ನೆಲಮಂಗಲ: ಡಾಬಾ ಬಳಿ ವಾಹನ ನಿಲ್ಲಿಸುವ ವಿಚಾರಕ್ಕೆ ಗಲಾಟೆ, ರಾಡ್‌ನಿಂದ ಹೊಡೆದು ವ್ಯಕ್ತಿಯ ಹತ್ಯೆ..!

By Girish Goudar  |  First Published Sep 3, 2024, 4:00 PM IST

ವಾಹನ ನಿಲ್ಲಿಸುವ ವಿಚಾರಕ್ಕೆ ನಡೆದ ಗಲಾಟೆ ನಡೆದಿದ್ದು ಈ ವೇಳೆ ಬೆಂಗಳೂರು ಉತ್ತರ ತಾಲೂಕಿನ ಶ್ಯಾನಬೋಗನಹಳ್ಳಿ ನಿವಾಸಿ ಮಹೇಶ್ ಎಂಬಾತ ಪ್ರದೀಪ್ ತಲೆಗೆ ಜ್ಯಾಕ್ ರಾಡ್‌ನಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಮಹೇಶ್ ಜ್ಯಾಕ್ ರಾಡ್‌ನಿಂದ ಪ್ರದೀಪ್ ವ್ಯಕ್ತಿಯ ತಲೆಗೆ ಹೊಡೆದಿದ್ದನು. ತಕ್ಷಣ ಅವನ್ನ ಆಸ್ಪತ್ರೆಗೆ ದಾಖಲಿಸಿದರೂ  ಚಿಕಿತ್ಸೆ ಫಲಕಾರಿಯಾಗದೆ ಸಾವವನ್ನಪ್ಪಿದ್ದಾನೆ. 
 


ನೆಲಮಂಗಲ(ಸೆ.03): ವಾಹನ ನಿಲ್ಲಿಸುವ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಕ್ರಾಸ್ ಸಮೀಪದ ಗ್ರೀನ್ ಪಾರ್ಕ್ ಡಾಬಾ ಬಳಿ ಇಂದು(ಮಂಗಳವಾರ) ನಡೆದಿದೆ. ಪ್ರದೀಪ್(29) ಮೃತ ದುರ್ದೈವಿಯಾಗಿದ್ದಾನೆ. 

ವಾಹನ ನಿಲ್ಲಿಸುವ ವಿಚಾರಕ್ಕೆ ನಡೆದ ಗಲಾಟೆ ನಡೆದಿದ್ದು ಈ ವೇಳೆ ಬೆಂಗಳೂರು ಉತ್ತರ ತಾಲೂಕಿನ ಶ್ಯಾನಬೋಗನಹಳ್ಳಿ ನಿವಾಸಿ ಮಹೇಶ್ ಎಂಬಾತ ಪ್ರದೀಪ್ ತಲೆಗೆ ಜ್ಯಾಕ್ ರಾಡ್‌ನಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.  
ಮಹೇಶ್ ಜ್ಯಾಕ್ ರಾಡ್‌ನಿಂದ ಪ್ರದೀಪ್ ವ್ಯಕ್ತಿಯ ತಲೆಗೆ ಹೊಡೆದಿದ್ದನು. ತಕ್ಷಣ ಅವನ್ನ ಆಸ್ಪತ್ರೆಗೆ ದಾಖಲಿಸಿದರೂ  ಚಿಕಿತ್ಸೆ ಫಲಕಾರಿಯಾಗದೆ ಸಾವವನ್ನಪ್ಪಿದ್ದಾನೆ. 

Tap to resize

Latest Videos

undefined

ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕುವಿನಿಂದ ಇರಿದ ಯುವಕ ಪೊಲೀಸರ ವಶ

ಆರೋಪಿ ಮಹೇಶನ ಜೊತೆಯಲ್ಲಿದ್ದ ಬೋರಲಿಂಗ ಮತ್ತು ಸುನೀಲ್‌ನನ್ನ ಪೊಲೀಸರು ವಶಕ್ಕೆ ಪಡೆದಿ ವಿಚಾರಣೆ ನಡೆಸುತ್ತಿದ್ದಾರೆ.  ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತ್ರ ಜಿಲ್ಲಾ ಎಸ್ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!