ಘಟನಾ ಸ್ಥಳಕ್ಕೆ ನಗರದ ಮಾರ್ಕೆಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ ಪೊಲೀಸರು
ಬೆಳಗಾವಿ(ಜ.02): ವ್ಯಕ್ತಿಯೋರ್ವನನ್ನು ಬರ್ಬರಗಾಗಿ ಹತ್ಯೆ ಮಾಡಿರುವ ದುರ್ಘಟನೆ ನಗರದ ತಾನಾಜಿ ಗಲ್ಲಿಯ ರೇಲ್ವೆ ಗೇಟ್ ಹತ್ತಿರ ತಡರಾತ್ರಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹನಮಂತ ಶಿವಪ್ಪ ಮಾಡ್ಯಾಳ (37) ಹತ್ಯೆಗೀಡಾದ ವ್ಯಕ್ತಿ. ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ವಾಸವಾಗಿದ್ದ ಈತ, ವಾಹನ ಚಾಲನೆ ಮಾಡುವುದು ಹಾಗೂ ರಸ್ತೆ ಪಕ್ಕದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್‌ಗಳನ್ನು ಆಯುವ ಕೆಲಸ ಮಾಡಿಕೊಂಡು ವಾಸವಾಗಿದ್ದ. ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಬೆಂಗಳೂರಲ್ಲಿ ನ್ಯೂ ಇಯರ್ ರಾತ್ರಿ ಯುವಕನ ಭೀಕರ ಹತ್ಯೆ! ಕಂಠಪೂರ್ತಿ ಕುಡಿದ ಗೆಳೆಯರೇ ಹತ್ಯೆಗೈದು ಪರಾರಿ!
ಘಟನಾ ಸ್ಥಳಕ್ಕೆ ನಗರದ ಮಾರ್ಕೆಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.