ಅತ್ಯಾಚಾರೆವೆಸಗಿ ಮಗಳ ಕೈಗೆ ಗಂಡು ಮಗು ನೀಡಿದ್ದ ತಂದೆಗೆ 12 ವರ್ಷಗಳ ಜೈಲು| ಮಹಮ್ಮದ್ ಉಬೇದುಲ್ಲಾ ಶೇಖ್ ಶಿಕ್ಷೆಗೊಳಗಾದ ವ್ಯಕ್ತಿ| ಅತ್ಯಾಚಾರ ನಡೆಸಿದ ವಿಷಯ ಯಾರಿಗಾದರೂ ಹೇಳಿದರೆ ವಿಷ ಹಾಕಿ ಕೊಂದುಬಿಡುವುದಾಗಿಯೂ ಬೆದರಿಕೆ ಹಾಕಿದ್ದ ತಂದೆ|
ಶಿರಸಿ(ಮಾ.17): ತನ್ನ ಸ್ವಂತ ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಆಕೆಯ ಕೈಗೆ ಗಂಡು ಮಗು ನೀಡಿದ್ದ ನಗರದ ಹುಬ್ಬಳ್ಳಿ ರಸ್ತೆಯ ನಿವಾಸಿಗೆ ಕಾರವಾರದ ಹೆಚ್ಚುವರಿ ಮತ್ತು ಸತ್ರ ಎಫ್‌ಟಿಎಸ್‌ಸಿ 1ನೇ ನ್ಯಾಯಾಲಯ 12 ವರ್ಷಗಳ ಜೈಲು ಮತ್ತು 30 ಸಾವಿರ ರು. ದಂಡ ವಿಧಿಸಿದೆ.
ಮಹಮ್ಮದ್ ಉಬೇದುಲ್ಲಾ ಶೇಖ್ ಶಿಕ್ಷೆಗೊಳಗಾದ ವ್ಯಕ್ತಿ. ಆರೋಪಿ 2018ರ ಜೂನ್ ತಿಂಗಳಿನಲ್ಲಿ ಈ ಕೃತ್ಯ ನಡೆಸಿದ್ದ. ಅತ್ಯಾಚಾರ ನಡೆಸಿದ ವಿಷಯವನ್ನು ಯಾರಿಗಾದರೂ ಹೇಳಿದರೆ ವಿಷ ಹಾಕಿ ಕೊಂದುಬಿಡುವುದಾಗಿಯೂ ಬೆದರಿಕೆ ಹಾಕಿದ್ದ. ಆದರೆ, ಮಗಳು ಗರ್ಭಿಣಿಯಾದಾಗ ವಿಷಯ ಬಹಿರಂಗಗೊಂಡಿತ್ತು. ಈ ಕುರಿತು ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಕಠಿಣ ಶಿಕ್ಷೆ
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡಿ ಈ ಶಿಕ್ಷೆ ನೀಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸುಭಾಷ ಕೈರನ್ ವಾದ ಮಂಡಿಸಿದ್ದರು.