ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾಗೆ ಸವಾಲಿನ ಗುರಿ ನೀಡಿದ ಭಾರತ

By Suvarna NewsFirst Published Feb 24, 2020, 6:13 PM IST
Highlights

ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡವು 142 ರನ್ ಬಾರಿಸಿದೆ. ಶೆಫಾಲಿ ವರ್ಮಾ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಪರ್ತ್(ಫೆ.24) ಶೆಫಾಲಿ ವರ್ಮಾ(39) ಹಾಗೂ ಜೆಮಿಮಾ ರೋಡ್ರಿಗಜ್‌(34) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ 6 ವಿಕೆಟ್ ಕಳೆದುಕೊಂಡು 142 ರನ್ ಕಲೆ ಹಾಕಿದೆ. ಈ ಮೂಲಕ ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿದೆ.

India set Bangladesh 143 to win.

In the 2018 Asia Cup, Bangladesh chased down 142 against India, their highest T20I chase to date.

Will we see history made tonight? |

SCORE 📝 https://t.co/xD9crB4phZ pic.twitter.com/kepKCo5dfv

— T20 World Cup (@T20WorldCup)

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮಂಧನಾ ವಿಶ್ರಾಂತಿ ಪಡೆದಿದ್ದರಿಂದ ಭಾರತ ಪರ ತಾನಿಯಾ ಭಾಟಿಯಾ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಭಾಟಿಯಾ ಕೇವಲ 2 ರನ್ ಬಾರಿಸಿ ಸ್ಟಂಪೌಟ್ ಆದರು. ಆದರೆ ಆ ಬಳಿಕ ಜತೆಯಾದ ಶೆಫಾಲಿ ವರ್ಮಾ ಹಾಗೂ ಜೆಮಿಮಾ ರೋಡ್ರಿಗಜ್‌ ಆಕರ್ಷಕ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಮತ್ತೊಮ್ಮೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಂತೆ ಸ್ಟೋಟಕ ಬ್ಯಾಟಿಂಗ್ ನಡೆಸಿದ 16 ವರ್ಷದ ಶೆಫಾಲಿ ವರ್ಮಾ, ಕೇವಲ 17 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ 39 ರನ್ ಚಚ್ಚಿದರು. ಇನ್ನು ಜೆಮಿಮಾ ರೋಡ್ರಿಗಜ್‌ 37 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿ ರನೌಟ್ ಆದರು.

This is now the highest score of this edition of the , beating the 132 India made against Australia in the first game of the tournament 🔝

SCORE 📝 https://t.co/xD9crB4phZ pic.twitter.com/NfqKmAgD2e

— T20 World Cup (@T20WorldCup)

 
ಕೊನೆಯಲ್ಲಿ ಅಬ್ಬರಿಸಿದ ವೇದಾ: ಇನ್ನು ಕೊನೆಯಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ 11 ಎಸೆತಗಳಲ್ಲಿ 4 ಬೌಂಡರಿ ಸಹಿತ 20 ರನ್ ಬಾರಿಸಿ ಅಜೇಯರಾಗುಳಿದರು. ಈ ಮೂಲಕ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. 

click me!