ನತಾಶಾ ಔಟ್, ಬಾಲಿವುಡ್ ಹಾಟ್ ಬೆಡಗಿ ಇನ್: ಹೊಸ ಸಂಬಂಧ ಬೆಳೆಸಲು ರೆಡಿಯಾದ್ರಾ ಹಾರ್ದಿಕ್ ಪಾಂಡ್ಯ..!

By Naveen Kodase  |  First Published Jul 20, 2024, 3:40 PM IST

ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೆಸರಿನ ಜತೆಗೆ ಇದೀಗ ಬಾಲಿವುಡ್‌ನ ಪ್ರಖ್ಯಾತ ನಟಿಯ ಹೆಸರು ಥಳುಕು ಹಾಕಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯಾ ಮೂಲದ ಮಾಡೆಲ್, ಬಾಲಿವುಡ್ ನಟಿ ನತಾಶಾ ಸ್ಟ್ಯಾಂಕೋವಿಚ್ ನಡುವಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಬಿದ್ದಿದೆ. ಈ ವಿಚಾರವನ್ನು ಸ್ವತಃ ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಘೋಷಿಸಿದ್ದರು. ಕಳೆದ ಕೆಲ ದಿನಗಳಿಂದಲೂ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಬೇರೆ ಬೇರೆಯಾಗಲಿದ್ದಾರೆ ಎನ್ನುವ ಗುಸು ಗುಸು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಇದೀಗ ಪಾಂಡ್ಯ ಈ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ. 

ಹೌದು, ಪಾಂಡ್ಯ ಈ ಎರಡು ದಿನಗಳ ಹಿಂದಷ್ಟೇ ತಾವು ಹಾಗೂ ನತಾಶಾ ಪರಸ್ಪರ ಸಮ್ಮತಿಯೊಂದಿಗೆ ಬೇರ್ಪಡುತ್ತಿದ್ದೇವೆ. ಮಗ ಅಗಸ್ತ್ಯನನ್ನು ಯಾವುದೇ ಕೊರತೆಯಿಲ್ಲದಂತೆ ನಾವಿಬ್ಬರೂ ಕೋ ಪೇರೆಂಟ್ ಆಗಿ ನೋಡಿಕೊಳ್ಳುತ್ತೇವೆ ಎಂದು ಖಚಿತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಡಿವೋರ್ಸ್ ಪಡೆದು ಕೇವಲ ಎರಡು ದಿನ ಕಳೆಯುವುದರೊಳಗಾಗಿ ಹಾರ್ದಿಕ್ ಪಾಂಡ್ಯ, ಇದೀಗ ಮತ್ತೊಂದು ಬಾಲಿವುಡ್ ಬೆಡಗಿಯ ಜತೆ ಹೊಸ ಸಂಬಂಧ ಬೆಳೆಸಲು ಮುಂದಾದ್ರಾ ಎನ್ನುವ ಅನುಮಾನ ಆರಂಭವಾಗಿದೆ. 

Tap to resize

Latest Videos

'ನಿಮಗೆ ಧೈರ್ಯವಿದ್ರೆ..?': ಸಾನಿಯಾ ಜತೆ ಶಮಿ ಮದುವೆ ಬಗ್ಗೆ ಮೊದಲ ಬಾರಿ ತುಟಿಬಿಚ್ಚಿದ್ದ ಟೀಂ ಇಂಡಿಯಾ ವೇಗಿ..!

ಹಾರ್ದಿಕ್ ಪಾಂಡ್ಯ ಇದೀಗ ನತಾಶಾ ಅವರಿಂದ ಡಿವೋರ್ಸ್ ಪಡೆದ ಬಳಿಕ ಬಾಲಿವುಡ್ ತಾರೆ ಅನನ್ಯ ಪಾಂಡೆ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಇನ್ನು ಅನನ್ಯ ಪಾಂಡೆ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ.

ಹಾರ್ದಿಕ್ ಪಾಂಡ್ಯ ಹಾಗೂ ಅನನ್ಯ ಪಾಂಡೆ ಒಬ್ಬರನೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲಾರಂಭಿಸಿದ ಬೆನ್ನಲ್ಲೇ ನೆಟ್ಟಿಗರು ಇವರ ಸಂಬಂಧದ ಕುರಿತಂತೆ ಚರ್ಚೆ ಮಾಡಲಾರಂಭಿಸಿದ್ದಾರೆ. ಈ ಮೊದಲು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಸಂದರ್ಭದಲ್ಲೂ ಹಾರ್ದಿಕ್ ಪಾಂಡ್ಯ ಹಾಗೂ ಅನನ್ಯ ಪಾಂಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ಇಬ್ಬರೂ ಬಿಂದಾಸ್ ಆಗಿಯೇ ಸ್ಟೆಪ್ ಹಾಕಿದ್ದರು.

ಪರಸ್ಪರ ಸಮ್ಮತಿಯಿಂದಲೇ ಬೇರ್ಪಟ್ಟ ಪಾಂಡ್ಯ-ನತಾಶಾ: ಮುದ್ದಾದ ಮಗ ಅಗಸ್ತ್ಯ ಜವಾಬ್ದಾರಿ ಯಾರ ಹೆಗಲಿಗೆ?

ಆಧಿತ್ಯ ರಾಯ್ ಕಪೂರ್ ಜತೆ ಪಾಂಡೆ ಬ್ರೇಕಪ್:

ಕೆಲ ತಿಂಗಳುಗಳ ಹಿಂದಷ್ಟೇ ಅನನ್ಯ ಪಾಂಡೆ ಹಾಗೂ ನಟ ಆಧಿತ್ಯ ರಾಯ್ ಕಪೂರ್ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದರು. ಸಾಕಷ್ಟು ಸಮಯದಿಂದ ಈ ಜೋಡಿ ಡೇಟಿಂಗ್ ನಡೆಸಿತ್ತು. ಆದರೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ತುಟಿಬಿಚ್ಚಿರಲಿಲ್ಲ. ಆದರೆ ಕೆಲ ದಿನಗಳ ಹಿಂದಷ್ಟೇ ಅನನ್ಯ ಪಾಂಡೆ, ಆಧಿತ್ಯ ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.

click me!