ICC T20 ವಿಶ್ವಕಪ್ ವೇಳಾಪಟ್ಟಿಯಂತೆಯೇ ನಡೆಯುತ್ತಾ?

By Suvarna NewsFirst Published Apr 7, 2020, 10:45 AM IST
Highlights

ಕೊರೋನಾ ಭೀತಿಯಿಂದಾಗಿ ಈಗಾಗಲೇ ಹಲವಾರು ಕ್ರೀಡಾ ಟೂರ್ನಿಗಳು ರದ್ದಾಗಿವೆ. ಇನ್ನು ಐಸಿಸಿ ಟಿ20 ವಿಶ್ವಕಪ್ ನಡೆಯುವುದು ಅನುಮಾನ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಕುರಿತಂತೆ ಐಸಿಸಿ ಕೊನೆಗೂ ಸ್ಪಷ್ಟನೆ ನೀಡಿದೆ.  

ದುಬೈ(ಏ.07): ಇದೇ ವರ್ಷ ನಿಗದಿಪಡಿಸಿರುವ ಐಸಿಸಿ ಟಿ20 ವಿಶ್ವಕಪ್‌ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಸೋಮವಾರ ಹೇಳಿದೆ. 

ಕೊರೋನಾದಿಂದ ಐಸಿಸಿ ಟಿ20 ವಿಶ್ವಕಪ್ ಮುಂದಕ್ಕೆ..?

ಕೊರೋನಾದಿಂದಾಗಿ ಈಗಾಗಲೇ ಸಾಕಷ್ಟು ಕ್ರೀಡಾ ಚಟುವಟಿಕೆಗಳು ರದ್ದು ಹಾಗೂ ಮುಂದೂಡಲ್ಪಟ್ಟಿದ್ದವು. 2020ರ ಟಿ20 ವಿಶ್ವಕಪ್‌ 2022ಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದೀಗ ಅದು ಬಗೆಹರಿದಂತಾಗಿದೆ. ಅಕ್ಟೋಬರ್‌ 18 ರಿಂದ ನವೆಂಬರ್‌ 15ರವರೆಗೆ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಆಸ್ಪ್ರೇಲಿಯಾ ಆತಿಥ್ಯ ವಹಿಸಿದ್ದು, ಪಂದ್ಯಗಳು 7 ಕ್ರೀಡಾಂಗಣಗಳಲ್ಲಿ ನಡೆಯಲಿದೆ ಎಂದು ಐಸಿಸಿ ಹೇಳಿದೆ.

ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

2016ರಲ್ಲಿ ನಡೆದ ಕೊನೆಯ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ಕೋಲ್ಕತಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ರೋಚಕವಾಗಿ ಮಣಿಸಿದ್ದ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ ತಂಡವು ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ನಿಗದಿತ ವೇಳಾಪಟ್ಟಿಯಂತೆಯೇ ಟಿ20 ವಿಶ್ವಕಪ್ ಆರಂಭವಾದರೆ ಭಾರತ ತಂಡವು ನವೆಂಬರ್ 24ರಣದಯ ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ನವೆಂಬರ್ 15ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಮೆಲ್ಬೊರ್ನ್ ಮೈದಾನ ಆತಿಥ್ಯ ವಹಿಸಲಿದೆ
 

click me!