ದಾವಣಗೆರೆ: ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಹತ್ಯೆ, ಕಾರಣ ನಿಗೂಢ?

By Girish Goudar  |  First Published Mar 23, 2023, 8:08 PM IST

ದಾವಣಗೆರೆ ನಗರದ ಎಸ್.ಎಸ್.ಬಡಾವಣೆ ರಿಂಗ್ ರಸ್ತೆಯ ಆಫೀರ್ಸ್‌ ಕ್ಲಬ್ ಸಮೀಪ ನಡೆದ ಘಟನೆ. 


ವರದಿ: ವರದರಾಜ್ 

ದಾವಣಗೆರೆ(ಮಾ.23):  ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಎಸ್.ಎಸ್.ಬಡಾವಣೆ ರಿಂಗ್ ರಸ್ತೆಯ ಆಫೀರ್ಸ್‌ ಕ್ಲಬ್ ಸಮೀಪ ಇಂದು(ಗುರುವಾರ) ಬೆಳಗಿನ ಜಾವ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಮಹಾಂತೇಶ್ ಪುಟ್ಟಪ್ಪ ಚೌರದ (35) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ.  

Tap to resize

Latest Videos

ಪತ್ನಿಯ ತವರು ಮನೆಯಾದ ದಾವಣಗೆರೆಯ ಬುದ್ಧ ಬಸವ ನಗರಕ್ಕೆ ಮಹಾಂತೇಶ್ ಆಗಾಗ ಬರುತ್ತಿದ್ದ. ಈತ ಮದ್ಯ ವ್ಯಸನಿಯಾಗಿದ್ದು, ಅದೇ ರೀತಿ ಯುಗಾದಿ ಹಬ್ಬಕ್ಕೆ ಬಂದು ಆತ ಹತ್ಯೆಯಾಗಿದ್ದಾನೆ. ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 

ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್‌ ಚೋರರು..!

ಮೃತನ ಪ್ಯಾಂಟ್ ಜೇಬಿನಲ್ಲಿ ರೈಲ್ವೆ ಟಿಕೆಟ್‌

ಘಟನಾ ಸ್ಥಳಕ್ಕೆ ವಿದ್ಯಾನಗರ ಪಿಎಸ್‌ಐ ರೂಪ ತೆಂಬದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಪತ್ತೆಗಾಗಿ ಶಾಮನೂರು ರಸ್ತೆಯ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಯುತ್ತಿದೆ. ಅಲ್ಲದೇ, ಈತ ಸಣ್ಣಪುಟ್ಟ ಕಳ್ಳತನ ಮಾಡಿದ್ದು, ಆತನ ವಿರುದ್ಧ ಹಾವೇರಿ ಪೊಲೀಸ್ ಠಾಣೆಯಲ್ಲಿ 109 ರಡಿ ಒಂದು ಪ್ರಕರಣ ದಾಖಲಾಗಿದೆ. ಮೃತನ ಪ್ಯಾಂಟ್ ಜೇಬಿನಲ್ಲಿ ರೈಲ್ವೆ ಟಿಕೆಟ್ ಪತ್ತೆಯಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!