ಹುಡುಗಿ ಸ್ನಾನದ ವಿಡಿಯೋ ಮಾಡಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟ ಬಾಲಕರು!

By Suvarna News  |  First Published Jun 16, 2020, 4:00 PM IST

ಬಾಲಕಿ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿಕೊಂಡ ಪುಂಡರು/ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್/ ದೈಹಿಕ ಸಂಪರ್ಕಕ್ಕೆ ಒತ್ತಾಯ/ ಮನನೊಂದ ಬಾಲಕಿ ಆತ್ಮಹತ್ಯೆ ಯತ್ನ


ವೆಲ್ಲೋರ್(ಜೂ. 16)  ಇದೊಂದು ಆಘಾತಕಾರಿ ಪ್ರಕರಣ. 15 ವರ್ಷದ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯ ಚಿತ್ರಿಸಿಕೊಂಡು ದೈಹಿಕ ಸಂಪರ್ಕಕ್ಕೆ ಬರಲು ಮೂವರು ಹುಡುಗರು ಒತ್ತಾಯ ಮಾಡಿದ್ದಾರೆ. ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.

ಶನಿವಾರ ನಡೆದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶೇ. 90 ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Tap to resize

Latest Videos

ಸನ್ಯಾಸಿ ಮನೆಯಲ್ಲಿ ಸಿಕ್ಕ ಅಶ್ಲೀಲ ಭಂಡಾರ ಕಂಡು ದಂಗಾದ ಪೊಲೀಸರು

ಬಾಲಕಿಒಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಅಕ್ಕಪಕ್ಕದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಗೆ ಬ್ಲಾಕ್ ಮೇಲ್ ಮಾಡಿದ ಹುಡುಗರನ್ನು ನೆರೆಮನೆಯ ಕೆ. ಆಕಾಶ್, ಆರ್. ಗಣಪತಿ ಮತ್ತು ಇನ್ನೊಬ್ಬ 17 ವರ್ಷದ ಬಾಲಕ ಎಂದು ಹೇಳಿದ್ದಾಳೆ. ಬಾಲಕರನ್ನು ಬಂಧಿಸಲಾಗಿದೆ.

ನಾನು ಸ್ನಾನ ಮಾಡುತ್ತಿರುವ ದೃಶ್ಯ ಚಿತ್ರೀಕರಣ ಮಾಡಿಕೊಂಡು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಡುವ ಬೆದರಿಕೆ ಹಾಕಿದ್ದರು ಎಂದು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

click me!