ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ರಾಜಸ್ಥಾನ ವಿಶೇಷ ನ್ಯಾಯಾಲಯ ಆಜೀವ ಜೀವಾವಧಿ ಶಿಕ್ಷೆ| ಪತಿ ಎದುರೇ ರೇಪ್ ಮಾಡಿದ್ದ ದುರುಳರಿಗೆ ಜೀವನ ಪರ್ಯಂತ ಜೈಲು
ಜೈಪುರ್(ಅ.07): 2019ರ ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ರಾಜಸ್ಥಾನ ವಿಶೇಷ ನ್ಯಾಯಾಲಯ ಆಜೀವ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
ಅತ್ಯಾಚಾರದ ವಿಡಿಯೋ ಕ್ಲಿಪ್‌ವನ್ನು ಜಾಲತಾಣಗಳಲ್ಲಿ ಹರಡಿದ್ದ 5ನೇ ಆರೋಪಿಗೆ 5 ವರ್ಷಗಳ ಕಾಲ ಸೆರೆವಾಸವನ್ನು ವಿಧಿಸಿದೆ. ವಿಚಾರಣೆ ವೇಳೆ ರಾಮಾಯಣ ಮತ್ತು ಮಹಾಭಾರತವನ್ನು ಉಲ್ಲೇಖಿಸಿರುವ ಕೋರ್ಟ್, ಈ ಕೃತ್ಯ ರಾವಣ ‘ಸೀತಾಪಹರಣ’ ಮಾಡಿದ್ದಕ್ಕಿಂತ ಮತ್ತು ದುರ್ಯೋಧನ ದ್ರೌಪದಿಯ ‘ವಸ್ತ್ರಾಪಹರಣ’ ಮಾಡಿದ್ದಕ್ಕಿಂತ ಘೋರವಾದುದು ಎಂದಿದೆ.
2019ರ ಏಪ್ರಿಲ್ 26ರಂದು ರಾಜಸ್ಥಾನದ ಥಾನಾಗಜಿ-ಅಲ್ವಾರ್ ಬೈಪಾಸ್‌ನಲ್ಲಿ ಪತಿಯ ಎದುರಲ್ಲೇ ಪತ್ನಿಯ ಮೇಲೆ ನಾಲ್ವರು ದುರುಳರು ಅತ್ಯಾಚಾರ ಎಸಗಿದ್ದರು. ಕೃತ್ಯದ ವಿಡಿಯೋ ಮಾಡಿದ್ದರು. ಕಳೆದ ವರ್ಷ ಮೇ 2ರಂದು ಪ್ರಕರಣದ ಬೆಳಕಿಗೆ ಬಂದು ದೇಶಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಸಂತ್ರಸ್ತೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವರು ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ.