಗ ತರುಣ್ ಸ್ನೇಹಿತ ಸುಬ್ರಹ್ಮಣ್ಯ ಕೊಲೆ ಮಾಡಿರೋದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ(ಜು.19): ನಾಲ್ಕು ದಿನದ ಹಿಂದೆ ಆ ಏರಿಯಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವೊಂದು ಪತ್ತೆಯಾಗಿತ್ತು.. ಆರಂಭದಲ್ಲಿ ಕುಡಿದ ಮತ್ತಿನಲ್ಲಿ ಮಳೆಯಲ್ಲಿ ಜಾರಿ ಬಿದ್ದು ಅನಾಹುತವಾಗಿರಬಹು ಅಂತಾ ಎಲ್ರು ಅನ್ಕೊಂಡಿದ್ರು.. ಮನೆಯವ್ರೂ ಬಿದ್ದು ಸತ್ತೊಗಿದಾರೆ ಅನ್ಕೊಂಡೆ ಪೊಲೀಸರ ಎದ್ರು ಹೇಳಿಕೆ ಕೊಟ್ಟಿದ್ರು. ಆದ್ರೆ, ಪೊಲೀಸರ ತನಿಖೆ ವೇಳೆ ಎಲ್ಲವೂ ಉಲ್ಟಾ ಆಗಿದೆ.. ಗಾಯಗೊಂಡು ಸತ್ತೊಗಿದಾನೆ ಅನ್ಕೊಂಡಿದ್ದ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ..
undefined
ಬುದ್ಧಿ ಹೇಳಿದ್ದಕ್ಕೆ ಮಗನ ಸ್ನೇಹಿತನಿಂದನೇ ನಡೆದಿತ್ತು ಕೊಲೆ..!
ಗದಗ ನಗರದ ತೆಗ್ಗಿನಲಾಟ ನಿವಾಸಿ 50 ವರ್ಷದ ಸುರೇಶ್ ಮೂಲಿಮನಿ ಇದೇ ತಿಂಗಳ 15 ನೇ ತಾರೀಕು ಸೋಮವಾರ ಬಡಾವಣೆ ಬಳಿ ಗಾಯಗೊಂಡು ಬಿದ್ದಿದ್ದ. ರಾತ್ರಿ 10;30 ಸುಮಾರಿಗೆ ಮನೆಯಿಂದ ಆಚೆ ಹೋಗಿದ್ದ ಸುರೇಶ್ ಬಡಾವಣೆ ಎಂಟ್ರನ್ಸ್ ಗೆ ಗಾಯಗೊಂಡು ಬಿದ್ದಿದ್ದ.. ಕುಡಿದ ಮತ್ತಿನಲ್ಲಿ ಕಾಲುಜಾರಿ ಬಿದ್ದು ಗಾಯಗೊಂಡಿರಬಹುದು ಅಂತಾ ಎಲ್ಲರೂ ಊಹಿಸಿದ್ರು. ಕೂಡ್ಲೆ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡ್ಲಾಗ್ತಿತ್ತು.. ನಂತ್ರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೂ ದಾಖಲಿಸಲಾಗಿತ್ತು.. ಆದ್ರೆ, ಚಿಕಿತ್ಸೆ ಫಲಿಸದೇ 16 ನೇ ತಾರೀಕು ಮಂಗಳವಾರ ಸುರೇಶ್ ಮೃತಪಟ್ಟಿದ್ರು.. ಸುರೇಶ್ ಗಾಯಗೊಂಡಿದ್ರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ತನಿಖೆ ನಡೆಸಿದ್ರು.. ಸ್ಥಳೀಯ ಯುವಕರಿಂದಲೂ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆ ಕೇಸ್ ಗೆ ಹೊಸ ತಿರುವು ಸಿಕ್ಕಿದೆ ಎಂದು ಗದಗ ಎಸ್ ಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.
ಹುಬ್ಬಳ್ಳಿ: ತಂದೆಯನ್ನೇ ಕೊಂದ ಪಾಪಿ ಮಗ..!
ಇನ್ನೂ ಸುರೇಶ್ ಮೂಲಿಮನಿ ಬಿದ್ದು ಸತ್ತಿಲ್ಲ.. ಯಾರು ಕೊಲೆ ಮಾಡಿದ್ದಾರೆ ಎಂದು ತನಿಖೆ ಮಾಡಿದಾಗ ಸತ್ಯ ಹೊರಬಂದಿದೆ.. ಆಗಲೇ ಈ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯಾದ ಸುರೇಶ್ ನ ಮಗ ತರುಣ್ ಸ್ನೇಹಿತ ಸುಬ್ರಹ್ಮಣ್ಯ ಕೊಲೆ ಮಾಡಿರೋದು ಪೊಲೀಸ ತನಿಖೆಯಿಂದ ಬಹಿರಂಗವಾಗಿದೆ.. ಸುಬ್ರಹ್ಮಣ್ಯ ಜೊತೆ ಓಡಾಡ್ಬಾಡ ಅಂತಾ ಸುರೇಶ್ ಮಗ ತರುಣ್ ಗೆ ಹೇಳುತ್ತಿದ್ದನಂತೆ.. ಇದೇ ವಿಷಯ ಸುಬ್ರಹ್ಮಣ್ಯಗೆ ಗೊತ್ತಾಗಿ ಕುದ್ದು ಹೋಗಿದ್ದ.. 15 ನೇ ತಾರೀಕು ಕುಡಿದ ಮತ್ತಿನಲ್ಲಿ ಸುಬ್ರಹ್ಮಣ್ಯ ಸುರೇಶ್ ಜೊತೆ ಗಲಾಟೆ ತೆಗೆದಿದ್ದ.. ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ..
ಮಗ ಉಡಾಳ ಸ್ನೇಹಿತನ ಸಹವಾಸ ಮಾಡಿ ಹಾಳಾಗಬಾರದು ಎಂದು ಬುದ್ಧಿವಾದ ಹೇಳಿದಕ್ಕೆ ತಂದೆ ಹೆಣವಾಗಿದ್ದಾನೆ.. ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ಮುಚ್ಚಿ ಹೊಗ್ತಾಯಿತ್ತು.. ಆದ್ರೆ, ಪೊಲೀಸರ ತನಿಖೆಯಿಂದ ಅಸಲಿ ಕಹಾನಿ ಬಹಿರಂಗವಾಗಿದೆ.